ನವದೆಹಲಿ: 2025-26ನೇ ಹಣಕಾಸು ವರ್ಷದಲ್ಲಿ ಭಾರತದ ಖನಿಜ ವಲಯ 200 ಖನಿಜ ಬ್ಲಾಕ್ (Mineral Blocks) ಗಳ ಯಶಸ್ವಿ ಹರಾಜಿನೊಂದಿಗೆ ಮಹತ್ವದ ಮೈಲಿಗಲ್ಲು ಸಾಧಿಸಿದೆ. ಇದು ಈ ಸಾಲಿನ ಅತ್ಯಧಿಕ ದಾಖಲೆಯಾಗಿದೆ.
123 ಗಣಿಗಾರಿಕೆ ಗುತ್ತಿಗೆ ಬ್ಲಾಕ್
ಈ ಸಾಧನೆಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಬಲವಾದ ಸಹಕಾರಿ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತದೆ. ಹರಾಜಾದ 200 ಬ್ಲಾಕ್ ಗಳ ಪೈಕಿ 123 ಗಣಿಗಾರಿಕೆ ಗುತ್ತಿಗೆ ಬ್ಲಾಕ್ ಗಳಾಗಿದ್ದು, 77 ಪರವಾನಗಿ ಪಡೆದ ಬ್ಲಾಕ್ ಗಳಾಗಿವೆ ಎಂದು ಕಲ್ಲಿದ್ದಲು ಸಚಿವಾಲಯ ಮಾಹಿತಿ ನೀಡಿದೆ. ದೀರ್ಘಾವಧಿಯ ಸಂಪನ್ಮೂಲ ಭದ್ರತೆಯನ್ನು ಸೂಚಿಸುವ 22 ನಿರ್ಣಾಯಕ ಖನಿಜ ಬ್ಲಾಕ್ ಗಳ ಯಶಸ್ವಿ ಹರಾಜು ಇಲ್ಲಿ ಗುರುತಿಸಬೇಕಾದ ವಿಷಯವಾಗಿದೆ.
