ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಆಗಿರುವ ಹಿನ್ನೆಯಲ್ಲಿ ಬೆಂಗಳೂರು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ನಿನ್ನೆ ಮಳೆ ಆಗಿದೆ. ಇಂದೂ ಸಹ ಮಳೆ ಆಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ (Weather Report) ಮಾಹಿತಿ ನೀಡಿದೆ.
ಇನ್ನೂ 3 ದಿನ ಇದೇ ವಾತಾವರಣ
ಈ ವಾಯುಭಾರ ಕುಸಿತದ ಪರಿಣಾಮ ರಾಜ್ಯದ ಹಲವು ಭಾಗಗಳಲ್ಲಿ ಹವಾಮಾನ ಬದಲಾವಣೆ ಆಗಿದೆ. ಅದರಲ್ಲೂ ನಿನ್ನೆ ಅನೇಕ ಜಿಲ್ಲೆಗಲ್ಲಿ ತುಸು ಮಳೆ ಆಗಿದ್ದು, ಚಳಿಯಲ್ಲಿ ಸಹ ಏರಿಕೆ ಆಗಿದೆ. ಇನ್ನೂ 2-3 ದಿನಗಳ ಕಾಲ ಇದೇ ವಾತಾವರಣ ಮುಂದುವರಿಯುವ ಸಾಧ್ಯತೆ ಇದ್ದು, ಕೆಲ ಜಿಲ್ಲೆಗಳಲ್ಲಿ ಒಣಹವೆ ಇರಲಿದೆ.
ರಾಜಧಾನಿ ಬೆಂಗಳೂರು ಸೇರಿ ದಕ್ಷಿಣ ಒಳನಾಡಿನ 9 ಜಿಲ್ಲೆಗಳಲ್ಲಿ ಸೋಮವಾರ ಜಿಟಿಜಿಟಿ ಮಳೆ ಆಗಿದೆ. ಅದೇ ರೀತಿ ಮಂಗಳವಾರ ಸಹ ಬೆಂಗಳೂರು, ಮೈಸೂರು, ಭಾಗದಲ್ಲಿ ಮಳೆ ಆಗುವ ಸಾಧ್ಯತೆ ಇದೆ. ಹಾಗೆಯೇ, ಕೆಲ ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಕೊಡಗು, ಹಾಸನದಲ್ಲಿ ತಂಪುಗಾಳಿ, ಮಲೆನಾಡಿನ ಶಿವಮೊಗ್ಗ ಮತ್ತು ಚಿಕ್ಕಮಗಳೂರಿನಲ್ಲಿ ಮಳೆಯ ಮುನ್ಸೂಚನೆ ಇದೆ. ಮುಂದಿನ 48 ಗಂಟೆಗಳಲ್ಲಿ ಇದೇ ವಾತಾವರಣ ಇರಲಿದೆ ಎಂದು ಇಲಾಖೆ ಸೂಚನೆ ನೀಡಿದೆ.
ಕಡಿಮೆ ಆಗಲಿದೆ ಚಳಿ ಪ್ರಮಾಣ
ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಚಳಿ ಬಹಳ ಜಾಸ್ತಿ ಇದೆ. ಜನವರಿ ಆರಂಭವಾದರೂ ಸಹ ಸ್ವಲ್ಪವೂ ಕಡಿಮೆ ಆಗದೇ ಚಳಿ ಜಾಸ್ತಿ ಆಗುತ್ತಿದೆ. ಅದರಲ್ಲೂ ವಾಯುಭಾರ ಕುಸಿತದ ಕಾರಣದಿಂದ ಮತ್ತಷ್ಟು ಜಾಸ್ತಿ ಆಗುತ್ತಿದೆ. ಆದರೆ ಇನ್ನೇನು ಕೆಲವೇ ವಾರದಲ್ಲಿ ಈ ಚಳಿಯ ಪ್ರಮಾಣ ಕಡಿಮೆ ಆಗಲಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ನರೇಗಾ ಉಳಿಸಲು ಇಂದು ಕಾಂಗ್ರೆಸ್ ಪ್ರತಿಭಟನೆ, ಪಂಚಾಯಿತಿ ಮಟ್ಟದಲ್ಲೂ ಹೋರಾಟ: ಡಿಕೆ ಶಿವಕುಮಾರ್
