Cheesy Paneer Cigar Roll: ಸಂಜೆಗೆ ಸ್ಪೆಷಲ್‌ ಸ್ನ್ಯಾಕ್ಸ್‌, ಚೀಸೀ ಪನೀರ್‌ ಸಿಗಾರ್‌ ರೋಲ್‌ ರೆಸಿಪಿ ಇಲ್ಲಿದೆ

evening snacks Cheesy Paneer Cigar Roll recipe

ಮಕ್ಕಳಿಗೆ ಸ್ನ್ಯಾಕ್ಸ್‌ ಎಂದರೆ ತುಂಬಾ ಇಷ್ಟ. ಅದರಲ್ಲೂ ಚೀಸ್‌ ಇದ್ದರಂತೂ ಕೇಳೋದೇ ಬೇಡ. ಆದರೆ ಪ್ರತಿ ದಿನವೂ ಒಂದೇ ರೀತಿಯ ಸ್ನ್ಯಾಕ್ಸ್‌ ಮಾಡಿಕೊಟ್ಟರೆ ಅವರು ಅದನ್ನ ತಿನ್ನಲು, ದಿನವೂ ಬೇರೆ ಏನಾದರೂ ಹೊಸ ಹೊಸ ಸ್ನ್ಯಾಕ್ಸ್‌ ಬೇಕಾಗುತ್ತೆ. ನೀವು ಸಹ ಸ್ನ್ಯಾಕ್ಸ್‌ ಹುಡುಕಾಟದಲ್ಲಿ ಇದ್ದರೆ ನಾವು ಸಹಾಯ ಮಾಡ್ತೀವಿ. ಮಕ್ಕಳಿಗೆ ತುಂಬಾ ಇಷ್ಟ ಆಗುವ ಚೀಸೀ ಪನೀರ್‌ ಸಿಗಾರ್‌ ರೋಲ್‌ (Cheesy Paneer Cigar Roll) ಮಾಡಿ ಸವಿಯಿರಿ. ಅದರ ರೆಸಿಪಿ ಇಲ್ಲಿದೆ.

ಚೀಸೀ ಪನೀರ್ ಸಿಗಾರ್ ರೋಲ್‌ ಮಾಡಲು ಬೇಕಾದ ಪದಾರ್ಥಗಳು

1 ಕಪ್ ಪನೀರ್, ತುರಿದುಕೊಂಡಿದ್ದರೆ ಒಳ್ಳೆಯದು

1/2 ಕಪ್ ಚೀಸ್, ಇದನ್ನೂ ಸಹ ತುರಿದುಕೊಂಡಿರಿ

1/2 ಕಪ್ ಕ್ಯಾಪ್ಸಿಕಂ, ಸಣ್ಣಗೆ ಹೆಚ್ಚಿಕೊಂಡಿರಿ

1/2 ಕಪ್ ಸ್ಪ್ರಿಂಗ್ ಈರುಳ್ಳಿ, ಸಣ್ಣಗೆ ಹೆಚ್ಚಿಕೊಳ್ಳಿ

ತಾಜಾ ಕೊತ್ತಂಬರಿ ಸೊಪ್ಪು, ಸಣ್ಣಗೆ ಹೆಚ್ಚಿಕೊಳ್ಳಿ

ರುಚಿಗೆ ತಕ್ಕಷ್ಟು ಉಪ್ಪು

1 ಟೀಸ್ಪೂನ್ ಬೆಳ್ಳುಳ್ಳಿ ಪೇಸ್ಟ್

1 ಟೀಸ್ಪೂನ್ ಕರಿಮೆಣಸು

ಚೀಸೀ ಪನೀರ್ ಸಿಗಾರ್ ರೋಲ್ ಮಾಡುವ ಸುಲಭ ವಿಧಾನ

ಮೊದಲು, ಒಂದು ಬಟ್ಟಲು ತೆಗೆದುಕೊಳ್ಳಿ. ಅದಕ್ಕೆ ಹಿಟ್ಟು  ಹಾಕಿ. ನಂತರ ನಿಧಾನವಾಗಿ ನೀರನ್ನ ಹಾಕುತ್ತಾ ಕಲಸುತ್ತಾ ಇರಿ. ಹಿಟ್ಟು ಗಂಟು ಗಂಟು ಆಗದ ಹಾಗೆ ಕಲಸಿಕೊಳ್ಳಿ. ನಂತರ ಅದನ್ನ ಅರ್ಧ ಗಂಟೆ ಹಾಗೆಯೇ ಇಟ್ಟಿರಿ. ಈ ಸಮಯದಲ್ಲಿ ಹೂರಣವನ್ನ ತಯಾರಿಸಿಕೊಳ್ಳಿ. ಒಂದು ಬಟ್ಟಲಿನಲ್ಲಿ ಪನೀರ್, ಚೀಸ್, ಕ್ಯಾಪ್ಸಿಕಂ, ಈರುಳ್ಳಿ, ಬೆಳ್ಳುಳ್ಳಿ ಪೇಸ್ಟ್‌, ಉಪ್ಪು ಮತ್ತು ಕರಿಮೆಣಸು ಸೇರಿಸಿ ಮತ್ತು ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.

ಈಗ ತಯಾರಿಸಿಕೊಂಡಿರುವ ಹಿಟ್ಟನ್ನು ತೆಗೆದುಕೊಂಡು ಮತ್ತೆ ಚೆನ್ನಾಗಿ  ಕಲಸಿ. ಅದನ್ನ ಸಣ್ಣ ಸಣ್ಣ ಉಂಡೆ ಮಾಡಿಕೊಳ್ಳಿ. ನಂತರ ಅದನ್ನ ಸಣ್ಣದಾಗಿ ಲಟ್ಟಿಸಿಕೊಳ್ಳಿ. ಈ ರೊಟ್ಟಿ ರೀತಿ ಮಾಡಿಕೊಂಡಿರುವ ಹಿಟ್ಟು ಸ್ವಲ್ಪ ತೆಳ್ಳಗೆ ಇದ್ದರೆ ತುಂಬಾ ಉತ್ತಮ. ಈಗ ಆ ಹಿಟ್ಟಿನ ಮೇಲೆ ಎಣ್ಣೆ ಹಚ್ಚಿ. ಹಾಗೆಯೇ ಒಣ ಹಿಟ್ಟನ್ನ ಅದರ ಲೇ;ಲೆ ಉದುರಿಸಿ. ಈಗ ಮತ್ತೊಂದು ಉಂಡೆಯಿಂದ ಸಣ್ಣ ರೊಟ್ಟಿ ರೀತಿ ಲಟ್ಟಿಸಿಕೊಂಡು, ಅದನ್ನ ಈ ರೊಟ್ಟಿಯ ಮೇಲೆ ಹಾಕಿ. ನಂತರ ಅದನ್ನ ರೋಲ್‌ ರೀತಿ ಸುತ್ತಿ. ಈ ರೋಲ್‌ ಅನ್ನು ಪ್ಯಾನ್‌ ಅಲ್ಲಿ ಟೋಸ್ಟ್‌ ರೀತಿ ಬಿಸಿ ಮಾಡಿ. ಆಗ ಅವುಗಳು ಗಟ್ಟಿಯಾಗಿ ಅಂಟಿಕೊಳ್ಳುತ್ತವೆ ಹಾಗೂ ಫಿಲ್ಲಿಂಗ್‌ ಸಹ ಮಾಡಬಹುದು.

ಇಲ್ಲದಿದ್ದರೆ ನೀವು ಎರಡು ರೊಟ್ಟಿಗಳನ್ನ ತಯಾರಿಸಿಕೊಂಡು ಅದನ್ನ ರೋಲ್‌ ಮಾಡದೇ ಗರಿಗರಿಯಾಗಿ ಬಿಸಿ ಮಾಡಿ ಹಿಟ್ಟಿನ ಪೇಸ್ಟ್‌ ಅತವಾ ಅಂಟಿನ ಮೂಲಕ ಎರಡು ರೊಟ್ಟಿಗಳನ್ನ ಅಂಟಿಸಿ. ಅದರ ಮಧ್ಯೆ ತಯಾರಿಸಿಕೊಂಡಿರುವ ಹೂರಣವನ್ನ ಹಾಕಿ, ನಿಧಾನಕ್ಕೆ ರೋಲ್‌ ಮಾಡಿ. ತಯಾರಾದ ಎಲ್ಲಾ ರೋಲ್‌ಗಳನ್ನು ಕಡಿಮೆ ಮಧ್ಯಮ ಉರಿಯಲ್ಲಿ ಗರಿಗರಿಯಾದ ಗೋಲ್ಡನ್ ಬ್ರೌನ್ ಆಗುವವರೆಗೆ ಫ್ರೈ ಮಾಡಿದರೆ ಚೀಸೀ ಪನೀರ್ ಸಿಗಾರ್ ರೋಲ್ ರೆಡಿ.

ಇದನ್ನೂ ಓದಿ: ತೂಕ ಇಳಿಸಬೇಕಾ? ಹಾಗಾದ್ರೆ ಈ ಹಣ್ಣುಗಳಿಂದ ದೂರ ಇರಿ

Leave a Reply

Your email address will not be published. Required fields are marked *