Mineral Blocks: 200 ಖನಿಜ ಬ್ಲಾಕ್ ಯಶಸ್ವಿ ಹರಾಜು
ನವದೆಹಲಿ: 2025-26ನೇ ಹಣಕಾಸು ವರ್ಷದಲ್ಲಿ ಭಾರತದ ಖನಿಜ ವಲಯ 200 ಖನಿಜ ಬ್ಲಾಕ್ (Mineral Blocks) ಗಳ ಯಶಸ್ವಿ ಹರಾಜಿನೊಂದಿಗೆ ಮಹತ್ವದ ಮೈಲಿಗಲ್ಲು ಸಾಧಿಸಿದೆ. ಇದು ಈ ಸಾಲಿನ ಅತ್ಯಧಿಕ ದಾಖಲೆಯಾಗಿದೆ. 123 ಗಣಿಗಾರಿಕೆ ಗುತ್ತಿಗೆ ಬ್ಲಾಕ್ ಈ ಸಾಧನೆಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಬಲವಾದ ಸಹಕಾರಿ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತದೆ. ಹರಾಜಾದ 200 ಬ್ಲಾಕ್ ಗಳ ಪೈಕಿ 123 ಗಣಿಗಾರಿಕೆ ಗುತ್ತಿಗೆ ಬ್ಲಾಕ್ ಗಳಾಗಿದ್ದು, 77 ಪರವಾನಗಿ ಪಡೆದ ಬ್ಲಾಕ್ ಗಳಾಗಿವೆ ಎಂದು ಕಲ್ಲಿದ್ದಲು…
