ದಾವೋಸ್: ಸ್ವಿಟ್ಜರ್‌ಲ್ಯಾಂಡ್‌ನ ದಾವೋಸ್‌ನಲ್ಲಿ 56 ನೇ ವಾರ್ಷಿಕ ವಿಶ್ವ ಆರ್ಥಿಕ ವೇದಿಕೆಯಲ್ಲಿ (WEF) ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump), ತಮ್ಮ ಸರ್ವಾಧಿಕಾರಿ ಕನಸಿನ ಬಗ್ಗೆ ಮತ್ತೊಮ್ಮೆ ಮಾತನಾಡಿದ್ದಾರೆ.
ನಾನು ಸರ್ವಾಧಿಕಾರಿ ಎಂದ ಟ್ರಂಪ್
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಡೊನಾಲ್ಡ್ ಟ್ರಂಪ್, ತಮ್ಮನ್ನು ತಾವು ‘ನಾನು ಸರ್ವಾಧಿಕಾರಿ’ ಎಂದು ಕರೆದಿದ್ದಾರೆ. ಅಲ್ಲದೇ, ತಮ್ಮ ನಾಯಕತ್ವದ ಶಯಲಿಯ ಬಗ್ಗೆ ಹಾಗೂ ರಾಜಕೀಯ ನೀತಿಗಳ ಬಗ್ಗೆ ಮಾತನಾಡಿದ್ದು, ತಮ್ಮ ನಿರ್ಧಾರಗಳನ್ನ ಸಮರ್ಥಿಸಿಕೊಂಡಿದ್ದಾರೆ. ಈ ಸಮಯದಲ್ಲಿಯೇ ಅವರು ತಮ್ಮನ್ನ ನಾವು ಸರ್ವಾಧಿಕಾರಿ ಎಂದು ಕರೆದುಕೊಂಡಿದ್ದಾರೆ.
ಬುಧವಾರ ನಡೆದ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದು, ಶೃಂಗಸಭೆಯಲ್ಲಿ ನೀಡಿದ ತಮ್ಮ ಭಾಷಣಕ್ಕೆ ತಾವೇ ಅಭಿನಂದಿಸಿಕೊಂಡಿದ್ದಾರೆ.
ಟ್ರಂಪ್ ಹೇಳಿದ್ದೇನು?
ನಾನು ಉತ್ತಮ ಭಾಷಣ ಮಾಡಿದ್ದೇನೆ, ನನ್ನ ಭಾಷಣದ ಬಗ್ಗೆ ನನಗೆ ಉತ್ತಮ ವಿಮರ್ಶೆಗಳು ಬಂದಿವೆ. ನನಗೆ ನಂಬಲು ಸಾಧ್ಯವಾಗಿಲ್ಲ, ಆ ಭಾಷಣದ ಬಗ್ಗೆ ನಮಗೆ ಉತ್ತಮ ವಿಮರ್ಶೆಗಳು ಬಂದಿವೆ ಎಂದು ಟ್ರಂಪ್ ಹೇಳಿದ್ದಾರೆ. ಇನ್ನು ತಮ್ಮ ಭಾಷಣದ ಸಮಯದಲ್ಲಿ ಅವರು ಪದೇ ಪದೇ ಗ್ರೀನ್‌ಲ್ಯಾಂಡ್ ಅನ್ನು ಉಲ್ಲೇಖ ಮಾಡುತ್ತಿದ್ದರು. ಅಲ್ಲದೇ, ಅಮೆರಿಕ ಅದನ್ನ ಸ್ವಾಧೀನಪಡಿಸಿಕೊಳ್ಳಬೇಕು ಎಂದು ಒತ್ತಾಯ ಮಾಡುತ್ತಲೇ ಇದ್ದರು. ಅಲ್ಲದೇ, ಕೆನಡಾ ಮತ್ತು ಯುರೋಪ್ ಸ್ವಾಧೀನವನ್ನು ವಿರೋಧಿಸಿದರೆ ಅವುಗಳ ವಿರುದ್ಧ ಹೊಸ ಸುಂಕಗಳನ್ನು ಹಾಕುವುದಾಗಿ ವಾರ್ನಿಂಗ್ ಸಹ ಕೊಟ್ಟಿದ್ದಾರೆ.
ಅಲ್ಲದೇ, ಡೆನ್ಮಾರ್ಕ್ ಮತ್ತು ಗ್ರೀನ್‌ಲ್ಯಾಂಡ್ ಜೊತೆಗೆ ಒಂದು ಒಪ್ಪಂದಕ್ಕೆ ಬರುತ್ತಿದ್ದೇವೆ, ಮಿಲಿಟರಿ ಬಳಸಿ ಅಥವಾ ಟ್ಯಾರಿಫ್ ಹಾಕಿ ಒತ್ತಡ ಹೇರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ರಷ್ಯಾ ಮತ್ತು ಚೀನಾ ಅಲ್ಲಿಗೆ ಬರದಂತೆ ಭದ್ರತೆಗಾಗಿ ಇದು ಬಹಳ ಮುಖ್ಯವಾಗುತ್ತದೆ, ಈಗಾಗಲೇ ಕೆಲವು ಟ್ಯಾರಿಫ್‌ಗಳನ್ನು ರದ್ದು ಮಾಡಿದ್ದೇವೆ ಎಂದೂ ಸಹ ಈ ಸಮಯದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: 77ನೇ ಗಣರಾಜ್ಯೋತ್ಸವ ಹಿನ್ನೆಲೆ, ಇಸ್ರೋ ಅಧ್ಯಕ್ಷರಿಗೆ ರಾಷ್ಟ್ರಪತಿ ಭವನ ಕಾರ್ಯಕ್ರಮಕ್ಕೆ ಆಹ್ವಾನ
