ಢೋಕ್ಲಾ ಬಹಳ ವಿಭಿನ್ನವಾದ ಗುಜರಾತಿ ಡಿಶ್. ಇದನ್ನ ಅನೇಕ ಮನೆಗಳಲ್ಲಿ ಬೆಳಗಿನ ತಿಂಡಿಯಾಗಿ ತಿನ್ನಲಾಗುತ್ತದೆ. ಆದರೆ ದಕ್ಷಿಣ ಭಾರತದಲ್ಲಿ ಸಂಜೆ ಸ್ನ್ಯಾಕ್ಸ್ ಆಗಿ ಸೇವನೆ ಮಾಡುತ್ತೇವೆ. ಇದರಲ್ಲಿ ಅನೇಕ ವಿಧಗಳಿದೆ. ಸದ್ಯ ಇವತ್ತು ಖಾಮನ್ ಢೋಕ್ಲಾ (Khaman Dhokla) ಮಾಡುವ ಸುಲಭ ವಿಧಾನವನ್ನ ಹೇಳಿಕೊಡ್ತೀವಿ. ಇಲ್ಲಿದೆ ಅದರ ಸುಲಭ ರೆಸಿಪಿ
ಖಾಮನ್ ಢೋಕ್ಲಾ ಪದಾರ್ಥಗಳು
ಬ್ಯಾಟರ್ ತಯಾರಿಸಲು
1 ಗ್ರಾಂ ಕಡಲೇ ಹಿಟ್ಟು
1 ಚಮಚ ರವೆ
1 ಟೀಸ್ಪೂನ್ ಶುಂಠಿ-ಹಸಿ ಮೆಣಸಿನಕಾಯಿ ಪೇಸ್ಟ್
1 ಸಕ್ಕರೆ
1/2 ಟೀಸ್ಪೂನ್ ಅರಿಶಿನ ಪುಡಿ
1 ನಿಂಬೆ ರಸ ಅಥವಾ ಬಿಳಿ ವಿನೆಗರ್
ಉಪ್ಪು
ENO – 1 ಸ್ಯಾಚೆಟ್ (1 ಟೀಸ್ಪೂನ್) ಅಥವಾ ½ ಟೀಸ್ಪೂನ್ ಅಡುಗೆ ಸೋಡಾ
ಅಗತ್ಯವಿದ್ದಷ್ಟು ನೀರು
ಒಗ್ಗರಣೆಗೆ
1 ½ ಚಮಚ ಎಣ್ಣೆ
1 ಟೀಸ್ಪೂನ್ ಸಾಸಿವೆ
ಎಳ್ಳು – 1 ಟೀಸ್ಪೂನ್
2 ಸೀಳಿದ ಹಸಿ ಮೆಣಸಿನಕಾಯಿಗಳು
ಇಂಗು – ಒಂದು ಚಿಟಿಕೆ
8-7 ಕರಿಬೇವು ಎಲೆಗಳು
2 ನೀರು
1 ಸಕ್ಕರೆ
ನಿಂಬೆ ರಸ
ಅಲಂಕಾರಕ್ಕೆ
ತಾಜಾ ಕೊತ್ತಂಬರಿ ಎಲೆಗಳು, ಕತ್ತರಿಸಿಕೊಳ್ಳಿ
ತಾಜಾ ತುರಿದ ತೆಂಗಿನಕಾಯಿ
ಖಮಾನ್ ಢೋಕ್ಲಾ ಮಾಡುವ ಸುಲಭ ವಿಧಾನ ಇಲ್ಲಿದೆ
ಬ್ಯಾಟರ್ ತಯಾರಿಸಲು
ಒಂದು ಮಿಕ್ಸಿಂಗ್ ಬೌಲ್‌ನಲ್ಲಿ ಬೇಸನ್, ರವೆ, ಅರಿಶಿನ, ಉಪ್ಪು, ಸಕ್ಕರೆ, ಶುಂಠಿ-ಮೆಣಸಿನಕಾಯಿ ಪೇಸ್ಟ್ ಮತ್ತು ನಿಂಬೆ ರಸವನ್ನು ಮಿಶ್ರಣ ಮಾಡಿ. ಕ್ರಮೇಣ ನೀರನ್ನು ಸೇರಿಸಿ, ಹಿಟ್ಟು ನಯವಾದ ಮತ್ತು ಉಂಡೆಗಳಿಲ್ಲದ ರೀತಿ ಹಿಟ್ಟನ್ನ ತಯಾರಿಸಿಕೊಳ್ಳಿ. ಇದನ್ನ ಬೇಯಿಸಲು ಇಡುವ ಮೊದಲು ಸ್ವಲ್ಪ ENO ಬೆರೆಸಿ ನಿಧಾನವಾಗಿ ಕಲಸಿ. ಆಗ ಹಿಟ್ಟು ಮೇಲೇರಿ ನೊರೆ ಬರುತ್ತದೆ.
ಢೋಕ್ಲಾವನ್ನು ಬಿಸಿ ಮಾಡುವ ವಿಧಾನ
ಒಂದು ಸ್ಟೀಲ್ ಪ್ಲೇಟ್ ಅಥವಾ ಪಾತ್ರೆಗೆ ಎಣ್ಣೆ ಹಚ್ಚಿ. ಬ್ಯಾಟರ್ ಅನ್ನು ಪ್ಲೇಟ್‌ಗೆ ಸುರಿಯಿರಿ. ಇದಕ್ಕೂ ಮೊದಲು ನೀವು ಕುಕ್ಕರ್ ಅಥವಾ ಸ್ಟೀಮರ್ ಅನ್ನ ಕಾಯಿಸಿಕೊಂಡಿರಿ. ಮಧ್ಯಮ ಉರಿಯಲ್ಲಿ 15–18 ನಿಮಿಷಗಳ ಕಾಲ ಸ್ಟೀಮ್ ಸ್ಟೀಮ್ ಮಾಡಿ. ಸಿದ್ಧವಾಗಿದೆಯೆ ಎಂದು ಚೆಕ್ ಮಾಡಲು ಟೂತ್‌ಪಿಕ್ ಬಳಕೆ ಮಾಡಿ. ಢೋಕ್ಲಾ ಸ್ವಲ್ಪ ತಣ್ಣಗಾಗಲು ಬಿಡಿ, ನಂತರ ಚೌಕಗಳಾಗಿ ಕತ್ತರಿಸಿ. ನಂತರ ಒಂದು ಸಣ್ಣ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಸಾಸಿವೆ ಹಾಕಿ ಚೆನ್ನಾಗಿ ಬಾಡಲು ಬಿಡಿ. ಅದಕ್ಕೆ ಎಳ್ಳು, ಹಸಿರು ಮೆಣಸಿನಕಾಯಿ, ಹಾಗೆಯೇ, ಹಿಂಗ್ ಮತ್ತು ಕರಿಬೇವು ಸೇರಿಸಿ.
ಇನ್ನೊಂದು ಪಾತ್ರೆಯಲ್ಲಿ ನೀರು, ನಿಂಬೆ ರಸ ಮತ್ತು ಸಕ್ಕರೆಯನ್ನು ಬೆರೆಸಿ ಬೇಗನೆ ಕುದಿಸಿ. ಈ ಒಗ್ಗರಣೆಯನ್ನು ಹಾಕುವ ಮೊದಲು ಸಕ್ಕರೆ ನೀರನ್ನ ಡೋಕ್ಲಾ ಮೇಲೆ ಹಾಕಿ, ಅದು ಹೀರಿಕೊಳ್ಳಲು ಬಿಡಿ. ನಂತರ ಒಗ್ಗರಣೆಯನ್ನ ಡೋಕ್ಲಾದ ಮೇಲೆ ಸಮವಾಗಿ ಸುರಿಯಿರಿ. ಈಗ ಅದರ ಮೇಲೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಮತ್ತು ತೆಂಗಿನಕಾಯಿ ತುರಿಯನ್ನ ಹಾಕಿ ಅಲಂಕರಿಸಿ.
