ನಾವು ಮನೆಯಲ್ಲಿ ಅನೇಕ ವಸ್ತುಗಳನ್ನ ಅಲಂಕಾರಕ್ಕಾಗಿ ಬಳಕೆ ಮಾಡುತ್ತೇವೆ. ಆ ವಸ್ತುಗಳು ಸಹ ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತವೆ. ವಾಸ್ತುಶಾಸ್ತ್ರದ ಪ್ರಕಾರ ನಾವು ಯಾವುದೇ ವಸ್ತುಗಳನ್ನ ಮನೆಯಲ್ಲಿ ಇಟ್ಟುಕೊಂಡರೂ ಸಹ ಅವುಗಳಿಂದ ಯಾವ ರೀತಿ ಲಾಭ ಆಗುತ್ತದೆ ಹಾಗೂ ಸಮಸ್ಯೆಗಳಾಗುತ್ತದೆ ಎಂಬುದನ್ನ ತಿಳಿದುಕೊಳ್ಳಬೇಕು. ಹಾಗೆಯೇ, ಅನೇಕರ ಮನೆಯಲ್ಲಿ ಡ್ರೀಮ್ ಕ್ಯಾಚರ್ ಇರುತ್ತದೆ. ಇದನ್ನ ಇಷ್ಟಬಂದ ಜಾಗದಲ್ಲಿ ನೇತು ಹಾಕಿರುತ್ತಾರೆ. ಆದರೆ ಜ್ಯೋತಿಷ್ಯದ ಪ್ರಕಾರ ಈ ಡ್ರೀಮ್ ಕ್ಯಾಚರ್ (Dream Catcher) ಹಾಕಲು ಕೆಲ ನಿಯಮಗಳಿದೆ. ಅದೇ ರೀತಿ ಅವುಗಳನ್ನ ಹಾಕುವುದರಿಂದ ಅದೃಷ್ಟ ಸಹ ಬರುತ್ತದೆ ಎನ್ನಲಾಗುತ್ತದೆ. ಹಾಗಾದ್ರೆ ಈ ಡ್ರೀಮ್ ಕ್ಯಾಚರ್‌ನಿಂದ ಏನೆಲ್ಲಾ ಲಾಭ ಸಿಗುತ್ತದೆ ಹಾಗೂ ಯಾವ ರೀತಿ ಅದನ್ನ ಮನೆಯಲ್ಲಿ ಹಾಕಬೇಕು ಎಂಬುದು ಇಲ್ಲಿದೆ.
ಯಾವ ದಿಕ್ಕಿನಲ್ಲಿ ಡ್ರೀಮ್ ಕ್ಯಾಚರ್ ಹಾಕಬೇಕು?
ಸರಿಯಾದ ದಿಕ್ಕಿನಲ್ಲಿ ಇಡುವುದು ಬಹಳ ಮುಖ್ಯ. ನೀವು ಅದನ್ನು ತಪ್ಪಾಗಿ ಇಟ್ಟರೆ, ಅದರ ಸಂಪೂರ್ಣ ಸಕಾರಾತ್ಮಕ ಶಕ್ತಿ ನಿಮಗೆ ಸಿಗುವುದಿಲ್ಲ. ಆದ್ದರಿಂದ, ವಾಸ್ತು ಶಾಸ್ತ್ರದ ಪ್ರಕಾರ, ನಿಮ್ಮಡ್ರೀಮ್ ಕ್ಯಾಚರ್ ಅನ್ನು ಪೂರ್ವ ಅಥವಾ ವಾಯುವ್ಯ ದಿಕ್ಕಿನಲ್ಲಿ ಇಡಬೇಕು ಎನ್ನಲಾಗುತ್ತದೆ.
ಇನ್ನು ಡ್ರೀಮ್ ಕ್ಯಾಚರ್‌ಗಳ ನಿಯಮಗಳ ಪ್ರಕಾರ, ಅವುಗಳನ್ನು ನೇತುಹಾಕಬೇಕು, ಅಂಟಿಸಬಾರದು. ಡ್ರೀಮ್ ಕ್ಯಾಚರ್ ಗಾಳಿಯಲ್ಲಿ ಚಲಿಸಿದಾಗಲೆಲ್ಲಾ ಅದು ಸಕಾರಾತ್ಮಕ ಶಕ್ತಿಯನ್ನು ರವಾನಿಸುತ್ತದೆ ಎನ್ನುವ ನಂಬಿಕೆ ಇದೆ.
ಈ ಜಾಗದಲ್ಲಿ ಇಡಬೇಡಿ
ಎಣ್ಣೆ, ಮಸಾಲೆಗಳು, ಹೊಗೆ ಅಥವಾ ಗ್ರೀಸ್ ಇರುವ ಸ್ಥಳದಲ್ಲಿ ನಿಮ್ಮ ಡ್ರೀಮ್ ಕ್ಯಾಚರ್ ಅನ್ನು ಇಡಬೇಡಿ. ನೀವು ನಿಮ್ಮ ಡ್ರೀಮ್ ಕ್ಯಾಚರ್ ಅನ್ನು ಅಡುಗೆಮನೆಯಲ್ಲಿ ಇಟ್ಟರೆ ನಕರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಇದರಿಂದ ಮನೆಯಲ್ಲಿ ಸಮಸ್ಯೆಗಳನ್ನ ಅನುಭವಿಸಬೇಕಾಗುತ್ತದೆ.
