ಬೆಂಗಳೂರು: ನಮ್ಮ ಕಾಂಗ್ರೆಸ್ ಪಕ್ಷ ಆಲ್‌ರೆಡಿ ತಾಳ್ಮೆಯಿಂದ ಇರಿ ಅಂತ ಹೇಳಿದೆ ಎಂದು ಮಾಜಿ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ (DK Suresh) ಹೇಳಿದ್ದಾರೆ.
ಡಿಕೆ ಶಿವಕುಮಾರ್ ಪಕ್ಷದ ಶಿಸ್ತಿನ ಸಿಪಾಯಿ
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸುರೇಶ್ ಅವರು, ರಾಹುಲ್ ಗಾಂಧಿ ಕೂಡ ಮೈಸೂರಿನಲ್ಲಿ ಭೇಟಿಯಾದಾಗ ಸೂಕ್ತ ಸಂದರ್ಭದಲ್ಲಿ ಸೂಕ್ತ ತೀರ್ಮಾನವನ್ನು ತೆಗೆದುಕೊಳ್ಳುತ್ತೇವೆ ಅಂತ ತಿಳಿಸಿದ್ದಾರೆ. ಹಾಗಾಗಿ ಡಿಕೆ ಶಿವಕುಮಾರ್ ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷದ ಹಿತ ದೃಷ್ಟಿಯಿಂದ ಶಾಸಕರ ಹಿತ ದೃಷ್ಟಿಯಿಂದ ತಾಳ್ಮೆಯಿಂದ ಇದ್ದಾರೆ ಎಲ್ಲಾ 140 ಶಾಸಕರನ್ನ ಒಟ್ಟಾಗಿ ತೆಗೆದುಕೊಂಡು ಹೋಗಬೇಕು ಎನ್ನುವ ಗುರಿ ಇದೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಹುದ್ದೆ ಬಹಳ ಸುಲಭವಾದದ್ದಲ್ಲ
ಅಲ್ಲದೇ, ಡಿಕೆ ಶಿವಕುಮಾರ್ ಅವರು ಪಕ್ಷದ ಆದೇಶಕ್ಕಾಗಿ ಕಾಯುತ್ತಿದ್ದಾರೆ ಎಂದು ಅವರು ಹೇಳಿದ್ದು, ಡಿಕೆ ಶಿವಕುಮಾರ್ ತಾಳ್ಮೆಗೆ ಡೆಡ್ ಲೈನ್ ಇದಿಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಸುರೇಶ್ ಅವರು ಅಧಿಕಾರ ಯಾರಿಗೂ ಅಷ್ಟು ಸುಲಭವಾಗಿ ಬರುವುದಿಲ್ಲ. ನಾನು ಮೊದಲೇ ಹೇಳಿದ್ದೇನೆ ನಮ್ಮಣ್ಣನ ಹಣೆಯಲ್ಲಿ ಬರೆದಿದ್ದರೆ ಮುಖ್ಯಮಂತ್ರಿ ಆಗ್ತಾರೆ ಅಂತ. ಈಗಲೂ ಅದನ್ನೇ ಹೇಳುತ್ತಿದ್ದೇನೆ ಎಂದಿದ್ದಾರೆ. ಹಾಗೆಯೇ, ಮುಖ್ಯಮಂತ್ರಿ ಹುದ್ದೆ ಬಹಳ ಸುಲಭವಾದದ್ದಲ್ಲ, ಸುಲಭವಾಗಿ ಸಿಗುವಂತದ್ದಲ್ಲ. ಎಲ್ಲರೂ ಸೇರಿ ಇದಕ್ಕೆ ಭಾಗಿಯಾಗಬೇಕು. ನಮ್ಮ ಗುರಿ ಇರೋದು 2028ರ ಚುನಾವಣೆ. 2028ರ ಚುನಾವಣೆಯನ್ನು ಪಕ್ಷ ಒಗ್ಗಟ್ಟಾಗಿ ತೆಗೆದುಕೊಂಡು ಹೋಗಬೇಕಾಗುತ್ತೆ. ಆ ನಿಟ್ಟಿನಲ್ಲಿ ಪಕ್ಷದ ತೀರ್ಮಾನಕ್ಕೋಸ್ಕರ ಶಾಸಕರ ಹಾಗೂ ಕಾರ್ಯಕರ್ತರ ಹಿತ ದೃಷ್ಟಿಯಿಂದ ಎಲ್ಲವನ್ನು ಕೂಡ ತಾಳ್ಮೆಯಿಂದಲೇ ನೋಡಬೇಕಾಗುತ್ತದೆ ಎಂದು ಹೇಳಿದ್ದಾರೆ.
ಡಿಕೆ ಶಿವಕುಮಾರ್ ಅವರು ಪಕ್ಷದ ಅಧ್ಯಕ್ಷರು ಆಗಿದ್ದಾರೆ ಅವರಲ್ಲಿ ಮೊದಲು ಶಿಸ್ತು ಇರಬೇಕು. ಹಾಗಾಗಿ ಆ ಶಿಸ್ತನ್ನು ಪಾಲನೆ ಮಾಡುತ್ತಿದ್ದಾರೆ. ಈಗ ಅನಿವಾರ್ಯವಾಗಿ ಸೆಶನ್ ತುರ್ತು ಅಧಿವೇಶನ ಕರಿಯಬೇಕಾಗಿ ಬಂದಿದೆ. ಅಧಿವೇಶನ ಮುಗಿದ ಮೇಲೆ ಏನು ತೀರ್ಮಾನ ಮಾಡ್ತಾರೆ ಕಾದು ನೋಡೋಣ. ಅಧಿವೇಶನದ ಬಳಿತ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಡಿಕೆ ಸುರೇಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಅಕ್ರಮ ಮರಳು ದಂಧೆಗೆ ಕಡಿವಾಣ, ಶಾಸಕಿ ಮನೆಗೆ ನುಗ್ಗಿ ಬೆದರಿಕೆ ಹಾಕಿದ ಗೂಂಡಾಗಳು

One thought on “DK Suresh: ಪಕ್ಷ ತಾಳ್ಮೆಯಿಂದ ಇರಲು ಹೇಳಿದೆ: ಡಿಕೆ ಸುರೇಶ್”