Good News: ಬೆಳಗಾವಿ ಜನರಿಗೆ ಬಂಪರ್‌ ನ್ಯೂಸ್‌, ಹೊಸ ರೈಲು ಸೇವೆ ಸದ್ಯದಲ್ಲಿ ಆರಂಭ?

Good News new train may start between Bengaluru belgavi and mumbai

ಬೆಳಗಾವಿ: ಕೊನೆಗೂ ಬೆಳಗಾವಿ ಜಿಲ್ಲೆಯ ಜನರ ಕನಸೊಂದು (Good News) ನನಸಾಗುವತ್ತ ಬಂದಿದ್ದು, ಬೆಂಗಳೂರು ಬೆಳಗಾವಿ-ಮುಂಬೈ ಹೈ-ಸ್ಪೀಡ್ ರೈಲು ಸದ್ಯದಲ್ಲಿ ಆರಂಭ ಆಗುವ ಸಾಧ್ಯತೆ ಇದೆ.

ಕೇಂದ್ರ ಸಚಿವರ ಜೊತೆ ಜಗದೀಶ್ ಶೆಟ್ಟರ್ ಚರ್ಚೆ

ಈ ವಿಚಾರವಾಗಿ ಬೆಳಗಾವಿ ಲೋಕಸಭಾ ಕ್ಷೇತ್ರದ ಸಂಸದ ಜಗದೀಶ್ ಶೆಟ್ಟರ್ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರ ಜೊತೆ ಚರ್ಚೆ ಮಾಡಿದ್ದಾರೆ. ನವದೆಹಲಿಯ ಸಂಸತ್ ಭವನದಲ್ಲಿರುವ ಕೇಂದ್ರ ಸಚಿವರ ಕಚೇರಿಯಲ್ಲಿ ಈ ಚರ್ಚೆ ನಡೆದಿದ್ದು, ಹೊಸ ರೈಲು ಮಾರ್ಗಗಳು ಆರಂಭವಾದರೆ ಪ್ರಯಾಣಿಕರಿಗೆ ಏನೆಲ್ಲಾ ಅನುಕೂಲ ಆಗುತ್ತದೆ ಎಂಬುದನ್ನ ಶೆಟ್ಟರ್‌ ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಈ ಬಾರಿ ಬಜೆಟ್‌ನಲ್ಲಿ ದೇಶದ ಏಳು ನಗರಗಳಿಗೆ ಹೈ-ಸ್ಪೀಡ್ ರೈಲು ಕಾರಿಡಾರ್ ಘೋಷಣೆ ಮಾಡಲಾಗಿದೆ. ಹಾಗಾಗಿ ಬೆಂಗಳೂರು–ಬೆಳಗಾವಿ–ಮುಂಬೈ ಮಾರ್ಗವನ್ನೂ 8ನೇ ಹೈ-ಸ್ಪೀಡ್ ರೈಲು ಕಾರಿಡಾರ್ ವ್ಯಾಪ್ತಿಗೆ ಸೇರಿಸುವಂತೆ ಮನವಿ ಮಾಡಲಾಗಿದೆ ಎನ್ನಲಾಗುತ್ತಿದೆ. ಇದರ ಜೊತೆಗೆ  ಬೆಳಗಾವಿ ಜಿಲ್ಲೆಯ ಪರಕನಟ್ಟಿ–ಗೋಕಾಕ್–ಯಾದವಾಡ ಮಾರ್ಗವಾಗಿ ಬಾಗಲಕೋಟೆ ನಗರವನ್ನು ಸಂಪರ್ಕಿಸುವ ಹೊಸ ರೈಲು ಮಾರ್ಗಕ್ಕೂ ಮನವಿ ಸಲ್ಲಿಕೆ ಮಾಡಲಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಅಭಿವೃದ್ದಿ ಆಗ್ತಿಲ್ಲ: ಬಿವೈ ವಿಜಯೇಂದ್ರ ಆರೋಪ

Leave a Reply

Your email address will not be published. Required fields are marked *