ಚಳಿಗಾಲದಲ್ಲಿ ಸಾಮಾನ್ಯವಾಗಿ ಚರ್ಮ ಒಣಗುತ್ತದೆ. ಇದಲ್ಲದೇ, ಅನೇಕ ಚರ್ಮದ ಸಮಸ್ಯೆಗಳು ಕಾಣಿಸುತ್ತದೆ. ಚಳಿಗಾಲದಲ್ಲಿ ಅದೆಷ್ಟೇ ಆರೈಕೆ ಮಾಡಿದರೂ ಸಹ ಸಾಕಾಗುವುದಿಲ್ಲ. ಆದರೆ ಕೆಲವೊಂದು ಮನೆ ಮದ್ದುಗಳನ್ನ ಮಾಡುವುದರಿಂದ ಚಳಿಗಾಲದಲ್ಲಿ ತ್ವಚೆಯ (Winter Skin Care Tips) ಆರೈಕೆಯನ್ನ ಮಾಡಬಹುದು.
ಅಲೋವೆರಾ ಹಚ್ಚಬೇಕು
ಮುಖಕ್ಕೆ ಅಲೋವೆರಾ ಹಚ್ಚುವುದರಿಂದ ಚರ್ಮಕ್ಕೆ ತೇವಾಂಶ ಸಿಗುತ್ತದೆ. ಹಾಗಾಗಿ ವಾರಕ್ಕೆ 3 ಬಾರಿಯಾದರೂ ಸಹ ಅಲೋವೇರಾವನ್ನ ಹಚ್ಚಬೇಕು ಎನ್ನಲಾಗುತ್ತದೆ. ಇದರ ಜೊತೆಗೆ ಮುಖದಲ್ಲಿ ಕಲೆಗಳು ಮತ್ತು ಮೊಡವೆಗಳನ್ನು ಕಡಿಮೆ ಮಾಡುತ್ತದೆ, ಬಿಸಿಲಿನ ತಾಪದಿಂದ ಸಹ ಪರಿಹಾರ ನೀಡುತ್ತದೆ ಮತ್ತು ಸುಕ್ಕುಗಳನ್ನ ಸಹ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ನೈಸರ್ಗಿಕ ಮಾಯಿಶ್ಚರೈಸರ್ ಆಗಿದ್ದು ಅದು ಚರ್ಮವನ್ನು ಮೃದುಗೊಳಿಸುತ್ತದೆ ಮತ್ತು ಅದಕ್ಕೆ ಕಾಂತಿಯುತ ಹೊಳಪನ್ನು ನೀಡುತ್ತದೆ.
ತುಪ್ಪವನ್ನ ಬಳಕೆ ಮಾಡಬೇಕು
ಮನೆಯಲ್ಲಿರುವ ಅನೇಕ ವಸ್ತುಗಳನ್ನ ನಾವು ಬಳಸಿ ಚಳಿಗಾಲದಲ್ಲಿ ತ್ವಚೆಯ ಆರೈಕೆ ಮಾಡಬಹುದು. ಮುಖ್ಯವಾಗಿ ಮನೆಯ ತುಪ್ಪವನ್ನ ಬಳಕೆ ಮಾಡಬೇಕು. ತುಪ್ಪದಲ್ಲಿರುವ ಜೀವಸತ್ವಗಳು ಮತ್ತು ಪೋಷಕಾಂಶಗಳು ಚರ್ಮವನ್ನು ಒಳಗಿನಿಂದ ಪೋಷಿಸುತ್ತವೆ. ಇದು ಮುಖವನ್ನು ಹೈಡ್ರೇಟ್ ಮಾಡುವುದಲ್ಲದೆ, ಅದಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ. ರಾತ್ರಿ ಮಲಗುವ ಮೊದಲು ತುಪ್ಪವನ್ನು ಹಚ್ಚಬೇಕು.
ಗ್ಲಿಸರಿನ್ ಹಚ್ಚಿ ಮಿಸ್ ಮಾಡದೇ
ಚರ್ಮಕ್ಕೆ ಗ್ಲಿಸರಿನ್ ಹಚ್ಚುವುದರಿಂದ ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಅದಕ್ಕೆ ಯೌವನಯುತ ಮತ್ತು ಆರೋಗ್ಯಕರ ಹೊಳಪನ್ನು ನೀಡುತ್ತದೆ.
ಇದನ್ನೂ ಓದಿ: ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಟಿಪ್ಸ್ ಫಾಲೋ ಮಾಡಿ
