War: ಮಧ್ಯ ಪ್ರಾಚ್ಯ ಸಂಘರ್ಷ, ಕೇಂದ್ರ ಜಲ ಸಾರಿಗೆ ಸಚಿವರ ಸಭೆ

West Asia war minister meeting regarding sea transport

ನವದೆಹಲಿ: ಮಧ್ಯ ಪ್ರಾಚ್ಯ ಸಂಘರ್ಷದ (War) ಹಿನ್ನೆಲೆಯಲ್ಲಿ ಸಾಗರಯಾನ ಹಾಗೂ ವ್ಯಾಪಾರ ವಹಿವಾಟುಗಳನ್ನು ನಿರ್ವಿಘ್ನವಾಗಿ ನಡೆಸಲು ಮುನ್ನೆಚ್ಚರಿಕೆ ವಹಿಸುವ ಸಲುವಾಗಿ ಕೇಂದ್ರ ಬಂದರು ಮತ್ತು ಜಲ ಸಾರಿಗೆ ಸಚಿವ ಸರ್ಬಾನಂದ ಸೋನೋವಾಲ್ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.

ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚೆ

 ಬಂದರು ಮತ್ತು ಸಮುದ್ರ ಯಾನದ ಬಾಧ್ಯಸ್ಥರು ಸಭೆಯಲ್ಲಿ ಭಾಗವಹಿಸಿದ್ದರು.  ಜಾಗತಿಕ ಸರಬರಾಜನ್ನು ಸಕ್ರಿಯವಾಗಿ ಕಾಯ್ದುಕೊಳ್ಳಲು ಅನುಸರಿಸಬೇಕಾದ ಪ್ರಮಾಣಿತ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು.  ಸರಕು ಸಾಗಾಣಿಕೆದಾರರು, ಬಂದರುಗಳ ನಿರ್ವಾಹಣೆಗಾರರು ಮತ್ತು ವ್ಯಾಪಾರ ಸಂಘಟನೆಗಳ ಜೊತೆ ಮುಂಬರುವ ಸವಾಲುಗಳ ಬಗ್ಗೆ ಸಚಿವರು ಸಮಾಲೋಚನೆ ನಡೆಸಿದರು.

ಆಮದು ಮತ್ತು ರಫ್ತು ಸೇವೆ ಬಗ್ಗೆ ಸಹ ಚರ್ಚೆ

ಸಾಗರಯಾನದ ಮಾರ್ಗಗಳಿಂದ ಅಡಚಣೆಗಳು, ಹಡಗು ಸಂಚಾರದ ವೇಳಾಪಟ್ಟಿ ಮತ್ತು ಸರಕು ಸಾಗಾಣಿಕೆ ಸಂಬಂಧಿಸಿದ ತೊಂದರೆಗಳ ಬಗ್ಗೆ ಪರಸ್ಪರ ವಿಚಾರ ವಿನಿಮಯ ನಡೆಯಿತು.  ಸಮುದ್ರ ಯಾನದಲ್ಲಿನ ವಿಳಂಬವನ್ನು ತಗ್ಗಿಸುವುದು, ನಿರಂತರ ಕಾರ್ಯಾಚರಣೆ, ಸಾಗಾಣಿಕೆ, ಪೂರೈಕೆ ಸರಪಳಿ ಸ್ಥಿತಿಸ್ಥಾಪಕತ್ವ ಕುರಿತಂತೆ ಬಾಧ್ಯಸ್ಥರು ತಮ್ಮ  ವಿಚಾರ ವಿನಿಮಯ ಮಾಡಿಕೊಂಡರು. ಸರ್ಕಾರದ ವತಿಯಿಂದ ಪರಿಸ್ಥಿತಿ ನಿಭಾಯಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಚರ್ಚಿಸಲಾಯಿತು. ಮಧ್ಯ ಪ್ರಾಚ್ಯ ಗಮ್ಯದ ಆಮದು ಮತ್ತು ರಫ್ತು ಸೇವೆ ಕುರಿತಂತೆ ಹೆಚ್ಚಿನ ಚರ್ಚೆ ನಡೆದಿದೆ.  ಸಚಿವ ಸರ್ಬಾನಂದ ಸೋನೋವಾಲ್, ದೇಶದ ಸಮುದ್ರ ಮಾರ್ಗದ ವ್ಯಾಪಾರೋದ್ಯಮವನ್ನು ಸುರಕ್ಷಿತವಾಗಿಡಲು ಕೇಂದ್ರ ಸರ್ಕಾರ ಸಹಯೋಗ ಮತ್ತು ಶೀಘ್ರ ಕ್ರಮಗಳನ್ನು ಕೈಗೊಳ್ಳುತ್ತಿದೆ. ಭಾರತದ ಬಂದರು ಸೇವೆ ಹೊಸ ಸವಾಲುಗಳನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದೆ ಹಾಗೂ ಪಶ್ಚಿಮ ಕರಾವಳಿ ಮಾರ್ಗದ ಹಡಗುಗಳ ಸಂಚಾರಕ್ಕೆ ಎಲ್ಲಾ ರೀತಿಯ ನೆರವನ್ನು ಕಲ್ಪಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಇಂಧನ ಉತ್ಪಾದನೆಯಲ್ಲಿ ಭಾರತ ಮೂರನೇ ಅತಿ ದೊಡ್ಡ ರಾಷ್ಟ್ರ

Leave a Reply

Your email address will not be published. Required fields are marked *