WINTER: ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಟಿಪ್ಸ್‌ ಫಾಲೋ ಮಾಡಿ

winter health care tips

ಚಳಿಗಾಲ ಆರಂಭವಾಗಿದೆ. ಸಂಜೆಯ ನಂತರ ಮನೆಯಿಂದ ಹೊರಗೆ ಕಾಲಿಡೋದು ಕಷ್ಟ ಎನ್ನುವ ರೀತಿ ಆಗಿದೆ. ಈ ಚಳಿಗಾಲ ಬಂತು ಎಂದರೆ ಅದರ ಜೊತೆಗೆ ಆರೋಗ್ಯ ಸಮಸ್ಯೆಗಳು ಸಹ ಬರುತ್ತದೆ. ಈ ಸಮಯದಲ್ಲಿ ದೇಹದ ರೋಗನಿರೋಧಕ ಶಕ್ತಿ ಸ್ವಲ್ಪ ದುರ್ಬಲಗೊಳ್ಳುತ್ತದೆ, ಆದ್ದರಿಂದ ಆಹಾರ ಮತ್ತು ಜೀವನಶೈಲಿಯನ್ನು ಕಾಳಜಿ ವಹಿಸದಿದ್ದರೆ, ಶೀತ, ಕೆಮ್ಮು, ಜ್ವರದಿಂದ ಹಿಡಿದು ಕೀಲು ನೋವಿನವರೆಗೆ ಅನೇಕ ರೋಗಗಳು ನಮ್ಮನ್ನ ಕಾಡಬಹುದು. ಹಾಗಾಗಿ ಈ ಚಳಿಗಾಲದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಈ ಸಮಯದಲ್ಲಿ ತುಂಬಾ ಕಾಳಜಿ ವಹಿಸಿದರೆ ಮಾತ್ರ ಆರೋಗ್ಯ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಬಹುದು. ಹಾಗಾದ್ರೆ ಚಳಿಗಾಲದಲ್ಲಿ (Winter) ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಯಾವೆಲ್ಲಾ ಕ್ರಮಗಳನ್ನ ತೆಗೆದುಕೊಳ್ಳಬೇಕು ಎಂಬುದು ಇಲ್ಲಿದೆ.

ಬೆಳಿಗ್ಗೆ ಸ್ವಲ್ಪ ಹಗುರವಾದ ವ್ಯಾಯಾಮ ಮಾಡಿ:  ನಿಮ್ಮ ದೇಹವನ್ನು ಚಳಿಗಾಲದಲ್ಲಿ ಬೆಚ್ಚಗೆ ಇಡಲು, ಬೆಳಿಗ್ಗೆ ಸ್ವಲ್ಪ ಹಗುರವಾದ ವ್ಯಾಯಾಮ ಮಾಡಿ. ನಿಮ್ಮ ದಿನವನ್ನು ಯೋಗ ಅಥವಾ ಸೂರ್ಯ ನಮಸ್ಕಾರದಿಂದ ಪ್ರಾರಂಭಿಸಿ. ಇದು ನಿಮ್ಮ ದೇಹವನ್ನು ಬೆಚ್ಚಗಿಡಲು ಸಹಾಯ ಮಾಡುತ್ತದೆ ಮತ್ತು ಅನಾರೋಗ್ಯ ಕಾಡದಂತೆ ತಡೆಯುತ್ತದೆ.

ಚಳಿಗಾಲದಲ್ಲಿ ಸ್ನಾನ ಮಾಡಲು ಮರೆಯಬೇಡಿ: ಚಳಿಯ ಭಯದಿಂದ ಅನೇಕ ಜನರು ಸ್ನಾನ ಮಾಡುವುದನ್ನು ತಪ್ಪಿಸುತ್ತಾರೆ, ಆದರೆ, ಈ ಚಳಿಗಾಲದಲ್ಲಿ ಸ್ವಚ್ಛತೆ ಇನ್ನಷ್ಟು ಮುಖ್ಯವಾಗುತ್ತದೆ. ಪ್ರತಿದಿನ ಸ್ನಾನ ಮಾಡುವುದರಿಂದ ಚರ್ಮವು ತಾಜಾವಾಗಿರುವುದಲ್ಲದೆ, ಶಿಲೀಂಧ್ರಗಳ ಸೋಂಕು, ತುರಿಕೆ ಮತ್ತು ಚರ್ಮದ ಅಲರ್ಜಿಯನ್ನು ತಡೆಯುತ್ತದೆ.

ಈ ಸಮಯದಲ್ಲಿ ವೃದ್ಧರು, ಮಕ್ಕಳು ಮತ್ತು ಗರ್ಭಿಣಿಯರಲ್ಲಿ ರೋಗನಿರೋಧಕ ಶಕ್ತಿ ದುರ್ಬಲವಾಗಿರುತ್ತದೆ. ಶೀತ ಮತ್ತು ತೇವಾಂಶವುಳ್ಳ ಗಾಳಿಯು ಆಸ್ತಮಾ, ಬ್ರಾಂಕೈಟಿಸ್ ಅಥವಾ ಉಸಿರಾಟದ ರೋಗಿಯ ಶ್ವಾಸಕೋಶದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಹಾಗಾಗಿ ಈ ಸಮಯದಲ್ಲಿ ಆರೋಗ್ಯವಾಗಿರಲು, ತುಪ್ಪ, ಬೆಣ್ಣೆ, ಎಳ್ಳೆಣ್ಣೆ, ಹೆಸರುಕಾಳು, ಗೋಧಿ, ಬಾರ್ಲಿ, ರಾಗಿ, ಜೋಳ, ಕಡಲೆ, ಕಡಲೆಕಾಯಿ ಮತ್ತು ಬೀಜಗಳನ್ನು ಸೇವಿಸಿ. ಬೆಲ್ಲ, ಎಳ್ಳು, ಶುಂಠಿ, ಬೆಳ್ಳುಳ್ಳಿ, ಮೆಂತ್ಯ ಮತ್ತು ಒಣಗಿದ ಶುಂಠಿಯಂತಹ ಬಿಸಿ ಆಹಾರಗಳು ಈ ಸಮಯದಲ್ಲಿ ಹೆಚ್ಚು ಲಾಭ ನೀಡುತ್ತದೆ. ಹಸಿರು ತರಕಾರಿಗಳಲ್ಲಿ, ಪಾಲಕ್, ಮೆಂತ್ಯ, ಸಾಸಿವೆ, ಮೂಲಂಗಿ, ಕ್ಯಾರೆಟ್, ಟರ್ನಿಪ್‌ಗಳನ್ನು ಮಿಸ್‌ ಮಾಡದೇ ಸೇವನೆ ಮಾಡಬೇಕು.

ಮುಖ್ಯವಾಗಿ ಈ ಚಳಿಗಾಲದಲ್ಲಿ  ಹಾಲು, ಸೂಪ್, ಗಂಜಿ, ಸಟ್ಟು, ಕರಿ ಮತ್ತು ತಿಳಿ ಖಿಚಡಿಯನ್ನು ಸೇವಿಸಬೇಕು. ಇದಲ್ಲದೆ, ನೀವು ಸೇಬು, ಪೇರಳೆ ಹಣ್ಣು, ದಾಳಿಂಬೆ, ಪಪ್ಪಾಯಿ, ಕಿತ್ತಳೆ ಹಣ್ಣು ಮತ್ತು ನೆಲ್ಲಿಕಾಯಿಯನ್ನು ಹೇರಳವಾಗಿ ತಿನ್ನಬೇಕು. 

ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರುಬೆಚ್ಚಗಿನ ನೀರನ್ನು ಕುಡಿಯಿರಿ. ಅದರ ಬದಲು, ನೀವು ನಿಂಬೆ-ಜೇನು ನೀರು ಅಥವಾ ತುಳಸಿ-ಶುಂಠಿ ಚಹಾವನ್ನು ಸೇವಿಸಬಹುದು. ರಾತ್ರಿ ಅರಿಶಿನ ಕುಡಿಯಿರಿ. ಎಳ್ಳು-ಬೆಲ್ಲದ ಲಡ್ಡುಗಳು, ಚ್ಯವನ್‌ಪ್ರಾಶ್, ಖರ್ಜೂರ-ಖೋಯಾ ಹೀಗೆ ಆರೋಗ್ಯಕರ ಆಹಾರಗಳನ್ನ ಮಿಸ್‌ ಮಾಡದೇ ಸೇವನೆ ಮಾಡಿ.

ತಪ್ಪದೇ ವಿದ್ಯಾರ್ಥಿವಾಣಿ ವೆಬ್‌ಸೈಟ್‌ ಓದಿ

Leave a Reply

Your email address will not be published. Required fields are marked *