ಬೆಂಗಳೂರು: ಕನ್ನಡದ ಹೆಸರಾಂತ ನಟ ರಾಜ್ ಬಿ ಶೆಟ್ಟಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಇತ್ತೀಚೆಗಷ್ಟೇ ಅವರ ಅಭಿನಯದ 45 ಸಿನಿಮಾ ರಿಲೀಸ್ (45 Film) ಆಗಿ ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಇದೀಗ ಆ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗುತಿದ್ದು, ಈ ಬಗ್ಗೆ ನಟ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.
ಶಿವಣ್ಣ – ಉಪ್ಪಿ ಜೊತೆ ನಟಿಸಿದ್ದ ರಾಜ್
ಸಂಗೀತಾ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶನ ಮಾಡಿದ್ದ ಈ 45 ಸಿನಿಮಾದಲ್ಲಿ ರಅಜ್ ಬಿ ಶೆಟ್ಟಿ ಅವರು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಅವರ ಜೊತೆ ನಟಿಸಿದ್ದಾರೆ. ಈ ಸಿನಿಮಾ ಬಿಡುಗಡೆ ಆಗಿ ಕೇವಲ 1 ತಿಂಗಳಾಗಿದೆ. ಈಗಾಗಲೇ ಅದು ಒಟಿಟಿಗೆ ಬರಲು ಸಜ್ಜಾಗಿದೆ. ಈ ಬಗ್ಗೆ ಮಾತನಾಡಿದ ರಾಜ್ ಬಹಳ ಭಾವುಕರಾಗಿದ್ದು, ಸಿನಿಮಾ ಅನುಭವವನ್ನ ಹಂಚಿಕೊಂಡಿದ್ದಾರೆ.
ಜೀ-5 ಅಲ್ಲಿ 45 ಸಿನಿಮಾ
ಸದ್ಯ ಕನ್ನಡ ಸಿನಿಮಾ ರಂಗದಲ್ಲಿ ರಾಜ್ ಬೇಡಿಕೆಯ ನಟ ಅನಿಸಿಕೊಂಡಿದ್ದಾರೆ. ಒಂದೆಡೆ ನಿರ್ದೇಶನ , ನಟನೆ ಆದರೆ ಈಗ ನಿರ್ಮಾಣಕ್ಕೆ ಸಹ ಅವರು ಇಳಿದಿದ್ದಾರೆ. ಕನ್ನಡ ಮಾತ್ರವಲ್ಲದೇ ಪರಭಾಷೆಗಳಲ್ಲಿ ಸಹ ಅವರು ಅಭನಯದ ಮೂಲಕ ಮೋಡಿ ಮಾಡಿದ್ದಾರೆ. ಈಗ ತಮ್ಮ 45 ಸಿನಿಮಾದ ಬಗ್ಗೆ ಅವರು ಮಾತನಾಡಿದ್ದು, ಜನವರಿ-23 ರಿಂದಲೇ 45 ಸಿನಿಮಾ ಜೀ 5ನಲ್ಲಿ ಸ್ಟ್ರೀಮಿಂಗ್ ಆಗಲಿದೆ ಎಂದು ತಿಳಿಸಿದ್ದಾರೆ. ಹಾಗೆಯೇ, ಈ ಸಿನಿಮಾದಲ್ಲಿ ನಟನೆ ಮಾಡಿದ್ದು ತುಂಬಾ ಖುಷಿ ಕೊಟ್ಟಿದೆ. ಇಬ್ಬರು ಮಹಾನ್ ನಟರ ಜೊತೆ ನಟನೆ ಮಾಡಿದ್ದು ನಿಜಕ್ಕೂ ಹೆಮ್ಮೆಯ ವಿಚಾರವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಶಿವರಾಜ್ ಕುಮಾರ್ ಮತ್ತು ಉಪೇಂದ್ರ ಅವರು ತಮ್ಮ ಜೊತೆಗೆ ನಟಿಸೋಕೆ ನನಗೆ ಒಂದು ಅವಕಾಶ ಕೊಟ್ಟಿದ್ದಾರೆ. ಹಾಗೆ ಎಲ್ಲೂ ಅವರಿಬ್ಬರು ನಾನು ಸಣ್ಣವನು ಅಂತ ತೋರಿಸುವ ಕೆಲಸ ಮಾಡಿಲ್ಲ ಎಂದು ಭಾವುಕರಾಗಿ ಹೇಳಿದ್ದಾರೆ.
ಇದನ್ನೂ ಓದಿ: ನಟನಿಗೆ ಕಪಾಳಮೋಕ್ಷ ಮಾಡಿದ್ರ ಪೂಜಾ ಹೆಗ್ಡೆ? ವೈರಲ್ ಸುದ್ದಿಯ ಅಸಲಿ ಸತ್ಯ ಇಲ್ಲಿದೆ
