ವಿಜಯಪುರ: ಶಿಡ್ಲಘಟ್ಟದಲ್ಲಿ ಪೌರಾಯುಕ್ತೆ ಮೇಲೆ ಕಾಂಗ್ರೆಸ್ ಮುಖಂಡ ದರ್ಪ ತೋರಿಸಿದ ಘಟನೆ ಬೆನ್ನಲ್ಲೆ ವಿಜಯಪುರದಲ್ಲೂ (Crime) ದಬ್ಬಾಳಿಕೆ ಮಾಡಲಾಗಿದ್ದು, ಕಾಂಗ್ರೆಸ್ ಮುಖಂಡ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಕಂದಾಯ ಕಟ್ಟಲು ಬಂದಿದ್ದ ವ್ಯಕ್ತಿ
ಕಂದಾಯ ಕಟ್ಟಲು ಬಂದಿದ್ದ ವ್ಯಕ್ತಿ ಮೇಲೆ ಕಾಂಗ್ರೆಸ್ ಮುಖಂಡ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದ್ದು, ಪುರಸಭೆ ಕಛೇರಿ ಆವರಣದಲ್ಲಿ ಜನರ ಎದುರೇ ಹಿಗ್ಗಾಮುಗ್ಗಾ ಥಳಿಸಲಾಗಿದೆ.
ಏನಿದು ಘಟನೆ?
ಮಾಹಿತಿಗಳ ಪ್ರಕಾರ, ಪುರಸಭೆ ಕಾಂಗ್ರೆಸ್ ಸದಸ್ಯ ಹನೀಫುಲ್ಲಾ, ಸಹೋದರ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದ್ದು, ಕಾಂಗ್ರೆಸ್ ಮುಖಂಡನ ಹಲ್ಲೆ ದೃಶ್ಯ ಸ್ಥಳಿಯರ ಮೊಬೈಲ್ ನಲ್ಲಿ ಸೆರೆಯಾಗಿದೆ. ದೇವನಹಳ್ಳಿ ತಾಲೂಕಿನ ವಿಜಯಪುರ ಪುರಸಭೆ ಆವರಣದಲ್ಲಿ ಘಟನೆ ನಡೆದಿದ್ದು, ವಿಜಯಪುರ ಪಟ್ಟಣದ ಸಾಧತ್ ಪಾಷ ಎಂಬಾತನ ಮೇಲೆ ಹಲ್ಲೆ ಮಾಡಲಾಗಿದೆ. ಹಳೆ ದ್ವೇಷದಿಂದ ಪುರಸಭೆ ಆವರಣದಲ್ಲಿ ಸಹೋದರರಿಂದ ಹಲ್ಲೆ ನಡೆದಿದ್ದು, ಸದ್ಯ ವಿಜಯಪುರ ಠಾಣೆಯಲ್ಲಿ ಹನೀಫುಲ್ಲಾ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ಸಾಲು ಸಾಲು ರಜೆ, ಜನರ ಜೇಬಿಗೆ ಬರೆ: ದುಪ್ಪಟ್ಟು ದರ ಹೆಚ್ಚಿಸಿದ ಖಾಸಗಿ ಬಸ್ಗಳು
