Karan Johar: ಬಾಲಿವುಡ್‌ ಈಸ್‌ ಬ್ಯಾಕ್‌, ಹೀಗ್ಯಾಕಂದ್ರು ಸ್ಟಾರ್‌ ನಿರ್ದೇಶಕ?

Bollywood Is Back Karan Johar Says After Back To Back hit films

ಮುಂಬೈ: ಕಳೆದ ಕೆಲ ವರ್ಷದಿಂದ ಬಾಲಿವುಡ್‌ನಲ್ಲಿ ಬಂದ ಸಿನಿಮಾಗಳು ಹೇಳಿಕೊಳ್ಳುವಂತಹ ಯಶಸ್ಸನ್ನ ಗಳಿಸಿಕೊಂಡಿಲ್ಲ. ಆದರೆ ಇದೀಗ ಮತ್ತೆ ಬಾಲಿವುಡ್‌ನಲ್ಲಿ ಸಿನಿಮಾಗಳು ಯಶಸ್ಸು ಗಳಿಸುವಂತೆ ಹೆಜ್ಜೆ ಇಡುತ್ತಿದ್ದು, ಈ ಬಗ್ಗೆ ಸಿನಿಮಾ ನಿರ್ದೇಶಕ ಕರಣ್‌ ಜೋಹರ್‌ (Karan Johar) ಸಂತೋಷ ವ್ಯಕ್ತಪಡಿಸಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ ಕರಣ್‌

ಈ ವಿಚಾರವಾಗಿ ಕರಣ್‌ ಜೋಹರ್‌ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದು, ಬಾಕ್ಸ್ ಆಫೀಸ್‌ನಲ್ಲಿ ಸತತ ಹಿಟ್‌ಗಳು ಬಾಲಿವುಡ್‌ನ ದೀರ್ಘಾವಧಿಯ ಸ್ಥಾನವನ್ನು ಭದ್ರಪಡಿಸಿವೆ ಎಂದು ಹೇಳಿದ್ದಾರೆ. ಇತ್ತೀಚೆಗೆ ಬಂದ ಎರಡು ಹಿಂದಿ ಮೆಗಾ ಚಿತ್ರಗಳ ಯಶಸ್ಸು ನಿಜಕ್ಕೂ ಅದ್ಭುತ. ಬಾಲಿವುಡ್ ಈಗ ಮತ್ತೆ ಮರಳಿ ಬಂದಿದೆ. ಸಿನಿಮಾಗಳು ಹಣ ಪಾವತಿ ಮಾಡುವ ಪ್ರೇಕ್ಷಕರ ಜೊತೆ ಭಾವನಾತ್ಮಕವಾಗಿ ಕನೆಕ್ಟ್‌ ಆದಾಗ ಧುರಂಧರ್‌ ಹಾಗೂ ಬಾರ್ಡರ್‌ನಂತೆ ಮಿಂಚುತ್ತವೆ ಎಂದು ಬರೆದುಕೊಂಡಿದ್ದಾರೆ.  

ಯಶಸ್ಸಿನ ಅಲೆಯಲ್ಲಿ ಬಾಲಿವುಡ್‌

ಬಾಲಿವುಡ್‌ನ ಸಿನಿಮಾಗಳು ಮಕಾಡೆ ಮಲಗಿ ಹೋಗಿವೆ ಎನ್ನುವ ಮಾತುಗಳು ಕಳೆದ ಕೆಲ ಸಮಯದಿಂದ ಕೇಳಿ ಬರುತ್ತಿದ್ದವು. ಸಿನಿಮಾ ಅಭಿಮಾನಿಗಳಿಗೆ ಸಹ ಬಾಲಿವುಡ್‌ ಕಡೆಯಿಂದ ಯಾವುದೇ ಉತ್ತಮವಾದ ಸಿನಿಮಾ ಸಿಕ್ಕಿರಲಿಲ್ಲ. ಬಿಡುಗಡೆಯಾದ ಸಿನಿಮಾಗಳೂ ಸಹ ಉತ್ತಮವಾದ ಕಥೆ ಇಲ್ಲದ ಕಾರಣದಿಂದ ಪ್ರೇಕ್ಷಕರಿಗೆ ಇಷ್ಟ ಆಗಿರಲಿಲ್ಲ. ಹಾಗಾಗಿ ಎಲ್ಲರೂ ಬಾಲಿವುಡ್‌ ಕಥೆ ಮುಗಿಯಿತು ಎಂದು ಮಾತನಾಡಿಕೊಳ್ಳುತ್ತಿದ್ದರು. ಆದರೆ ಇದೀಗ ಬಾಲಿವುಡ್‌ನಲ್ಲಿ ಉತ್ತಮ ಸಿನಿಮಾಗಳು ಬರಲು ಆರಂಭವಾಗಿದ್ದು, ರಣವೀರ್‌ ಸಿಂಗ್‌ ಅಭಿನಯದ, ಆದಿತ್ಯ ಧಾರ್‌ ನಿರ್ದೇಶನದ ಧುರಂಧರ್‌ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸನ್ನ ಗಳಿಸಿದೆ. ಅನೇಕ ದಾಖಲೆಗಳನ್ನ ಈ ಸಿನಿಮಾ ಮುರಿದಿದೆ. ಅದರ ನಂತರ ಇತ್ತೀಚೆಗೆ ಬಿಡುಗಡೆಯಾದ ಬಾರ್ಡರ್‌ 2 ಸಿನಿಮಾ ಸಹ ಈಗ ಜನರಿಗೆ ಉತ್ತಮ ಪ್ರತಿಕ್ರಿಯೆಯನ್ನ ಪಡೆಯುತ್ತಿದೆ. ಹಾಗಾಗಿ ಮತ್ತೆ ಬಾಲಿವುಡ್‌ ಯಶಸ್ಸಿನ ಪಥಕ್ಕೆ ಬರುತ್ತಿದೆ ಎನ್ನಬಹುದು.

ಇದನ್ನೂ ಓದಿ: 19 ವರ್ಷದ ನಂತರ ಉಪ್ಪಿ ಸಿನಿಮಾ ತೆರೆಗೆ, ರಕ್ತ ಕಾಶ್ಮೀರ ರಿಲೀಸ್‌ ಡೇಟ್‌ ಅನೌನ್ಸ್

Leave a Reply

Your email address will not be published. Required fields are marked *