Mysuru: ವ್ಯಾಲೆಂಟೈನ್ಸ್ ಡೇ ಬದಲು ಹನುಮಾನ ಚಾಲೀಸ ಪಾರಾಯಣ ಮಹಾಯಜ್ಞ, ಗಣಪತಿ ಸಚ್ಚಿದಾನಂದ ಆಶ್ರಮದಿಂದ ವಿಶೇಷ ಕಾರ್ಯ
ಮೈಸೂರು: ಸಾಮಾನ್ಯವಾಗಿ ಫೆಬ್ರವರಿ 14 ಎಂದರೆ ಎಲ್ಲರಿಗೂ ನೆನಪಾಗೋದು ವ್ಯಾಲೆಂಟೈನ್ಸ್ ಡೇ. ಆದರೆ ಈ ಬಾರಿ ವ್ಯಾಲೆಂಟೈನ್ಸ್ ದಿನವನ್ನ ವಿಭಿನ್ನವಾಗಿ ಆಚರಿಸಲು ಮೈಸೂರಿನ (Mysuru) ಗಣಪತಿ ಸಚ್ಚಿದಾನಂದ ಆಶ್ರಮ (Sri Ganapathy Sachchidananda Swamiji) ನಿರ್ಧಾರ ಮಾಡಿದೆ. ಹನುಮಾನ ಚಾಲೀಸ ಪಾರಾಯಣ ಮಹಾಯಜ್ಞ ಪ್ರತಿವರ್ಷವೂ ಈ ವ್ಯಾಲೆಂಟೈನ್ಸ್ ಡೇ ವಿಚಾರವಾಗಿ ದೇಶದಲ್ಲಿ ವಿವಾದಗಳು ಸೃಷ್ಟಿ ಆಗುತ್ತದೆ. ಅದರ ಆಚರಣೆಯನ್ನ ಅನೇಕ ಜನರು ವಿರೋಧ ಮಾಡುತ್ತಾರೆ. ಆ ದಿನವೇ ಬೇರೆ ಬೇರೆ ರೀತಿಯ ಕಾರ್ಯಕ್ರಮಗಳನ್ನ ಸಹ ಆಯೋಜನೆ ಮಾಡಲಾಗುತ್ತದೆ….
