Bread Roll: ಸೂಪರ್‌ ಹೆಲ್ದಿ ಪನೀರ್‌ ಶೇಜ್ವಾನ್‌ ಬ್ರೆಡ್‌ರೋಲ್‌ ರೆಸಿಪಿ

Evening snacks Paneer Schezwan Bread Roll

ಪನೀರ್‌ ಅನೇಕ ಜನರ ಫೇವರೇಟ್‌ ಐಟಮ್‌.  ಮನೆಯಲ್ಲಿ ಪನೀರ್‌ ಒಂದು ಇದ್ರೆ ಸಾಕು ಬೆಳಗಿನ ತಿಂಡಿಯಿಂದ ರಾತ್ರಿ ಊಟದವರೆಗೂ ಏನು ಬೇಕಾದರೂ ಮಾಡಿ ಸವಿಯಬಹುದು. ಅದರಲ್ಲೂ ಸಂಜೆ ಸ್ನ್ಯಾಕ್ಸ್‌ ವಿಚಾರಕ್ಕೆ ಬಂದಾಗ ಇದೊಂದು ವರದಾನ ಎಂದರೆ ತಪ್ಪಾಗಲಾರದು. ಮನೆಯಲ್ಲಿ ಮಕ್ಕಳು ಇದ್ದರಂತೂ ಅವರಿಗೆ ವೆರೈಟಿ ವೆರೈಟಿ ಪನೀರ್‌ ಸ್ನ್ಯಾಕ್ಸ್‌ ಮಾಡಿಕೊಡಬಹುದು. ಇವತ್ತು ಮನೆಯಲ್ಲಿ ಸುಲಭವಾಗಿ ಬ್ರೆಡ್‌ ರೋಲ್‌ (Bread Roll) ಮಾಡೋದು ಹೇಗೆ ಎನ್ನುವುದನ್ನ ಹೇಳಿಕೊಡ್ತೀವಿ. ಇಲ್ಲಿದೆ ಅದರ ಸುಲಭ ರೆಸಿಪಿ.

ಪನೀರ್ ಶೇಜ್ವಾನ್ ಬ್ರೆಡ್ ರೋಲ್ ಮಾಡಲು ಬೇಕಾಗುವ ಸಾಮಗ್ರಿಗಳು ಯಾವುವು?

250 ಗ್ರಾಂ ಪನೀರ್, ಪುಡಿಪುಡಿ ಮಾಡಿಕೊಂಡರೆ ಉತ್ತಮ

1/2 ಕಪ್ ಈರುಳ್ಳಿ, ಸಣ್ಣಗೆ ಕತ್ತರಿಸಿಕೊಳ್ಳಿ

1/2 ಕಪ್ ಕ್ಯಾಪ್ಸಿಕಂ, ಸಣ್ಣಗೆ ಕತ್ತರಿಸಿಕೊಳ್ಳಿ

2 ಚಮಚ ಶೇಜ್ವಾನ್ ಸಾಸ್

1 ಟೀಸ್ಪೂನ್ ಶುಂಠಿ-ಬೆಳ್ಳುಳ್ಳಿ ಪೇಸ್ಟ್

2 ಟೀಸ್ಪೂನ್ ಸೋಯಾ ಸಾಸ್

1-2 ಚಮಚ ಎಣ್ಣೆ

ಉಪ್ಪು, ರುಚಿಗೆ ತಕ್ಕಷ್ಟು

ಕೊತ್ತಂಬರಿ ಸೊಪ್ಪುಗಳು

5-6 ಬ್ರೆಡ್ ಹೋಳುಗಳು

ಎಣ್ಣೆ

ನೀರು

ಪನೀರ್ ಶೇಜ್ವಾನ್ ಬ್ರೆಡ್ ರೋಲ್ ಮಾಡುವ ಸುಲಭ ವಿಧಾನ ಇಲ್ಲಿದೆ

ಬ್ರೆಡ್ ರೋಲ್ ಮಾಡಲು ಮೊದಲು ಹೂರಣವನ್ನ ಮಾಡಿಕೊಳ್ಳಬೇಕು. ಇದಕ್ಕೆ ಮೊದಲು ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಫ್ರೈ ಮಾಡಿಕೊಳ್ಳಿ. ಕೆಲವು ಸೆಕೆಂಡುಗಳ ಕಾಲ ಫ್ರೈ ಮಾಡಿ ಮತ್ತು ಹೆಚ್ಚಿಕೊಂಡಿರುವ ಕ್ಯಾಪ್ಸಿಕಂ ಹಾಗೂ ಈರುಳ್ಳಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.

ಈಗ ಪನೀರ್ ಅನ್ನು ಸೋಯಾ ಸಾಸ್, ಶೇಜ್ವಾನ್ ಸಾಸ್ ಮತ್ತು ಉಪ್ಪಿನ ಜೊತೆ ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ ಕೆಲವು ನಿಮಿಷ ಬೇಯಿಸಿ. ಕೊತ್ತಂಬರಿ ಸೊಪ್ಪಿನಿಂದ ಅಲಂಕಾರ ಮಾಡಿ. ನಿಮಗೆ ಕೊತ್ತಂಬರಿ ಸೊಪ್ಪು ಹಾಕಲು ಇಷ್ಟ ಇಲ್ಲದಿದ್ದರೆ ಬೇಡ.

ಈಗ ಬ್ರೆಡ್ ಸ್ಲೈಸ್‌ಗಳ ಅಂಚುಗಳನ್ನು ಕಟ್‌ ಮಾಡಿ, ಅದನ್ನ ಚಪಾತಿ ಲಟ್ಟಿಸುವ ಲಟ್ಟಣಗೆಯನ್ನ ಬಳಸಿ ಚಪ್ಪಟೆ ಮಾಡಿ. ಒಂದು ಬ್ರೆಡ್‌ ಮಧ್ಯದಲ್ಲಿ ಒಂದು ಚಮಚ ತಯಾರಾದ ಹೂರಣವನ್ನು ಹಾಕಿ ಮತ್ತು ಇನ್ನೊಂದು ಬ್ರೆಡ್ ಸ್ಲೈಸ್‌ನಿಂದ ಮುಚ್ಚಿ.

ಈ ಬ್ರೆಡ್‌ಗಳ ಅಂಚುಗಳನ್ನು ನೀರಿನಿಂದ ಮುಚ್ಚಿ, ನಂತರ ಅವು ಗೋಲ್ಡನ್‌ ಬ್ರೌನ್‌ ಬಣ್ಣಕ್ಕೆ ಬಂದು ಗರಿಗರಿಯಾಗುವವರೆಗೆ ಆಳವಾಗಿ ಫ್ರೈ ಮಾಡಿದರೆ ಪನೀರ್ ಶೇಜ್ವಾನ್ ಬ್ರೆಡ್ ರೋಲ್ ಸವಿಯಲು ಸಿದ್ದ.

ಇದನ್ನೂ ಓದಿ: ವೆಜ್‌ ಫಿಶ್‌ ಫ್ರೈ ಮಾಡೋದು ಹೇಗೆ ಗೊತ್ತಾ? ಇಲ್ಲಿದೆ ರೆಸಿಪಿ

Leave a Reply

Your email address will not be published. Required fields are marked *