Air India: ಸದ್ಯದಲ್ಲಿ ದುಬೈಗೆ ವಿಮಾನ ಸಂಚಾರ ಆರಂಭ ಮಾಡಲಿದೆ ಏರ್‌ ಇಂಡಿಯಾ

Air india is planning to start flights to dubai

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿನ  ಸಂಘರ್ಷವನ್ನು  ಸೂಕ್ಷ್ಮವಾಗಿ  ಗಮನಿಸುತ್ತಿರುವ  ಏರ್ ಇಂಡಿಯಾ  (Air India) ಮತ್ತು ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನಯಾನ ಸಂಸ್ಥೆಗಳು  ಪ್ರಯಾಣಿಕರ  ಹಿತದೃಷ್ಟಿಯಿಂದ  ಇಂದು  ಒಟ್ಟು 72 ವಿಮಾನಗಳ  ಸಂಚಾರಕ್ಕೆ  ಅವಕಾಶ ಕಲ್ಪಿಸಿವೆ.

ಭಾರತದಿಂದ 8 ವಿಮಾನ ಸಂಚಾರ

ಪಶ್ಚಿಮ ಏಷ್ಯಾದಿಂದ ಬರುವ ಹಾಗೂ ಅಲ್ಲಿಗೆ  ತೆರಳುವ ವಿಮಾನಗಳು  ತುರ್ತು ಸೇವೆ ಒದಗಿಸಲಿವೆ. ಜೆಡ್ಡಾ ಮತ್ತು ಮಸ್ಕತ್ ಗಳ ನಡುವೆ  ಸಂಚಾರ ಇರಲಿದೆ. ಪ್ರಮುಖವಾಗಿ  ಭಾರತ ಮತ್ತು  ಜೆಡ್ಡಾ ನಡುವೆಯೇ 8 ವಿಮಾನಗಳು ಸಂಚರಿಸಲಿವೆ.  ಏರ್ ಇಂಡಿಯಾ ವಿಮಾನಗಳು ದೆಹಲಿ, ಮುಂಬೈ ಹಾಗೂ  ಏರ್ ಇಂಡಿಯಾ ಎಕ್ಸ್ ಪ್ರೆಸ್,  ಬೆಂಗಳೂರು ಕೋಯಿಕೋಡ್ ಮತ್ತಿತರೆ  ರಾಜ್ಯಗಳಿಗೆ  ಪಶ್ಚಿಮ ಏಷ್ಯಾದಿಂದ ಆಗಮಿಸಲಿವೆ

ಸದ್ಯದಲ್ಲಿ ದುಬೈಗೂ ವಿಮಾನ

ಈ ನಡುವೆ ಇಂಡಿಗೋ ಏರ್ ಲೈನ್ಸ್,  ದುಬೈ ಪರಿಸ್ಥಿತಿ ನೋಡಿಕೊಂಡು ಅಲ್ಲಿಗೆ ವಿಮಾನಗಳ ಸೇವೆ ಆರಂಭಿಸಲು  ಮುಂದಾಗಿದೆ.  ವಿಮಾನಗಳ  ಪ್ರಯಾಣದ ವೇಳಾಪಟ್ಟಿಯಲ್ಲಿ ಬದಲಾವಣೆಯಾಗುತ್ತಿರುವುದರಿಂದ ಪ್ರಯಾಣಿಕರಿಗೆ ಈ ಬಗ್ಗೆ ತಕ್ಷಣವೇ ಮಾಹಿತಿ  ರವಾನಿಸಲಾಗುತ್ತದೆ.  ಪ್ರಯಾಣಿಕರು ಸಹ  ವಿಮಾನಯಾನ ಸಂಸ್ಥೆಯ  ಅಂತರ್ಜಾಲವನ್ನು  ವೀಕ್ಷಿಸುತ್ತಿರಬೇಕು ಎಂದೂ ಸಹ  ಇಂಡಿಗೋ ವಿಮಾನಯಾನ ಸಂಸ್ಥೆ ತಿಳಿಸಿದೆ.

ಇದನ್ನೂ ಓದಿ: ಅಡುಗೆ ಅನಿಲ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಇಲ್ಲ: ಕೇಂದ್ರ

Leave a Reply

Your email address will not be published. Required fields are marked *