Piyush Goyal: ಒಮಾನ್-ಭಾರತ ನಡುವೆ ಹೆಚ್ಚಲಿದೆಯಾ ವ್ಯಾಪಾರ-ವಹಿವಾಟು?

central minister Piyush Goyal meets omani counterpart

ನವದೆಹಲಿ: ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ (Piyush Goyal) ಒಮಾನ್ ನ ಮಸ್ಕತ್ ನಲ್ಲಿ ನಿನ್ನೆ ಒಮಾನ್ – ಭಾರತ (Oman India) ವ್ಯಾಪಾರ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.

 ಸಾವಿರಾರು ವರ್ಷಗಳಿಂದ ನಡೆಯುತ್ತಿದೆ ವಹಿವಾಟು

ಈ ವೇಳೆ ಅವರು, ಭಾರತ ಮತ್ತು ಒಮಾನ್ ಐತಿಹಾಸಿಕ ಬಾಂಧವ್ಯ ಹೊಂದಿದ್ದು, ಸಾವಿರಾರು ವರ್ಷಗಳಿಂದಲೂ ವ್ಯಾಪಾರ ವಹಿವಾಟು ಸದೃಢವಾಗಿದೆ. ಗುಜರಾತಿನ ಲೋಥಾಲ್ ಬಂದರಿನಿಂದ ಮಸ್ಕತ್ ಗೆ ಸಾವಿರಾರು ವರ್ಷಗಳ ಹಿಂದೆಯೇ ಹಡಗುಗಳು ಸಂಚರಿಸುತ್ತಿದ್ದವು. ಭವಿಷ್ಯದಲ್ಲೂ ಉಭಯ ದೇಶಗಳು ಜಂಟಿಯಾಗಿ ಅಪಾರ ಅವಕಾಶಗಳನ್ನು ಹೊಂದಲು ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಲ್ಲದೇ, ಆಟೋ ಮೊಬೈಲ್, ಸೇವಾ ವಲಯ, ಪ್ರವಾಸೋದ್ಯಮ, ಶಿಕ್ಷಣ ಮತ್ತು ಮರುಬಳಕೆ ಇಂಧನ ಸೇರಿದಂತೆ ಹಲವು ವಲಯಗಳಲ್ಲಿ ಭಾರತ-ಒಮಾನ್ ಹೆಚ್ಚಿನ ಸಹಯೋಗದೊಂದಿಗೆ ಕಾರ್ಯನಿರ್ವಹಿಸುವ ಅವಕಾಶಗಳನ್ನು ಹೊಂದಿವೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ನರೇಂದ್ರ ಮೋದಿಗೆ ದಿ ಗ್ರೇಟ್ ಆನರ್ ನಿಶಾನ್ ಆಫ್ ಇಥಿಯೋಪಿಯಾ ಪ್ರಶಸ್ತಿ

Leave a Reply

Your email address will not be published. Required fields are marked *