ಬೆಂಗಳೂರು: ಕನ್ನಡದ ಬಿಗ್ಬಾಸ್ ಸೀಸನ್ 12 ಕೊನೆಯ ಹಂತಕ್ಕೆ ತಲುಪಿದೆ. ಇನ್ನೇನು ಕೆಲವೇ ದಿನಗಳಲ್ಲಿ ಫೈನಲ್ ಸೀಸನ್ ಸಹ ನಡೆಯಲಿದೆ. ಒಂದು ರೀತಿಯಲ್ಲಿ ಇದು ಕುತೂಹಲಕಾರಿ ಘಟ್ಟವನ್ನ ತಲುಪಿದೆ. ಆಟದಲ್ಲಿ ದಿನಕ್ಕೊಂದು ತಿರುವು ಸಿಗುತ್ತಿದ್ದು. ಈ ವಾರ ಬಿಗ್ಬಾಸ್ (Bigg Boss) ಮನೆಯಿಂದ ಸ್ಟ್ರಾಂಗ್ ಸ್ಪರ್ಧಿಯೊಬ್ಬರು ಔಟ್ ಆಗಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಅದರ ಬಗ್ಗೆ ಮಾಹಿತಿ ಇಲ್ಲಿದೆ.
ಬಿಗ್ ಮನೆಯಿಂದ ರಾಶಿಕಾ ಔಟ್?
ಇಂದು ಬಿಗ್ಬಾಸ್ನಲ್ಲಿ ವೀಕೆಂಡ್ ಎಪಿಸೋಡ್ ನಡೆಯಲಿದೆ. ಕಿಚ್ಚ ಮನೆಯ ಅನೇಕ ಜನರಿಗೆ ಕ್ಲಾಸ್ ತೆಗೆದುಕೊಳ್ಳಲಿದ್ದಾರೆ, ಅದರ ಜೊತೆಗೆ ಇಬ್ಬರಿಗೆ ಸಹ ಕಿಚ್ಚನ ಚಪ್ಪಾಳೆ ಸಿಗಲಿದೆ ಎನ್ನಲಾಗುತ್ತಿದೆ. ಈ ಎಲ್ಲದರ ನಡುವೆ ಈ ವಾರ ಮನೆಯಿಂದ ಯಾರು ಔಟ್ ಆಗುತ್ತಾರೆ ಎನ್ನುವ ಕುತೂಹಲ ಸಹ ಮೂಡಿದೆ. ಹೀಗಿರುವಾಗ ಸದ್ಯ ವೈರಲ್ ಆಗುತ್ತಿರುವ ಸುದ್ದಿಯ ಪ್ರಕಾರ, ಮನೆಯಿಂದ ರಾಶಿಕಾ ಶೆಟ್ಟಿ ಔಟ್ ಆಗಿದ್ದಾರೆ. ಹೌದು, ಸದ್ಯ ಮನೆಯಲ್ಲಿ 7 ಜನ ಮಾತ್ರ ಇದ್ದಾರೆ. ಡಲ್ಲರ ನಡುವೆ ಪೈಪೋಟಿ ಜೋರಾಗಿದೆ. ಆದರೆ ಮನೆಯಿಂದ ರಾಶಿಕಾ ಹೊರಗೆ ಹೋಗಿರುವುದು ಜನರಿಗೆ ಶಾಕ್ ನೀಡಿದೆ. ಏಕೆಂದರೆ ರಾಶಿಕಾ ಬಹಳ ಸ್ಟ್ರಾಂಗ್ ಸ್ಪರ್ಧಿ. ಅವರು ಮನೆಯಿಂದ ಹೊರಗೆ ಹೋಗಿದ್ದಾರೆ ಎನ್ನುವ ಸುದ್ದಿ ಮಾತ್ರ ಅಚ್ಚರಿ ಮೂಡಿಸಿದೆ.
ಈ ಎಲ್ಲಾ ಸುದ್ದಿಗಳ ನಡುವೆ ಮುಂದಿನ ವಾರ ಮಿಡ್ ವೀಕ್ ಎಲಿಮಿನೇಷನ್ ನಡೆಯಲಿದೆ ಎಂಬ ಮಾತುಗಳು ಸಹ ಕೇಳಿ ಬರುತ್ತಿದೆ. ಅದರ ಜೊತೆಗೆ ಡಬಲ್ ಎಲಿಮಿನೇಷನ್ ಸಹ ಆಗಬಹುದು ಎನ್ನಲಾಗುತ್ತಿದೆ. ಆದರೆ ಯಾವುದೇ ವಿಚಾರಗಳು ಇನ್ನೂ ಅಧಿಕೃತವಾಗಿ ಮಾಹಿತಿ ಮಾತ್ರ ಹೊರಗೆ ಬಂದಿಲ್ಲ.
ರಕ್ಷಿತಾಗೆ ಕಿಚ್ಚನ ಕ್ಲಾಸ್
ಇನ್ನು ಈ ವಾರ ಕಿಚ್ಚ ಸುದೀಪ್ ಅವರು ರಕ್ಷಿತಾ ಅವರಿಗೆ ಸಹ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಹೌದು, ಮನೆಯಲ್ಲಿ ರಕ್ಷಿತಾ ಗಿಲ್ಲಿ ಹಾಗೂ ರಘು ಅವರ ಜೊತೆ ಜಾಸ್ತಿ೯ ಕ್ಲೋಸ್ ಇದ್ದಾರೆ. ಅವರ ಜೊತೆಯೇ ಹೆಚ್ಚು ಸಮಯವನ್ನ ಸಹ ಅವರು ಕಳೆಯೋದು. ಆದರೆ ರಕ್ಷಿತಾ ಅವರಿಗೆ ಗಿಲ್ಲಿ ಹಾಗೂ ರಘು ಜೊತೆ ಬೇರೆ ಯಾರಾದರೂ ಕ್ಲೋಸ್ ಆದರೆ ಸಹಿಸೋದಿಲ್ಲ. ಈ ವಿಚಾರವಾಗಿ ಮನೆಯಲ್ಲಿ ಸಹ ಮೊನ್ನೆ ಕೆಲ ಘಟನೆಗಳು ನಡೆದಿದೆ, ಇದನ್ನ ಇಟ್ಟುಕೊಂಡು ಕಿಚ್ಚ ರಕ್ಷಿತಾ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಹೊಸ ದಾಖಲೆ ಬರೆದ ಕಾಂತಾರ, ಆಸ್ಕರ್ ರೇಸ್ನಲ್ಲಿ ರಿಷಬ್ ಸಿನಿಮಾ
