Egg Manchurian: ಮಂಚೂರಿಯನ್‌ ಅಂದ್ರೆ ಇಷ್ಟನಾ? ಹಾಗಾದ್ರೆ ಈ ಮೊಟ್ಟೆ ರೆಸಿಪಿ ಇಲ್ಲಿದೆ

Evening snacks Egg Manchurian recipe

ಮಂಚೂರಿಯನ್‌ ಎಲ್ಲರ ಫೇವರೇಟ್‌ ಸ್ನ್ಯಾಕ್ಸ್‌. ಯಾವುದೇ ಮಂಚೂರಿಯನ್‌ ಕೊಟ್ಟರೂ ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ಅದರಲ್ಲೂ ಮಕ್ಕಳಿಗೆ ಈ ಮಂಚೂರಿಯನ್‌ ಅಂದ್ರೆ ಪಂಚಪ್ರಾಣ ಎನ್ನಬಹುದು. ನಾವು ಮನೆಯಲ್ಲಿ ವೆರೈಟಿ ವೆರೈಟಿ ಮಂಚೂರಿಯನ್‌ಗಳನ್ನ ಬಹಳ ಸುಲಭವಾಗಿ ಮಾಡಬಹುದು. ಮನೆಗೆ ಗೆಸ್ಟ್‌ ಬರುತ್ತಿದ್ದರೆ ಅಥವಾ ಬರೀ ಹೊರಗಿನ ತಿಂಡಿಯನ್ನ ಕೊಡಲು ಇಷ್ಟ ಇಲ್ಲದಿದ್ದರೆ ಮನೆಯಲ್ಲಿ ಮಾಡಿ ಸವಿಯಬಹುದು. ಹಾಗಾದ್ರೆ ಮನೆಯಲ್ಲಿ ಸುಲಭವಾಗಿ ಮೊಟ್ಟೆ ಮಂಚೂರಿಯನ್‌ (Egg Manchurian) ಮಾಡುವುದು ಹೇಗೆ? ಇದಕ್ಕೆ ಏನೆಲ್ಲಾ ಸಾಮಾಗ್ರಿಗಳು ಬೇಕು ಎಂಬುದು ಇಲ್ಲಿದೆ.

ಮೊಟ್ಟೆ ಮಂಚೂರಿಯನ್‌ ಮಾಡಲು ಬೇಕಾಗುವ ಪದಾರ್ಥಗಳು

ಹಿಟ್ಟು ತಯಾರಿಸಲು ಏನೆಲ್ಲಾ ಬೇಕು?

6 ಚಮಚ ಮೈದಾ ಹಿಟ್ಟು

2 ಚಮಚ ಕಾರ್ನ್‌ಫ್ಲೋರ್

1 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್

ರುಚಿಗೆ ತಕ್ಕಷ್ಟು ಉಪ್ಪು

ಕರಿಮೆಣಸು ರುಚಿಗೆ ತಕ್ಕಷ್ಟು

8 ಮೊಟ್ಟೆಗಳು

ಮಂಚೂರಿಯನ್‌ ಮಾಡಲು ಬೇಕಾಗುವ ಸಾಮಾಗ್ರಿಗಳು ಹೀಗಿದೆ

1/2 ಕಪ್ ದಪ್ಪ ಮೆಣಸಿನಕಾಯಿ (ಸಣ್ಣಗೆ ಕತ್ತರಿಸಿಕೊಂಡಿರಿ)

4 ಟೀಸ್ಪೂನ್  ಈರುಳ್ಳಿ (ಸಣ್ಣಗೆ ಹೆಚ್ಚಿಕೊಂಡಿರಿ)

1/2 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್

1/2 ಟೀಸ್ಪೂನ್ ಹಸಿ ಮೆಣಸಿನಕಾಯಿ (ಸಣ್ಣಗೆ ಹೆಚ್ಚಿಕೊಳ್ಳಿ ಅಥವಾ ಪೇಸ್ಟ್‌ ಮಾಡಿಕೊಳ್ಳಿ)

2 ಚಮಚ ಸೋಯಾ ಸಾಸ್

2 ಟೀಸ್ಪೂನ್ ವಿನೆಗರ್

1 ಚಮಚ ಚಿಲ್ಲಿ ಸಾಸ್/ಶೇಜ್ವಾನ್ ಸಾಸ್‌ (ಇದನ್ನ ಖಾರಕ್ಕೆ ಅನುಗುಣವಾಗಿ ಆಯ್ಕೆ ಮಾಡಿ)

ಕೊತ್ತಂಬರಿ ಸೊಪ್ಪು (ಸಣ್ಣಗೆ ಹೆಚ್ಚಿಕೊಂಡು ಇಟ್ಟುಕೊಂಡಿರಿ)

2 ಟೀಸ್ಪೂನ್ ಟೊಮೆಟೊ ಕೆಚಪ್

ರುಚಿಗೆ ತಕ್ಕಷ್ಟು ಉಪ್ಪು ಮತ್ತು ಕರಿ ಮೆಣಸು ಪುಡಿ

ಎಗ್ ಮಂಚೂರಿಯನ್ ಮಾಡುವ ಸುಲಭ ವಿಧಾನ ಹೀಗಿದೆ

ಹಿಟ್ಟು ತಯಾರಿಸಿಕೊಳ್ಳುವ ವಿಧಾನ ಹೀಗಿದೆ

ಮೊದಲು ಒಂದು ದೊಡ್ಡ ಪಾತ್ರೆ ತೆಗೆದುಕೊಳ್ಳಿ, ಅದಕ್ಕೆ ಮೈದಾ ಹಿಟ್ಟು, ಕಾರ್ನ್‌ಫ್ಲೋರ್, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಉಪ್ಪು ಮತ್ತು ಕರಿ ಮೆಣಸು ಸೇರಿಸಿ ಮಿಶ್ರಣ ಮಾಡಿಕೊಳ್ಳಿ. ನಂತರ ಅದಕ್ಕೆ ಸ್ವಲ್ಪ ಸ್ವಲ್ಪ ನೀರನ್ನ ಸೇರಿಸಿಕೊಳ್ಳುತ್ತಾ ದಪ್ಪ ಪೇಸ್ಟ್ ಮಾಡಿ ಪಕ್ಕಕ್ಕೆ ಇಟ್ಟುಕೊಳ್ಳಿ. ಈಗ ಎಲ್ಲಾ ಮೊಟ್ಟೆಗಳನ್ನು ಸುಮಾರು 4 ಭಾಗಗಳಾಗಿ ಕತ್ತರಿಸಿಕೊಳ್ಳಿ, ಅದನ್ನ ಮಿಶ್ರಣದಲ್ಲಿ ಅದ್ದಿ ಪಕ್ಕಕ್ಕೆ ಇಟ್ಟುಕೊಳ್ಳಿ.

ಮೊಟ್ಟೆ ಮಂಚೂರಿಯನ್‌ ಮಾಡುವ ವಿಧಾನ ಇದು

ಈಗ ಮತ್ತೊಂದು ಬಾಣಲೆಯನ್ನ ತೆಗೆದುಕೊಳ್ಳಿ, ಅದಕ್ಕೆ ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಕಾದ ನಂತರ ಅದಕ್ಕೆ ಹಿಟ್ಟಿನಲ್ಲಿ ಅದ್ದಿ ಇಟ್ಟಿರುವ ಮೊಟ್ಟೆಗಳನ್ನ ಹಾಕಿ ಫ್ರೈ ಮಾಡಿ. ಈ ಮೊಟ್ಟೆಗಳು ಗೋಲ್ಡನ್ ಬ್ರೌನ್ ಮತ್ತು ಗರಿಗರಿಯಾಗುವವರೆಗೆ ಫ್ರೈ ಮಾಡಿ.  ಈಗ ಇನ್ನೊಂದು ಪಾತ್ರೆ ಅಥವಾ ಬಾಣಲೆಯನ್ನ ತೆಗೆದುಕೊಂಡು ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ಸಣ್ಣಗೆ ಹೆಚ್ಚಿಕೊಂಡ ಈರುಳ್ಳಿ ಹಾಕಿ ಫ್ರೈ ಮಾಡಿಕೊಳ್ಳಿ, ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಬೆಲ್ ಪೆಪರ್, ಈರುಳ್ಳಿ, ಹಸಿರು ಮೆಣಸಿನಕಾಯಿಗಳನ್ನು ಉಪ್ಪು ಮತ್ತು ಮೆಣಸಿನಕಾಯಿಗಳನ್ನ ಹಾಕಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಸುಮಾರು 5 ನಿಮಿಷಗಳ ಕಾಲ ಈ ಮಿಶ್ರಣವನ್ನ ಫ್ರೈ ಮಾಡಿ. ಈಗ ಎಲ್ಲಾ ತರಕಾರಿಗಳಿಗೆ ಬೇಕಾದ ಸಾಸ್‌ಗಳನ್ನು ರುಚಿಗೆ ತಕ್ಕಷ್ಟು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.  ಈ ಮಿಶ್ರಣಕ್ಕೆ ಫ್ರೈ ಮಾಡಿಕೊಂಡಿರುವ ಮೊಟ್ಟೆ ಹಾಕಿ ಕಲಸಿ, ಸುಮಾರು 10 ನಿಮಿಷ ಮುಚ್ಚಿಡಿ. ನಂತರ ಅದಕ್ಕೆ ಕೊತ್ತಂಬರಿ ಸೊಪ್ಪನ್ನ ಹಾಕಿ ಅಲಂಕಾರ ಮಾಡಿದರೆ, ಮೊಟ್ಟೆ ಮಂಚೂರಿಯನ್‌ ರೆಡಿ.

ಇದನ್ನೂ ಓದಿ: ಜೀರ್ಣಕ್ರಿಯೆ ಸಮಸ್ಯೆನಾ? ಈ ಮನೆಮದ್ದು ಟ್ರೈ ಮಾಡಿ

Leave a Reply

Your email address will not be published. Required fields are marked *