ಈಗ ದ್ರಾಕ್ಷಿ ಹಣ್ಣುಗಳ ಕಾಲ ಆರಂಭವಾಗಿದೆ. ಹಸಿರು ಹಾಗೂ ಕಪ್ಪು ದ್ರಾಕ್ಷಿಗಳು ಈಗಾಗಲೇ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಈ ದ್ರಾಕ್ಷಿಯನ್ನು ತುಂಬಾ ಆರೋಗ್ಯಕರವೆಂದು ಪರಿಗಣಿಸಲಾಗುತ್ತದೆ. ಅದರಲ್ಲೂ ಕಪ್ಪು ದ್ರಾಕ್ಷಿಯಲ್ಲಿ ಮಧುಮೇಹ, ರಕ್ತದೊತ್ತಡ, ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವ ಶಕ್ತಿ ಇದೆ. ಹಾಗಾದ್ರೆ ಈ ಕಪ್ಪು ದ್ರಾಕ್ಷಿಯ (Black Grapes) ಪ್ರಯೋಜನಗಳೇನು ಎಂಬುದು ಇಲ್ಲಿದೆ.
ಡಯಾಬಿಟೀಸ್ ನಿವಾರಣೆ
ಕಪ್ಪು ದ್ರಾಕ್ಷಿಯನ್ನು ಸೇವನೆ ಮಾಡುವುದರಿಂದ ಮಧುಮೇಹವನ್ನು ನಿಯಂತ್ರಣ ಮಾಡಲು ಸಹಾಯ ಮಾಡುತ್ತದೆ. ಈ ದ್ರಾಕ್ಷಿಯಲ್ಲಿ ರೆಸ್ವೆರಾಟ್ರೊಲ್ ಎಂಬ ಪದಾರ್ಥವಿದ್ದು, ಇದು ರಕ್ತದಲ್ಲಿ ಇನ್ಸುಲಿನ್ ಮಟ್ಟವನ್ನು ಹೆಚ್ಚು ಮಾಡುತ್ತದೆ. ಇದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನ ಸಮತೋಲನ ಮಾಡಲು ಸಹಾಯ ಮಾಡುತ್ತದೆ.
ನೆನಪಿನ ಶಕ್ತಿ ಹೆಚ್ಚಾಗುತ್ತದೆ
ಕಪ್ಪು ದ್ರಾಕ್ಷಿಯನ್ನು ಸೇವನೆ ಮಾಡುವುದರಿಂದ ಏಕಾಗ್ರತೆ ಮತ್ತು ನೆನಪಿನಶಕ್ತಿ ಹೆಚ್ಚಾಗುತ್ತದೆ. ಇದರಿಂದ ಮೆದುಳಿನ ಕಾರ್ಯ ಸುಧಾರಣೆ ಆಗುತ್ತದೆ. ಯಾರಿಗಾದರೂ ಮೈಗ್ರೇನ್ ಸಮಸ್ಯೆ ಇದ್ದರೆ ಅವರಿಗೆ ಇದು ಪರಿಹಾರ ನೀಡುತ್ತದೆ.
ಹೃದಯದ ಆರೋಗ್ಯಕ್ಕೆ ಉತ್ತಮ
ಇನ್ನು ಈ ಕಪ್ಪು ದ್ರಾಕ್ಷಿಯಲ್ಲಿ ಇರುವ ಫೈಟೊಕೆಮಿಕಲ್‌ಗಳು ಹೃದಯದ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ. ಮುಖ್ಯವಾಗಿ ಇದು ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತವೆ. ಇದರಿಂದ ಹೃದಯದ ಆರೋಗ್ಯ ಸಹ ಕಾಪಾಡಿಕೊಳ್ಳಬಹುದು.
ತೂಕ ಇಳಿಸಲು ಸಹಾಯ ಮಾಡುತ್ತದೆ
ಈ ದ್ರಾಕ್ಷಿಯನ್ನ ಸೇವನೆ ಮಾಡುವುದರಿಂದ ತೂಕ ಇಳಿಸಿಕೊಳ್ಳಬಹುದು, ಇದರಲ್ಲಿ ಉತ್ಕರ್ಷಣ ನಿರೋಧಕಗಳು ಇರುವುದರಿಂದ ದೇಹದಲ್ಲಿನ ವಿಷವನ್ನ ಹೊರಗೆ ಹಾಕಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಮೊಟ್ಟೆ ಇಲ್ಲದೇ ಬಾಳೆಹಣ್ಣು ಪ್ಯಾನ್‌ಕೇಕ್ ಮಾಡಿ, ಇಲ್ಲಿದೆ ರೆಸಿಪಿ
