Abhishek Sharma: ಹೊಟ್ಟೆಯ ಸೋಂಕಿನಿಂದ ಅಭಿಷೇಕ್ ಶರ್ಮಾ ಆಸ್ಪತ್ರೆಗೆ ದಾಖಲು

Abhishek Sharma Hospitalised, Doubtful For match with Namibia

ಮುಂಬೈ: ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ (Abhishek Sharma) ಹೊಟ್ಟೆಯ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದು, ನಮೀಬಿಯಾ ವಿರುದ್ಧದ ಟಿ20 ವಿಶ್ವಕಪ್ ಪಂದ್ಯವನ್ನು ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

 ಹದಗೆಟ್ಟ ಆರೋಗ್ಯ ಪರಿಸ್ಥಿತಿ

ಮಾಹಿತಿಗಳ ಪ್ರಕಾರ, ಅಮೆರಿಕ ವಿರುದ್ಧದ ಹಿಂದಿನ ಪಂದ್ಯಕ್ಕೂ ಮುನ್ನ ಅವರು ಅಸ್ವಸ್ಥರಾಗಿದ್ದರು ಮತ್ತು ಪಂದ್ಯ ಆಡಿದ ನಂತರ ಅವರ ಸ್ಥಿತಿ ಹದಗೆಟ್ಟಿತು ಎನ್ನಲಾಗಿದೆ. ಮೂಲಗಳ ಪ್ರಕಾರ, ಅಭಿಷೇಕ್‌ಗೆ ಜ್ವರ ಹೆಚ್ಚಾಗಿತ್ತು ಮತ್ತು ತಕ್ಷಣ ಅವರಿಗೆ ಡ್ರಿಪ್ಸ್ ನೀಡಲಾಗಿದೆ. ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ತಂಡದ ಅಭ್ಯಾಸದಲ್ಲಿ ಸಹ ಅವರು ಭಾಗವಹಿಸಿರಲಿಲ್ಲ.

ವೈದ್ಯರ ಪ್ರಕಾರ, ಅವರಿಗೆ ಇನ್ನೂ ಹೊಟ್ಟೆಯಲ್ಲಿ ಕೆಲವು ಸಮಸ್ಯೆಗಳಿದ್ದು, ಎರಡು ದಿನಗಳಲ್ಲಿ ಅವರು ಪಂದ್ಯಕ್ಕೆ ಲಭ್ಯವಾಗುತ್ತಾರೆ ಎಂಬ ಭರವಸೆ ನಮಗಿದೆ ಎಂದು ಸಹಾಯಕ ಕೋಚ್ ರಯಾನ್ ಟೆನ್ ಡೋಸ್ಚೇಟ್ ಮಂಗಳವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಅಮೆರಿಕ ವಿರುದ್ಧದ ಪಂದ್ಯದ ವೇಳೆ, ಅಭಿಷೇಕ್ ಗೋಲ್ಡನ್ ಡಕ್‌ಗೆ ಔಟಾಗಿದ್ದರು, ಭಾರತದ ಬೌಲಿಂಗ್ ಸಮಯದಲ್ಲಿ ಅವರು ಮೈದಾನಕ್ಕೆ ಇಳಿಯಲಿಲ್ಲ. ಸಂಜು ಸ್ಯಾಮ್ಸನ್ ಇಡೀ ಇನ್ನಿಂಗ್ಸ್‌ನಲ್ಲಿ ಅವರ ಸ್ಥಾನದಲ್ಲಿ ಫೀಲ್ಡಿಂಗ್ ಮಾಡಿದ್ದರು.

ಖಾಸಗಿ ಆಸ್ಪತ್ರೆಗೆ ದಾಖಲು

ಹೊಟ್ಟೆಯ ಸೋಂಕಿನಿಂದಾಗಿ ಅಭಿಷೇಕ್ ಅವರನ್ನು ದೆಹಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಗೆಯೇ, ಕೆಲವು ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಆದರೆ ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಆಡುವ ಸದ್ಯಕ್ಕೆ ಅನುಮಾನಾಸ್ಪದವಾಗಿದೆ.

ಫೆಬ್ರವರಿ 12 ರಂದು ನಮೀಬಿಯಾ ವಿರುದ್ಧದ ಎರಡನೇ ಪಂದ್ಯಕ್ಕೂ ಮುನ್ನ ವಾಷಿಂಗ್ಟನ್ ಸುಂದರ್ ಭಾರತೀಯ ತಂಡವನ್ನು ಸೇರಿಕೊಂಡಿದ್ದಾರೆ ಎನ್ನಲಾಗಿದೆ.

ಮಂಗಳವಾರ ದೆಹಲಿಯಲ್ಲಿ ನಡೆದ ಪಂದ್ಯಪೂರ್ವ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡೋಸ್ಚೇಟ್, ಜಸ್ಪ್ರೀತ್ ಬುಮ್ರಾ ಅವರ ಫಿಟ್ನೆಸ್ ಸೇರಿದಂತೆ ಪ್ರಮುಖ ಆಟಗಾರರ ಬಗ್ಗೆಯೂ ಮಾಹಿತಿ ನೀಡಿದರು.

ಇದನ್ನೂ ಓದಿ: ಯೂ ಟರ್ನ್‌ ಹೊಡೆಯುತ್ತಾ ಪಾಕ್‌? ಐಸಿಸಿ ಮುಂದೆ ಪಿಸಿಬಿ ಇಟ್ಟ ಬೇಡಿಕೆಗಳೇನು?

Leave a Reply

Your email address will not be published. Required fields are marked *