ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ದರ್ಶನ್ (Actor Darshan) ಮಾಡಿದ್ದ ಹೊಸ ಡಿಮ್ಯಾಂಡಿಗೆ ಕೋರ್ಟ್ ಒಪ್ಪಿಗೆ ನೀಡಿದ್ದು, ದಾಸ ಸ್ವಲ್ಪ ರಿಲ್ಯಾಕ್ಸ್ ಆಗಿದ್ದಾರೆ.
ನಿನ್ನೆ ನಡೆದ ವಿಚಾರಣೆ
ನಿನ್ನೆ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆ ನಡೆದಿದ್ದು, ಪವಿತ್ರಾ ಗೌಡ, ದರ್ಶನ್ ಸೇರಿ ಕೆಲ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು. ಈ ಸಮಯದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಕೊಠಡಿಯಲ್ಲಿ ಟಿವಿ ಹಾಕಿಸಿಕೊಂಡುವಂತೆ ಕೋರ್ಟ್ಗೆ ಮನವಿ ಮಾಡಿದ್ದರು. ದರ್ಶನ್ ಮಾತ್ರವಲ್ಲದೇ ಎಲ್ಲಾ ಆರೋಪಿಗಳು ಸಹ ಟಿವಿ ಹಾಕಿಸಿ ಕೊಡಿ ಎಂದು ಆರೋಪಿಗಳು ಮನವಿ ಮಾಡಿದ್ದರು. ವಿಚಾರವಾಗಿ ನ್ಯಾಯಾಧೀಶರು ಆದೇಶ ನೀಡಿದ್ದಾರೆ. ದರ್ಶನ್ ಬ್ಯಾರಕ್ ನಲ್ಲಿ ಟಿವಿ ಹಾಕಲು ಜಡ್ಜ್ ಅನುಮತಿ ನೀಡಿದ್ದು, ಈ ವಿಚಾರವಾಗಿ ಜೈಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದರ ಜೊತೆಗೆ ಟಿವಿ ಅಳವಡಿಕೆ ಮಾಡುವ ಜಾಗದಲ್ಲಿ ಸಿಸಿಟಿವಿ ಕೂಡ ಅಳವಡಿಸುವಂತೆ ಆದೇಶ ನೀಡಲಾಗಿದೆ ಎನ್ನಲಾಗುತ್ತಿದೆ.
64ನೇ ಸಿಟಿ ಸಿವಿಲ್ ಕೋರ್ಟ್ ಸಾಕ್ಷಿ ವಿಚಾರಣೆಗೆ ಸಂಬಂಧಿಸಿದಂತೆ ಸಹ ನಿನ್ನೆ ಆದೇಶ ನೀಡಿದ್ದು, ಮೊದಲು ಯಾರನ್ನ ವಿಚಾರಣೆ ಮಾಡಲು ನೊಟೀಸ್ ನೀಡಲಾಗ್ತಿದೆ ಎಂದು ಪ್ರಾಸಿಕ್ಯೂಷನ್ ಮಾಹಿತಿ ಕೊಟ್ಟಿದ್ದಾರೆ.
