Yashasvi Jaiswal: ಬ್ಯಾಟರ್ ಯಶಸ್ವಿ ಜೈಸ್ವಾಲ್ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

cricketer Yashasvi Jaiswal admitted to hospital

ಭಾರತ (India) ಕ್ರಿಕೆಟ್‌ ತಂಡದ ಯುವ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ (Yashasvi Jaiswal) ಅವರ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಪಂದ್ಯದ ನಂತರ ಹದಗೆಟ್ಟಿದ್ದ ಆರೋಗ್ಯ

ಮಾಹಿತಿಗಳ ಪ್ರಕಾರ, ಯಶಸ್ವಿ ಜೈಸ್ವಾಲ್ ಮಂಗಳವಾರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ರಾಜಸ್ಥಾನ ವಿರುದ್ಧ ಪಂದ್ಯವನ್ನ ಆಡಿದ್ದರು. ಆದರೆ ರಾತ್ರಿ ಈ ಪಂದ್ಯದ ನಂತರ ಜೈಸ್ವಾಲ್ ಆರೋಗ್ಯದಲ್ಲಿ ಇದ್ದಕ್ಕಿದ್ದಂತೆ ಸಮಸ್ಯೆ ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮಂಗಳವಾರ ಸಂಜೆ ಯಶಸ್ವಿ ಜೈಸ್ವಾಲ್ ಅವರ ಆರೋಗ್ಯ ಹದಗೆಟ್ಟಿದ್ದು, ಅವರಿಗೆ ಹೊಟ್ಟೆ ನೋವಿನ ಸಮಸ್ಯೆ ಕಾಣಿಸಿಕೊಂಡಿದೆ ಎನ್ನಲಾಗಿದೆ. ಅವರನ್ನು ತಕ್ಷಣ ಆದಿತ್ಯ ಬಿರ್ಲಾ ಆಸ್ಪತ್ರೆಗೆ ಸೇರಿಸಲಾಗಿದ್ದು, ಅವರಿಗೆ ಅತಿಯಾದ ಗ್ಯಾಸ್ಟ್ರೋಎಂಟರೈಟಿಸ್ (ಹೊಟ್ಟೆ ಸೋಂಕು) ಇರುವುದು ಪತ್ತೆಯಾಗಿದೆ.

ಕೆಲ ಸಮಯ ವಿಶ್ರಾಂತಿಗೆ ಸೂಚನೆ

ಇನ್ನು ಅವರನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಂತೆ ವೈದ್ಯರು ಚಿಕಿತ್ಸೆ ಆರಂಭ ಮಾಡಿದ್ದು, ಅವರಿಗೆ ಡ್ರಿಪ್‌ ಮೂಲಕ ಔಷಧಿ ನೀಡಲಾಗುತ್ತಿದೆ. ಅಲ್ಲದೇ, ಅಲ್ಟ್ರಾಸೌಂಡ್ ಮತ್ತು CT ಸ್ಕ್ಯಾನ್‌ಗಳನ್ನ ಮಾಡಲಾಗಿದ್ದು, ವೈದ್ಯರು ಕೆಲ ಸಮಯ ವಿಶ್ರಾಂತಿ ಪಡೆದುಕೊಳ್ಳಲು ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್‌ ಅಧ್ಯಕ್ಷರಾಗಿ ವೆಂಕಟೇಶ್‌ ಪ್ರಸಾದ್‌ ಆಯ್ಕೆ

Leave a Reply

Your email address will not be published. Required fields are marked *