Akhanda 2: ಬಾಕ್ಸ್‌ ಆಫೀಸ್‌ನಲ್ಲಿ ಬಾಲಯ್ಯ ಆರ್ಭಟ, ಅಖಂಡ 2 ಓಟಿಟಿ ರಿಲೀಸ್‌ ಯಾವಾಗ?

akhanda 2 OTT ŗelease information

ಟಾಲಿವುಡ್‌ ಸೂಪರ್‌ ಸ್ಟಾರ್‌ ಬಾಲಕೃಷ್ಣ ನಂದಮೂರಿ ಅವರ, ಅಖಂಡ 2 (Akhanda 2) , ಸಿನಿಮಾ ಇತ್ತೀಚಿಗಷ್ಟೇ ರಿಲೀಸ್‌ ಆಗಿದ್ದು, ಒಳ್ಳೆಯ ರೆಸ್ಪಾನ್ಸ್‌ ಪಡೆದುಕೊಳ್ಳುತ್ತಿದೆ. ಇದೀಗ ಈ ಸಿನಿಮಾದ ಓಟಿಟಿ ರಿಲೀಸ್‌ ಬಗ್ಗೆ ಚರ್ಚೆ ಆಗುತ್ತಿದೆ.

ಮುಂದಿನ ತಿಂಗಳು ಓಟಿಟಿಗೆ ಬರಲಿದೆಯಾ ಅಖಂಡ?

ಬೋಯಪತಿ ಶ್ರೀನು ನಿರ್ದೇಶನದ ಈ ಚಿತ್ರ ಶುಕ್ರವಾರ ಬಿಡುಗಡೆಯಾಯಿತು. ಈ ಚಿತ್ರವು ಈಗ 2025 ರಲ್ಲಿ ಉತ್ತಮ ಗಳಿಕೆ ಮಾಡಿರುವ ಟಾಪ್ 10 ತೆಲುಗು ಸಿನಿಮಾಗಳಲ್ಲಿ ಒಂದಾಗಿದೆ. ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆಯುತ್ತಿರುವ ಈ ಚಿತ್ರ ಯಾವಾಗ ಓಟಿಟಿಗೆ ಬರಲಿದೆ ಕುತೂಹಲ ಎಲ್ಲರನ್ನೂ ಮೂಡಿದೆ. ಹೀಗಿರುವಾಗ ಈ ಸಿನಿಮಾ ಮುಂದಿನ ತಿಂಗಳು OTT ನಲ್ಲಿ ಬಿಡುಗಡೆಯಾಗಲಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಯಾವ ಓಟಿಟಿಯಲ್ಲಿ ರಿಲೀಸ್‌ ಆಗಲಿದೆ ಸಿನಿಮಾ?

ನಂದಮೂರಿ ಅಭಿನಯದ ಈ ಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿ  ಸ್ಟ್ರೀಮ್ ಆಗಲಿದೆ ಎಂದು ವರದಿಗಳು ಹೇಳುತ್ತಿದೆ. ಮಾಹಿತಿಗಳ ಪ್ರಕಾರ, ಜನವರಿ 9, 2026 ರಂದು ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಆದರೆ, ನಿರ್ಮಾಪಕರು ಅಥವಾ OTT ವೇದಿಕೆಯು ಈ ವಿಚಾರವಾಗಿ ಇನ್ನೂ ಯಾವುದೇ ಮಾಹಿತಿ ನೀಡಿಲ್ಲ. ಅಖಂಡ 2: ತಾಂಡವಂ ಬಾಲಕೃಷ್ಣ ಅವರ 2021 ರ ಬ್ಲಾಕ್‌ಬಸ್ಟರ್ ಅಖಂಡದ ಮುಂದುವರಿದ ಭಾಗವಾಗಿದೆ.

ಈ ಚಿತ್ರದಲ್ಲಿ ಅಮಯುಕ್ತ, ಆದಿ ಪಿನಿಶೆಟ್ಟಿ, ಕಬೀರ್ ದುಹಾನ್ ಸಿಂಗ್ ಮತ್ತು ಹರ್ಷಾಲಿ ಮಲ್ಹೋತ್ರಾ ಕೂಡ ನಟಿಸಿದ್ದಾರೆ. ಇನ್ನು ಅಖಂಡ 2 ಅದ್ಭುತ ಆರಂಭಿಕ ವ್ಯವಹಾರವನ್ನು ಕಂಡಿತು. ಗುರುವಾರ ₹ 8 ಕೋಟಿ ಗಳಿಸುವ ಮೂಲಕ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಆರಂಭವನ್ನು ಕಂಡಿತು, ನಂತರ ಅದರ ಅಧಿಕೃತ ಬಿಡುಗಡೆಯ ದಿನದಂದು ₹ 22.5 ಕೋಟಿ ಸಂಗ್ರಹವಾಯಿತು. ಆದರೆ, ಶನಿವಾರ ಸಂಗ್ರಹವು 31.11% ರಷ್ಟು ಕುಸಿದು ₹ 15.5 ಕೋಟಿಗೆ ತಲುಪಿತು. ಭಾನುವಾರ ಚಿತ್ರವು ₹ 15.1 ಕೋಟಿ ಗಳಿಕೆ ಮಾಡಿದೆ.

ಇದನ್ನೂ ಓದಿ: ದರ್ಶನ್‌ ಅಭಿಮಾನಿಗಳ ಬಗ್ಗೆ ವಿಜಯಲಕ್ಷ್ಮಿ ಮನದಾಳದ ಮಾತು

Leave a Reply

Your email address will not be published. Required fields are marked *