Guru Transit: ಏಪ್ರಿಲ್‌ 20ರ ತನಕ ಈ ರಾಶಿಯವರದ್ದೇ ಹವಾ, ಗುರು ಕೃಪೆ ಇವರ ಮೇಲೆ

guru transit in punarvasu lucky to these zodiac sign

ಗುರು ಗ್ರಹವನ್ನ ಜ್ಯೋತಿಷ್ಯದಲ್ಲಿ ಬೃಹಸ್ಪತಿ ಎಂದೂ ಸಹ ಕರೆಯಲಾಗುತ್ತದೆ. ಈ ಗ್ರಹದ ಸಂಚಾರದಲ್ಲಿ ಬದಲಾವಣೆ ಆದರೆ ಅದರ ಪ್ರಭಾವ ಎಲ್ಲಾ ರಾಶಿಗಳ ಮೇಲೂ ಆಗುತ್ತದೆ. ಇದೀಗ ಈಗ ಗ್ರಹವು ತನ್ನದೇ ಪುನರ್ವಸು ನಕ್ಷತ್ರಕ್ಕೆ ಪ್ರವೇಶ ಮಾಡಿದೆ. ಜನವರಿ 30 ರಂದು ಅದು ನಕ್ಷತ್ರಕ್ಕೆ ಪ್ರವೇಶ ಮಾಡಿದ್ದು,  ಏಪ್ರಿಲ್ 20 ರವರೆಗೆ ಗುರು ಗ್ರಹವು (Guru Transit) ಈ ಪುನರ್ವಸು ನಕ್ಷತ್ರದಲ್ಲಿ ಸಂಚರಿಸಲಿದೆ. ಈ ಸಂಚಾರದಿಂದ ಕೆಲ ರಾಶಿಯವರಿಗೆ ಜಾಕ್‌ಪಾಟ್‌ ಹೊಡೆಯುತ್ತಿದ್ದು, ಮುಟ್ಟಿದ್ದು ಚಿನ್ನವಾಗಲಿದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

ಮೇಷ ರಾಶಿ: ನಿಮ್ಮ ಮಾತು ಹೆಚ್ಚು ಪ್ರಭಾವ ಬೀರುತ್ತದೆ. ಜನರು ನಿಮ್ಮಿಂದ ಪ್ರಭಾವಿತರಾಗುತ್ತಾರೆ. ಉದ್ಯೋಗಸ್ಥರಿಗೆ ಹುದ್ದೆ ಮತ್ತು ಪ್ರತಿಷ್ಠೆ ಹೆಚ್ಚಾಗುವ ಸಾಧ್ಯತೆ ಇದೆ. ಸಹೋದ್ಯೋಗಿಗಳ ಬೆಂಬಲ ಸಿಗಲಿದೆ. ಈ ಸಮಯದಲ್ಲಿ, ನೀವು ಅನೇಕ ಕಾರ್ಯಗಳನ್ನು ಕೌಶಲ್ಯದಿಂದ ಮತ್ತು ಬುದ್ಧಿವಂತಿಕೆಯಿಂದ ನಿರ್ವಹಿಸುತ್ತೀರಿ, ಅದು ಮೆಚ್ಚುಗೆ ಪಡೆಯುತ್ತದೆ.

ಮಿಥುನ ರಾಶಿ: ಈ ರಾಶಿಯವರಿಗೆ ಗುರುವಿನಿಂದ ರಾಶಿಯವರಿಗೆ ವಿಶೇಷ ಪ್ರಯೋಜನಗಳು ಸಿಗುತ್ತದೆ. ವ್ಯಾಪಾರದಲ್ಲಿ ಪ್ರಗತಿ ಆಗುತ್ತದೆ ಹಾಗೂ ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಸಹ ಸುಧಾರಿಸುತ್ತದೆ. ವೃತ್ತಿ ಜೀವನದಲ್ಲಿ ಸಹ ಬೆಳವಣಿಗೆ ಆಗುತ್ತದೆ. ಈ ರಾಶಿಯವರಿಗೆ ಕಷ್ಟಗಳಿಂದ ಮುಕ್ತಿ ಸಿಗುತ್ತದೆ. ವೈವಾಹಿಕ ಜೀವನದಲ್ಲಿ ಸಂತೋಷ ಮೂಡುತ್ತದೆ.

ಕನ್ಯಾ ರಾಶಿ: ಮಕ್ಕಳ ಕಡೆಯಿಂದ ಬಹಳ ದಿನಗಳಿಂದ ಕಾಯುತ್ತಿದ್ದ ಸಿಹಿ ಸುದ್ದಿ ಕೇಳಿ ಬರಲಿದ್ದು, ನಿಮ್ಮ ಸಂತೋಷಕ್ಕೆ ಮಿತಿಯೇ ಇರುವುದಿಲ್ಲ. ವ್ಯಾಪಾರಿಗಳಿಗೆ ಅತ್ಯಂತ ಅನುಕೂಲಕರ ಸಮಯ. ಅನಿರೀಕ್ಷಿತ ಲಾಭ ಗಳಿಸುವ ಸಾಧ್ಯತೆ ಇದೆ. ಬಯಸಿದ ಸ್ಥಳಕ್ಕೆ ವರ್ಗಾವಣೆ ಆಗಲಿದ್ದು, ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ.

ಧನಸ್ಸು ರಾಶಿ: ಈ ಸಮಯದ ಉದ್ದಕ್ಕೂ, ಅಂದುಕೊಂಡಿದ್ದ ಕೆಲಸಗಳು ಆಗುತ್ತದೆ ಮನಸ್ಸಿನ ಪ್ರತಿಯೊಂದು ಆಸೆಗಳು ಈಡೇರುತ್ತದೆ. ಕಷ್ಟಗಳಿಗೆ ಪರಿಹಾರ ಸಿಗುತ್ತದೆ. ಆರ್ಥಿಕ ಬಿಕ್ಕಟ್ಟು ನಿವಾರಣೆಯಾಗಲಿದೆ. ಉದ್ಯೋಗ ಮತ್ತು ವ್ಯಾಪಾರ ಕ್ಷೇತ್ರದಲ್ಲಿರುವವರಿಗೆ ದೊಡ್ಡ ಲಾಭವಾಗುತ್ತದೆ. ಸಮಾಜದಲ್ಲಿ ನಿಮ್ಮ ಸ್ಥಾನ ಮತ್ತು ಖ್ಯಾತಿ ಹೆಚ್ಚಾಗುತ್ತದೆ. ಅದೃಷ್ಟ ನಿಮ್ಮ ಕೈ ಹಿಡಿಯುತ್ತದೆ.

ಇದನ್ನೂ ಓದಿ: ಕುಂಭ ರಾಶಿಯಲ್ಲಿ ಒಟ್ಟಿಗೆ 5 ಗ್ರಹಗಳು, ಪಂಚಗ್ರಾಹಿ ಯೋಗದಿಂದ ಹಣೆಬರಹ ಬದಲು

Leave a Reply

Your email address will not be published. Required fields are marked *