Video Viral Case: 10 ದಿನ ರಜೆ ಹಾಕಿ ರಹಸ್ಯ ಸ್ಥಳಕ್ಕೆ ತೆರಳಿದ ರಾಮಚಂದ್ರರಾವ್

dgp ramachandra rao Video Viral Case officer reaction

ಬೆಂಗಳೂರು: ರಾಸಲೀಲೆ ವೀಡಿಯೋ ವೈರಲ್ (Video Viral Case) ಪ್ರಕರಣಕ್ಕೆ ಸಂಬಂಧಪಟ್ಟಂತೆ ಡಿಜಿಪಿ ರಾಮಚಂದ್ರ ರಾವ್‌ ಅವರು ಕಾನೂನು ಹೋರಾಟದ ಬಗ್ಗೆ ಯೋಚನೆ ಮಾಡಿದ್ದಾರೆ ಎನ್ನಲಾಗಿದೆ.

ರಹಸ್ಯ ಸ್ಥಳದಲ್ಲಿ ಡಿಜಿಪಿ

ಸದ್ಯದ ಮಾಹಿತಿಗಳ ಪ್ರಕಾರ,  ರಾಮಚಂದ್ರ ರಾವ್‌ ಅವರು ರಹಸ್ಯ ಸ್ಥಳದಲ್ಲಿ ಕಾನೂನಾತ್ಮಕ‌ ಹೋರಾಟದ ಬಗ್ಗೆ ಚರ್ಚೆ ಮಾಡಿದ್ದು, ತಮ್ಮ ವಕೀಲರ ತಂಡದ ಜೊತೆ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ. ಈ ವಿಚಾರವಾಗಿ ದೂರು ಕೊಡುವ ಬಗ್ಗೆ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.

ಅಜ್ಞಾತ ಸ್ಥಳಕ್ಕೆ ತೆರಳಿದ ರಾವ್‌

ಇನ್ನು ಈ ಘಟನೆಯ ವಿಡಿಯೋ ಹೊರಬಂದ ನಂತರ ಅವರು ಪ್ರತಿಕ್ರಿಯೆ ನೀಡಿದ್ದರು. ಆದರೆ ಅದರ ನಂತರ ಅವರು ಯಾರ ಕರೆಯನ್ನೂ ಸ್ವಿಕರಿಸದೇ ಅಜ್ಞಾತ ಸ್ಥಳಕ್ಕೆ ತೆರಳಿದ್ದು, 10 ದಿನ ರಜೆ ಹಾಕಿ ಹೋಗಿದ್ದಾರೆ ಎನ್ನುವ ಮಾಹಿತಿ ಇದೆ.

ನಕಲಿ ವಿಡಿಯೋ ಎಂದ ರಾವ್‌

ಇನ್ನು ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದ ರಾವ್‌ ಅವರು, ಅದು ಬಹಳ ಹಳೆಯ ವಿಡಿಯೋ ಅದನ್ನ ಮಾರ್ಫ್‌ ಮಾಡಲಾಗಿದೆ. ಸುಮಾರು 8 ವರ್ಷಗಳ ಹಿಂದಿನ ವಿಡಿಯೋ ಆಗಿದೆ. ಆ ಸಮಯದಲ್ಲಿ ನಾನು ಬೆಳಗಾವಿಯಲ್ಲಿ ಕೆಲಸ ಮಾಡುತ್ತಿದ್ದೆ. ಇದೊಂದು ನಕಲಿ ವಿಡಿಯೋ ಆಗಿದೆ. ಈ ಬಗ್ಗೆ ನನ್ನ ವಕೀಲರ ಜೊತೆ ಚರ್ಚೆ ಮಾಡಿ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪೊಲೀಸ್ ಅಧಿಕಾರಿ ವಿಡಿಯೋ ಪ್ರಕರಣ, ಅಕ್ಷಮ್ಯ ಅಪರಾಧ ಎಂದ ಶಾಸಕ ಸುರೇಶ್‌ ಕುಮಾರ್

Leave a Reply

Your email address will not be published. Required fields are marked *