CM Siddaramaiah: ಅಪೆಕ್ಸ್ ಬ್ಯಾಂಕ್ ಚುನಾವಣಾ ಅಖಾಡಕ್ಕೆ ಸಿಎಂ ಎಂಟ್ರಿ, ರಾಜಣ್ಣ ಪರ ಬ್ಯಾಟ್‌ ಬೀಸ್ತಾರಾ ಸಿದ್ದರಾಮಯ್ಯ?

CM Siddaramaiah meeting with apex bank directors

ಬೆಂಗಳೂರು: ಅಪೆಕ್ಸ್ ಬ್ಯಾಂಕ್ ಚುನಾವಣೆ  (Apex Bank Election) ವಿಚಾರವಾಗಿ ಕುತೂಹಲ ಹೆಚ್ಚಾಗಿದ್ದು, ಅಖಾಡಕ್ಕೆ ಸಿಎಂ ಸಿದ್ದರಾಮಯ್ಯ (CM Siddaramaiah) ಎಂಟ್ರಿ ಕೊಟ್ಟಿದ್ದಾರೆ.

ಸಿಎಂ ಹಾಗೂ ಡಿಸಿಎಂ ಬಣದ ನಡುವೆ ಪೈಪೋಟಿ

ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕಾಗಿ ಪೈಪೋಟಿ ನಡೆಯುತ್ತಿದ್ದು, ಮುಖ್ಯವಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ಅವರ ಬಂಗಳ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ. ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನದ ಮೇಲೆ‌ ಮಾಜಿ ಸಚಿವ ಕೆಎನ್ ರಾಜಣ್ಣ ಕಣ್ಣಿಟ್ಟಿದ್ದು, ಡಿಸಿಎ ಡಿಕೆಶಿ ಆಪ್ತ ಎಂಎಲ್ಸಿ ಎಸ್ ರವಿ ಸಹ ಆ ಸ್ಥಾನಕ್ಕಾಗಿ ಸರ್ಕಸ್‌ ಮಾಡುತ್ತಿದ್ದಾರೆ.

ನಿರ್ದೇಶಕರುಗಳ ಜೊತೆಗೆ ಸಿಎಂ ಸಭೆ

ಸದ್ಯ ಬ್ಯಾಂಕ್‌ ಚುನಾವಣೆ ಬಹಳ ಕುತೂಹಲ ಮೂಡಿಸಿದ್ದು, ಇಂದು ಸಂಜೆ 6 ಗಂಟೆಗೆ ಗೃಹ ಕಚೇರಿ ಕೃಷ್ಣದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಅಪೆಕ್ಸ್ ಬ್ಯಾಂಕ್ ನೂತತ ನಿರ್ದೇಶಕರಗಳ ಜೊತೆಗೆ ಸಭೆ ಮಾಡಲಿದ್ದಾರೆ. ಜನವರಿ 29 ರಂದು ನಾಮಪತ್ರ ಸಲ್ಲಿಕೆ ಮಾಡಲು ಅವಕಾಶ ನೀಡಲಾಗಿದ್ದು, ಮಾಜಿ ಸಚಿವ ಕೆ‌.ಎನ್ ರಾಜಣ್ಣ ಪರ ಸಿಎಂ ಬ್ಯಾಟ್ ಬೀಸುವ ಸಾಧ್ಯತೆ ಇದೆ. ಹಾಗಾಗಿ ಈ ಚಹಾಕೂಟದ ನಂತರ ಮತದಾನ ನಡೆಯುತ್ತಾ, ಅವಿರೋಧ ಆಯ್ಕೆ ಆಗುತ್ತಾ? ಎನ್ನುವ ಚರ್ಚೆ ಆರಂಭ ಆಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಗಣರಾಜ್ಯೋತ್ಸವ ಸಂಭ್ರಮ, ಮಾಣಿಕ್ ಷಾ ಧ್ವಜ ಹಾರಿಸಿದ ರಾಜ್ಯಪಾಲರು

Leave a Reply

Your email address will not be published. Required fields are marked *