ಮಂಗಳೂರು: ಕಾಂತಾರ ಚಾಪ್ಟರ್ 1 ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸನ್ನ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ನಟ–ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಮತ್ತು ಚಿತ್ರತಂಡ ಮಂಗಳೂರಿನ ಬಾರೆಬೈಲು ವರಾಹ ಪಂಜುರ್ಲಿ, ಜಾರಂದಾಯ ಮತ್ತು ಬಂಟ ದೈವಸ್ಥಾನದಲ್ಲಿ ಹರಕೆ ನೇಮೋತ್ಸವ ಹರಕೆ ನೀಡಿದ್ದಾರೆ.
ಹರಕೆ ಕಟ್ಟಿಕೊಂಡಿದ್ದ ರಿಷಬ್ ಹಾಗೂ ಹೊಂಬಾಳೆ ಫಿಲ್ಮ್ಸ್
ಕಾಂತಾರ ಸಿನಿಮಾ ಯಶಸ್ಸಿಗೆ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲ್ಮ್ಸ್ ಚಿತ್ರತಂಡ ದೈವಕ್ಕೆ ಹರಕೆಯನ್ನು ಕಟ್ಟಿಕೊಂಡಿದ್ದರು. ಹಾಗಾಗಿ ಅದನ್ನ ಈಡೇರಿಸುವ ಉದ್ದೇಶದಿಂದ ಮಂಗಳೂರು ಭೇಟಿ ನೀಡಿದ್ದಾರೆ. ರಿಷಬ್ ತನ್ನ ಪತ್ನಿ ಪ್ರಗತಿ ಹಾಗೂ ಮಕ್ಕಳ ಸಮೇತರಾಗಿ ನೇಮೋತ್ಸವಕ್ಕೆ ಆಗಮಿಸಿದ್ದು, ಗಗ್ಗರ ಸೇವೆ ಜೊತೆಗೆ ಅನ್ನಸಂತರ್ಪಣೆ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಇದರ ಜೊತೆಗೆ ನಿರ್ಮಾಪಕ ವಿಜಯ್ ಕಿರಂಗದೂರು, ನಿರ್ದೇಶಕ ಸಂತೋಷ್ ಆನಂದ ರಾಮ್ ಸೇರಿದಂತೆ ಚಿತ್ರರಂಗದ ಅನೇಕ ಜನರು ಸಾಥ್ ನೀಡಿದ್ದಾರೆ.
ಇನ್ನು ಕಳೆದ ಎಪ್ರಿಲ್ ನಲ್ಲಿ ಇದೇ ದೈವಸ್ಥಾನದ ನೇಮೋತ್ಸವದಲ್ಲಿ ಭಾಗಿಯಾಗಿದ್ದರು. ಆ ಸಮಯದಲ್ಲಿ ರಿಷಬ್ ಶೆಟ್ಟಿ ಹಾಗೂ ಕುಟುಂಬಕ್ಕೆ ದೈವ ಅಭಯ ನೀಡಿತ್ತು. ಕಳೆದ ವರ್ಷ ಮಗನ ಹುಟ್ಟುಹಬ್ಬದ ದಿನ ಬಾರೆಬೈಲು ದೇವಸ್ಥಾನಕ್ಕೆ ರಿಷಬ್ ಶೆಟ್ಟಿ ಕುಟುಂಬ ಬಂದಿದ್ದರು.
ರಿಷಬ್ ಶೆಟ್ಟಿ ಮುಂದಿನ ಪ್ಲ್ಯಾನ್ ಏನು?
ಕಾಂತಾರ 1 ನಂತರ ರಿಷಬ್ ಶೆಟ್ಟಿಯ ಮುಂದಿನ ಚಿತ್ರ ಯಾವುದು? ಎನ್ನುವ ಅನುಮಾನ ಎಲ್ಲರಲ್ಲೂ ಮೂಡಿತ್ತು. ಆದರೆ ಈ ವಿಚಾರವಾಗಿ ರಿಷಬ್ ಅವರು ಅಧಿಕೃತವಾಗಿ ಆಹಿತಿ ನೀಡಿಲ್ಲ. ಕಾಂತಾರ ಗೆಲುವಿನ ನಂತರ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದು, ಕಾಂತಾರ ಮುಂದುವರೆದ ಅಧ್ಯಾಯ ಸದ್ಯಕ್ಕಂತೂ ಬರುವುದಿಲ್ಲ. ಆದರೆ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಇನ್ನೂ ಕೆಲ ದಿನಗಳ ಕಾಲ ಹಾಗೆಯೇ ಇರಲಿದೆ.
ಇದನ್ನೂ ಓದಿ: ದಾಸನ ಡಿಮ್ಯಾಂಡಿಗೆ ಓಕೆ ಅಂದ ಕೋರ್ಟ್, ಕೊನೆಗೂ ಸಿಕ್ತು ಟಿವಿ
