ನವದೆಹಲಿ: ಭಾರತ ಮತ್ತು ಕೆನಡಾ ನಡುವಿನ ಸಂಬಂಧ ಮತ್ತೆ ಆರಂಭವಾಗುತ್ತಿದ್ದು, ತೈಲ ಮತ್ತು ಅನಿಲ (Petroleum Trade) ವ್ಯಾಪಾರವನ್ನು ವಿಸ್ತರಿಸಲು ಎರಡೂ ದೇಶಗಳು ಸಿದ್ದತೆ ಮಾಡಿಕೊಳ್ಳುತ್ತಿವೆ.
ಎರಡು ದೇಶಗಳ ನಡುವೆ ಒಪ್ಪಂದ
ಕೆನಡಾದ ಇಂಧನ ಸಚಿವ ಟಿಮ್ ಹಾಡ್ಗ್ಸನ್ ಮತ್ತು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ನಡುವಿನ ಸಭೆಯ ನಂತರ, ಕೆನಡಾ ಭಾರತಕ್ಕೆ ಹೆಚ್ಚಿನ ಕಚ್ಚಾ ತೈಲ, ದ್ರವೀಕೃತ ನೈಸರ್ಗಿಕ ಅನಿಲ ಮತ್ತು ದ್ರವೀಕೃತ ಪೆಟ್ರೋಲಿಯಂ ಅನಿಲವನ್ನು ನೀಡಲಿದೆ, ಹಾಗೆಯೇ, ಭಾರತವು ಕೆನಡಾಕ್ಕೆ ಹೆಚ್ಚಿನ ಸಂಸ್ಕರಿಸಿದ ಪೆಟ್ರೋಲಿಯಂ ಉತ್ಪನ್ನಗಳನ್ನು ಕಳುಹಿಸಲಿದೆ.
ಇಂದು ಗೋವಾದಲ್ಲಿ ನಡೆಯಲಿರುವ ಇಂಡಿಯಾ ಎನರ್ಜಿ ವೀಕ್‌ನಲ್ಲಿ ಸಭೆ ಸೇರಿ ಅನೇಕ ವಿಚಾರಗಳನ್ನ ಚರ್ಚೆ ಮಾಡಲಿದ್ದಾರೆ. ಎರಡೂ ದೇಶಗಳ ನಡುವಿನ ಇಂಧನ ಸಹಕಾರಕ್ಕೆ ಪ್ರಮುಖ ಮಾರ್ಗವಾಗಿದ್ದ ಈ ಕಾರ್ಯವಿಧಾನವು, ಕೆನಡಾದ ಸಿಖ್ ಕಾರ್ಯಕರ್ತನ ಹತ್ಯೆಯ ಸ್ಫೋಟಕ ವಿವಾದದ ನಡುವೆ ನಿಷ್ಕ್ರಿಯಗೊಂಡಿತ್ತು.
ಮುಂದಿನ ಭಾರತಕ್ಕೆ ಬರಲಿದ್ದಾರೆ ಕಾರ್ನಿ
ಅಮೆರಿಕದೊಂದಿಗೆ ವ್ಯಾಪಾರ ಉದ್ವಿಗ್ನತೆ ಹೆಚ್ಚುತ್ತಿರುವ ಸಮಯದಲ್ಲಿ ಕೆನಡಾದ ರಫ್ತು ಮಾರುಕಟ್ಟೆಗಳಲ್ಲಿ ಸ್ವಲ್ಪ ಬದಲಾವಣೆ ಮಾಡಲು ಪ್ರಧಾನಿ ಮಾರ್ಕ್ ಕಾರ್ನಿ ಅವರ ಪ್ರಮುಖ ಪ್ರಯತ್ನಗಳಲ್ಲಿ ಇದು ಒಂದಾಗಿದೆ.
ಹೊಡ್ಗಸನ್ ಮತ್ತು ಪುರಿ ಎರಡು ದೇಶಗಳ ಇಂಧನ ಕ್ಷೇತ್ರಗಳಲ್ಲಿ ಹೆಚ್ಚಿನ ಪರಸ್ಪರ ಹೂಡಿಕೆಯನ್ನು ಸುಗಮಗೊಳಿಸಲು ಮತ್ತು ಹೈಡ್ರೋಜನ್, ಜೈವಿಕ ಇಂಧನಗಳು, ಬ್ಯಾಟರಿ ಸಂಗ್ರಹಣೆ, ನಿರ್ಣಾಯಕ ಖನಿಜಗಳು, ವಿದ್ಯುತ್ ವ್ಯವಸ್ಥೆಗಳು ಮತ್ತು ಇಂಧನ ಉದ್ಯಮದಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆ ಸೇರಿದಂತೆ ಕ್ಷೇತ್ರಗಳಲ್ಲಿ ಸಹಯೋಗವನ್ನು ಅನ್ವೇಷಿಸುವ ಬಗ್ಗೆ ಆಲೋಚನೆ ಮಾಡಲಾಗುತ್ತಿದೆ. ಮುಂದಿನ ವಾರಗಳಲ್ಲಿ ಕಾರ್ನಿ ಭಾರತಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ.
ಇದನ್ನೂ ಓದಿ: ವಿದೇಶದಲ್ಲೂ ಗಣರಾಜ್ಯೋತ್ಸವ ಸಂಭ್ರಮ, ಬಾಂಗ್ಲಾದಲ್ಲಿ ಭಾರತೀಯ ಸೈನಿಕರಿಗೆ ಗೌರವ ನಮನ
