ನಮ್ಮ ಆಹಾರ ಪದ್ಧತಿ ಆರೋಗ್ಯದ ಗುಟ್ಟು ಎಂದರೆ ತಪ್ಪಾಗಲಾರದು. ಮಾವು ಯಾವ ರೀತಿ ಆಹಾರಗಳನ್ನ ಸೇವನೆ ಮಾಡುತ್ತವೆಯೋ ಅವು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ನಾವು ನಮ್ಮ ಆರೋಗ್ಯವನ್ನ ಕಾಪಾಡಿಕೊಳ್ಳಲು ಆರೋಗ್ಯಕರ ಆಹಾರಗಳನ್ನ ಸೇವನೆ ಮಾಡುವುದು ಬಹಳ ಮುಖ್ಯ. ನಮ್ಮ ಆಹಾರದಲ್ಲಿ ಬೀಜಗಳನ್ನ, ಹಣ್ಣು-ತರಕಾರಿಗಳನ್ನ ಸೇರಿಸಿಕೊಳ್ಳುವುದರಿಂದ ಬಹಳ ಪ್ರಯೋಜನಗಳನ್ನ ಪಡೆಯಬಹುದು. ಅನೇಕ ಆರೋಗ್ಯ ಪ್ರಯೋಜನಗಳನ್ನ ಹೊಂದಿರುವ ಒಂದು ಬೀಜ ಎಂದರೆ ಅದು ಚಿಯಾ ಬೀಜಗಳು. ಈ ಬೀಜಗಳು ಅನೇಕ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ. ಹಾಗಾದ್ರೆ ಈ ಚಿಯಾ ಬೀಜದ (Chia Seeds) ಪ್ರಯೋಜನಗಳೇನು ಎಂಬುದು ಇಲ್ಲಿದೆ.
ಚಿಯಾ ಬೀಜಗಳಲ್ಲಿ ಉತ್ಕರ್ಷಣ ನಿರೋಧಕಗಳು, ಒಮೆಗಾ-3 ಕೊಬ್ಬಿನಾಮ್ಲಗಳು, ಖನಿಜಗಳು, ಫೈಬರ್ ಸೇರಿದಂತೆ ಇನ್ನೂ ಹೆಚ್ಚಿನ ಪೋಷಕಾಂಶಗಳಿದೆ. ಕೇವಲ 2 ಚಮಚ ಚಿಯಾ ಬೀಜಗಳು ಸುಮಾರು 5 ಗ್ರಾಂ ಪ್ರೋಟೀನ್, 9 ಗ್ರಾಂಗಿಂತ ಹೆಚ್ಚು ಫೈಬರ್, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಕಬ್ಬಿಣ, ರಂಜಕ, ಸತು ಮತ್ತು ಹೇರಳವಾದ ವಿಟಮಿನ್ ಬಿ 1 ಮತ್ತು ಬಿ 3 ಅನ್ನು ಹೊಂದಿರುತ್ತವೆ.
ತೂಕ ಇಳಿಕೆಗೆ ಸಹಾಯ ಮಾಡುತ್ತದೆ
ಚಿಯಾ ಬೀಜಗಳಲ್ಲಿರುವ ಫೈಬರ್ ಜೀರ್ಣಾಂಗ ವ್ಯವಸ್ಥೆಯನ್ನು ಸರಾಗವಾಗಿ ನಡೆಸಲು ಸಹಾಯ ಮಾಡುತ್ತದೆ. ಚಿಯಾ ಬೀಜಗಳನ್ನು ಸೇವಿಸುವುದರಿಂದ ಮಲಬದ್ಧತೆಯಂತಹ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ. ಇದು ತೂಕ ಇಳಿಸಿಕೊಳ್ಳಲು ಅಥವಾ ತಮ್ಮ ತೂಕವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವವರಿಗೆ ಬಹಳ ಸಹಾಯಕವಾಗಿದೆ.
ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ
ಅತಿಯಾದ ತೂಕ ಹೆಚ್ಚಾಗುವುದು ಅನೇಕ ಸಮಸ್ಯೆಗಳಿಗೆ ಮೂಲ ಕಾರಣವಾಗಬಹುದು. ಚಿಯಾ ಬೀಜಗಳು ತೂಕ ಹೆಚ್ಚಾಗುವುದರಿಂದ ಉಂಟಾಗುವ ಈ ಸಮಸ್ಯೆಗಳ ವಿರುದ್ಧ ರಕ್ಷಣೆ ನೀಡುತ್ತದೆ. ಅವುಗಳನ್ನು ಸೇವಿಸುವುದರಿಂದ ದೇಹದಲ್ಲಿ HDL (ಒಳ್ಳೆಯ ಕೊಲೆಸ್ಟ್ರಾಲ್) ಮಟ್ಟವನ್ನು ಹೆಚ್ಚಿಸಲು ಮತ್ತು LDL (ಕೆಟ್ಟ ಕೊಲೆಸ್ಟ್ರಾಲ್) ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರರ್ಥ ಚಿಯಾ ಬೀಜಗಳು ಕೊಲೆಸ್ಟ್ರಾಲ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಹೃದಯದ ಆರೋಗ್ಯಕ್ಕೆ
ಚಿಯಾ ಬೀಜಗಳು ನೈಸರ್ಗಿಕವಾಗಿ ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ ಎನ್ನಲಾಗುತ್ತದೆ. ಈ ಬೀಜಗಳು ಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ಒಮೆಗಾ-6 ಕೊಬ್ಬಿನಾಮ್ಲಗಳನ್ನು ಹೊಂದಿರುತ್ತವೆ, ಇದು ಹೃದಯಾಘಾತ ಮತ್ತು ಹೃದಯರಕ್ತನಾಳದ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಚಿಯಾ ಬೀಜಗಳ ನಿಯಮಿತ ಸೇವನೆಯು ಆರೋಗ್ಯಕರ ಹೃದಯವನ್ನು ಕಾಪಾಡಿಕೊಳ್ಳುವಲ್ಲಿ ಮುಖ್ಯವಾಗುತ್ತದೆ. ಇದರಲ್ಲಿ ಇರುವ ವಿಶೇಷ ಉತ್ಕರ್ಷಣ ನಿರೋಧಕಗಳು ಯಕೃತ್ತಿನ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಸಹ ಮುಖ್ಯವಾಗುತ್ತದೆ.
ಇದನ್ನೂ ಓದಿ: ಪ್ರತಿದಿನ ಬೆಂಡೆಕಾಯಿ ನೀರು ಕುಡಿರಿ, ಆಮೇಲೆ ಮ್ಯಾಜಿಕ್ ನೋಡಿ
