Alyssa Healy: ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ನಾಯಕಿ ನಿವೃತ್ತಿ ಘೋಷಣೆ, ಅಲಿಸ್ಸಾ ಹೀಲಿ ನಿರ್ಧಾರಕ್ಕೆ ಕಾರಣವೇನು?

Australia captain alyssa healy announces retirement

ನವದೆಹಲಿ: ಆಸ್ಟ್ರೇಲಿಯಾದ ಕ್ರಿಕೆಟ್‌ ಆಟಗಾರ್ತಿ ಹಾಗೂ ತಂಡದ ನಾಯಕಿ ಅಲಿಸ್ಸಾ ಹೀಲಿ (Alyssa Healy) ದಿಢೀರ್ ನಿವೃತ್ತಿ ಘೋಷಣೆ ಮಾಡಿದ್ದಾರೆ.

ಫೆಬ್ರವರಿ-ಮಾರ್ಚ್‌ ನಂತರ ಆಟದಿಂದ ನಿವೃತ್ತಿ

ಮಾಹಿತಿಗಳ ಪ್ರಕಾರ ಹೀಲಿ ಅವರು ಈ ವರ್ಷದ ಫೆಬ್ರವರಿ-ಮಾರ್ಚ್‌ನಲ್ಲಿ ನಡೆಯುವ ಭಾರತದ ವಿರುದ್ಧದ ಮಲ್ಟಿ-ಫಾರ್ಮ್ಯಾಟ್ ತವರಿನ ಸರಣಿಯ ನಂತರ ಕ್ರಿಕೆಟ್‌ನ ಎಲ್ಲಾ ರೂಪಗಳಿಂದ ನಿವೃತ್ತಿ ಪಡೆದುಕೊಳ್ಳಲಿದ್ದಾರೆ ಎನ್ನಲಾಗಿದೆ.  

ಯುವ ಆಟಗಾರ್ತಿಯರಿಗೆ ಅವಕಾಶ ಸಿಗಬೇಕು

ಅಲ್ಲದೇ, ಹೀಲಿ ಅವರು ಅದರ ನಂತರ ನಡೆಯುವ ಭಾರತದ ವಿರುದ್ಧದ T20I ಪಂದ್ಯಗಳಲ್ಲೂ ಭಾಗವಹಿಸುವುದಿಲ್ಲ ಎನ್ನುವ ಮಾಹಿತಿ ಇದೆ, ಏಕೆಂದರೆ ಆಸ್ಟ್ರೇಲಿಯಾ ತಂಡ T20 ವಿಶ್ವಕಪ್‌ಗೆ ಈಗಾಗಲೇ ಸಿದ್ಧತೆ ನಡೆಸುತ್ತಿದೆ. ಹಾಗಾಗಿ ಯುವ ಆಟಗಾರ್ತಿಯರಿಗೆ ಅವಕಾಶ ಸಿಗಬೇಕೆಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಈ ಕಾರಣದಿಂದ ಅವರು ನಿವೃತ್ತಿ ನಿರ್ಧಾರ ತೆಗೆದುಕೊಂಡಿದ್ದಾರೆ. ಆದರೆ ಹೀಲಿ ಅವರು ಏಕದಿನ ಪಂದ್ಯಗಳು  ಮತ್ತು ಪರ್ತ್‌ನಲ್ಲಿ ನಡೆಯುವ ಒಂದು ಡೇ ಅಂಡ್-ನೈಟ್ ಟೆಸ್ಟ್ ಪಂದ್ಯಗಳ ನಾಯಕತ್ವ ವಹಿಸಲಿದ್ದಾರೆ.

ಇದನ್ನೂ ಓದಿ: ಟೀಂ ಇಂಡಿಯಾಗೆ ಶಾಕಿಂಗ್‌ ನ್ಯೂಸ್‌, ನ್ಯೂಜಿಲೆಂಡ್‌ ವಿರುದ್ದ ಆಡಲ್ಲ ರಿಷಬ್

Leave a Reply

Your email address will not be published. Required fields are marked *