ನವದೆಹಲಿ: ಇಂಡಿಗೋ ಸಂಸ್ಥೆಯ ವಿಮಾನಗಳು ರದ್ದಾದ ಹಿನ್ನೆಲೆಯಲ್ಲಿ ದೇಶಾದ್ಯಂತ ಸಾವಿರಾರು ಪ್ರಯಾಣಿಕರು ಸಿಲುಕಿಕೊಂಡು ಬಹಳ ತೊಂದರೆ ಅನುಭವಿಸಿದ್ದರು. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಇಂಡಿಗೋ (IndiGo) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಭಾರತದ ವಾಯುಯಾನ ನಿಯಂತ್ರಕ ಸಂಸ್ಥೆಯು ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಇಂಡಿಗೋ ಸಂಸ್ಥೆಯಿಂದ ಜನರಿಗೆ ತೊಂದರೆ
ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಇತ್ತೀಚಿನ ವರ್ಷಗಳಲ್ಲಿ ತೆಗೆದುಕೊಂಡ ಅತ್ಯಂತ ಕಠಿಣ ಕ್ರಮಗಳಲ್ಲಿ ಈ ನೋಟಿಸ್ ಒಂದು ಎನ್ನಲಾಗಿದ್ದು, ಪ್ರಯಾಣಿಕರಿಗೆ ತೀವ್ರ ಅನಾನುಕೂಲತೆ, ಸಂಕಷ್ಟ ಮತ್ತು ತೊಂದರೆ ಉಂಟುಮಾಡಿದ ಹಿನ್ನೆಲೆಯಲ್ಲಿ ಈ ನೋಟೀಸ್ ಜಾರಿ ಮಾಡಲಾಗಿದೆ. ಅನೇಕ ಜನರು ಈ ವಿಚಾರವಾಗಿ ಆಕ್ರೋಶವನ್ನ ವ್ಯಕ್ತಪಡಿಸಿದ್ದರು. ಹಾಗಾಗಿ ಕ್ರಮ ತೆಗೆದುಕೊಳ್ಳಲು ಡಿಜಿಸಿಎ ನಿರ್ಧಾರ ಮಾಡಿದೆ.
ಡಿಜಿಸಿಎ ಪ್ರಕಾರ, ಪೈಲಟ್ಗಳಿಗೆ ಪರಿಷ್ಕೃತ ವಿಮಾನ ಕರ್ತವ್ಯ ಸಮಯ ಮಿತಿಗಳನ್ನು (ಎಫ್ಡಿಟಿಎಲ್) ಜಾರಿಗೆ ತರಲು ಇಂಡಿಗೋ ಸಮರ್ಪಕ ವ್ಯವಸ್ಥೆಗಳನ್ನುಮಾಡುವಲ್ಲಿ ವಿಫಲವಾಗಿರುವುದು ಬಿಕ್ಕಟ್ಟಿಗೆ ಪ್ರಾಥಮಿಕ ಕಾರಣ ಎನ್ನಲಾಗುತ್ತಿದೆ ಈ ಬದಲಾವಣೆಯನ್ನು ತಿಂಗಳುಗಳ ಮುಂಚಿತವಾಗಿ ತಿಳಿಸಲಾಗಿದ್ದು, ನವೆಂಬರ್ 1 ರಿಂದ ಜಾರಿಗೆ ಬರಲಿದೆ ಎಂದು ತಿಳಿಸಲಾಗಿತ್ತು. ಆದರೂ ಸಹ ಇಂಡಿಗೋ ಸಂಸ್ಥೆ ಸರಿಯಾದ ಕಾರ್ಯಾಚರಣೆ ನಿರ್ವಹಣೆ ಮಾಡುವಲ್ಲಿ ವಿಫಲವಾಗಿದೆ.
ನೋಟೀಸ್ಗೆ ಉತ್ತರ ನೀಡಲು 24 ಗಂಟೆ ಗಡುವು
ಇತ್ತೀಚೆಗೆ ಇಂಡಿಗೊ ಏರ್ಲೈನ್ಸ್ನ ನಿಗದಿತ ವಿಮಾನಗಳು ಭಾರಿ ಅಡೆತಡೆಗಳನ್ನು ಎದುರಿಸುತ್ತಿವೆ, ಇದರ ಪರಿಣಾಮವಾಗಿ ಪ್ರಯಾಣಿಕರಿಗೆ ತೀವ್ರ ಅನಾನುಕೂಲತೆ, ತೊಂದರೆ ಉಂಟಾಗಿದೆ ಎಂದು ಗಮನಿಸಲಾಗಿದೆ ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ.
ವಿಮಾನಯಾನ ಸಂಸ್ಥೆಗೆ ಅನುಮೋದಿತ ಎಫ್ಡಿಟಿಎಲ್ ಯೋಜನೆಯ ಸುಗಮ ಅನುಷ್ಠಾನಕ್ಕಾಗಿ ಪರಿಷ್ಕೃತ ಅವಶ್ಯಕತೆಗಳನ್ನು ಪೂರೈಸಲು ಸಾಕಷ್ಟು ವ್ಯವಸ್ಥೆಗಳನ್ನು ಒದಗಿಸದಿರುವುದು ವಿಮಾನಗಳ ಹಾರಾಟದಲ್ಲಿ ಅಡಚಣೆಗಳಿಗೆ ಪ್ರಮುಖ ಕಾರಣ ಎಂದು ನೋಟೀಸ್ನಲ್ಲಿ ಉಲ್ಲೇಖ ಮಾಡಲಾಗಿದೆ.
ಇದನ್ನೂ ಓದಿ: ಉದ್ಯೋಗಿಗಳಿಗೆ ಗುಡ್ನ್ಯೂಸ್, ಲೋಕಸಭೆಯಲ್ಲಿ ಹೊಸ ಬಿಲ್ ಮಂಡನೆ
