Green Tea: ಬಿಪಿ ಸಮಸ್ಯೆನಾ? ತೂಕ ಇಳಿಸಬೇಕಾ? ಈ ಗ್ರೀನ್‌ ಟೀ ಕುಡಿಯಿರಿ ಸಾಕು

health benefits of Green Tea

ಗ್ರೀನ್‌ ಟೀ ಸೇವನೆ ಮಾಡುವವರು ಅನೇಕ ಜನ ಇದ್ದಾರೆ. ಇದರಿಂದ ಅನೇಕ ಆರೋಗ್ಯ ಪ್ರಯೋಜನಗಳು ಇದೆ ಎನ್ನಲಾಗುತ್ತದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ, ಇದು ಹೃದಯ, ಮೆದುಳು, ಚರ್ಮ, ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಇದಲ್ಲದೇ, ಕ್ಯಾನ್ಸರ್‌ನಂತಹ ಕಾಯಿಲೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಹಾಗಾದ್ರೆ ಈ ಗ್ರೀನ್‌ ಟೀ (Green Tea) ಆರೋಗ್ಯ ಪ್ರಯೋಜನಗಳೇನು ಎಂಬುದು ಇಲ್ಲಿದೆ.

ಬಿಪಿ ಸಮಸ್ಯೆಗೆ ಪರಿಹಾರ

ಗ್ರೀನ್ ಟೀಯಲ್ಲಿ ಕ್ಯಾಟೆಚಿನ್ಸ್ ಎಂಬ ಪಾಲಿಫಿನಾಲ್ ಇದೆ. ಕ್ಯಾಟೆಚಿನ್‌ಗಳು ಉತ್ಕರ್ಷಣ ನಿರೋಧಕಗಳಾಗಿವೆ, ಅವು ಜೀವಕೋಶಗಳಿಗೆ ಹಾನಿಯಾಗದಂತೆ ತಡೆಯಲು ಮತ್ತು ಗಂಭೀರ ಮತ್ತು ದೀರ್ಘಕಾಲದ ಕಾಯಿಲೆಗಳಿಂದ ರಕ್ಷಿಸಲು ಸಹಾಯ ಮಾಡುತ್ತವೆ. ಗ್ರೀನ್ ಟೀ ಡಯಾಬಿಟೀಸ್ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯಕಾರಿ.

ಹೃದಯದ ಸಮಸ್ಯೆಗೆ ಪರಿಹಾರ ಸಿಗುತ್ತದೆ

ಈ ಗ್ರೀನ್‌ ಟೀ ಹೃದಯ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ ಎನ್ನಲಾಗುತ್ತದೆ. ಈ ವಿಚಾರವಾಗಿ ಅನೇಕ ಅಧ್ಯಯನಗಳು ಸಹ ನಡೆದಿದೆ. ಗ್ರೀನ್‌ ಟೀಯನ್ನ ನಿಯಮಿತವಾಗಿ ಕುಡಿಯುವುದರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ ಮತ್ತು ಹಲವಾರು ಗಂಭೀರ ಹೃದಯ ಸಂಬಂಧಿತ ಕಾಯಿಲೆಗಳನ್ನು ತಡೆಯಬಹುದು. ಮುಖ್ಯವಾಗಿ ಇದು ರಕ್ತದೊತ್ತಡ ಮತ್ತು ಲಿಪಿಡ್‌ಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಹೃದಯ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ.

health benefits of Green Tea

ಕೊಲೆಸ್ಟ್ರಾಲ್‌ ಮಟ್ಟವನ್ನ ಕಡಿಮೆ ಮಾಡುತ್ತದೆ

ಈ ಗ್ರೀನ್‌ ಟೀ ಸೇವನೆ ಮಾಡುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಮತ್ತು ರಕ್ತದೊತ್ತಡವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಇದು ಕೆಟ್ಟ ಕೊಲೆಸ್ಟ್ರಾಲ್ (LDL) ಅನ್ನು ಕಡಿಮೆ ಮಾಡಲು ಮತ್ತು ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಸೂಪರ್‌ ಈಸಿ ಆಲೂ ವೆಜ್‌ ಟೋಸ್ಟ್‌ ರೆಸಿಪಿ

Leave a Reply

Your email address will not be published. Required fields are marked *