CP Radhakrishnan: ಗ್ರಂಥಾಲಯ ಘಟಕ ಉದ್ಘಾಟನೆ ಮಾಡಿದ ಉಪರಾಷ್ಟ್ರಪತಿ

vice president CP Radhakrishnan inaugurated harijana sevaka sangha library

ನವದೆಹಲಿ: ದೆಹಲಿಯ ಗಾಂಧಿ ಆಶ್ರಮದ ಹರಿಜನ ಸೇವಕ ಸಂಘದಲ್ಲಿ ನೂತನವಾಗಿ ನಿರ್ಮಿಸಿರುವ ಮಹದೇವ ದೇಸಾಯಿ ಗ್ರಂಥಾಲಯ ಘಟಕವನ್ನು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ (CP Radhakrishnan) ಇಂದು ಉದ್ಘಾಟಿಸಿದ್ದಾರೆ.

2 ಪುಸ್ತಕ ಬಿಡುಗಡೆ ಮಾಡಿದ ಉಪರಾಷ್ಟ್ರಪತಿ

ಇದೇ ಸಮಯದಲ್ಲಿ ಪ್ರೊ. ಶಂಕರ್ ಕುಮಾರ್ ಸನ್ಯಾಲ್ ರಚಿಸಿರುವ ‘ ಜ್ಞಾನೋದಯದ ಯುಗ: ಮಹಾತ್ಮಾ ಗಾಂಧಿಯವರ ದೂರದೃಷ್ಟಿ ‘ ಪುಸ್ತಕ ಬಿಡುಗಡೆ ಮಾಡಿದ್ದಾರೆ. ಇದರ ಬಳಿಕ ಮಾತನಾಡಿದ ಉಪರಾಷ್ಟ್ರಪತಿ, ಸಾಮಾಜಿಕ ಪರಿವರ್ತನೆಯಲ್ಲಿ ಗ್ರಂಥಾಲಯಗಳು ಬಹು ಮುಖ್ಯ ಪಾತ್ರ ವಹಿಸುತ್ತವೆ.  ಜ್ಞಾನ ಸಂಪಾದನೆಯಿಂದ ಚಾರಿತ್ರ್ಯ ನಿರ್ಮಾಣ ಮತ್ತು ಸಾಮಾಜಿಕ ಜವಾಬ್ದಾರಿ ಜಾಗೃತಿ ಸಾಧ್ಯವಾಗಲಿದೆ ಎಂದು ಹೇಳಿದ್ದಾರೆ.

ಹರಿಜನ ಸೇವಕ ಸಂಘ ಉತ್ತಮ ಕೊಡುಗೆ ನೀಡುತ್ತಿದೆ

ಸಮಾಜ ಸೇವೆಯಲ್ಲಿ ಹರಿಜನ ಸೇವಕ ಸಂಘ ಕಳೆದ ಹಲವು ದಶಕಗಳಿಂದ ಉತ್ತಮ ಕೊಡುಗೆ ನೀಡುತ್ತಿದೆ.  ಬದಲಾವಣೆ ಜಗದ ನಿಯಮವಾಗಿದ್ದು, ಸ್ವದೇಶಿ ಪರಿಕಲ್ಪನೆಯ ವ್ಯಾಖ್ಯಾನವು ಬದಲಾಗುತ್ತಿದೆ ಹಾಗೂ ವಿಸ್ತೃತ ಅರ್ಥ ಪಡೆಯುತ್ತಿದೆ.  ಈಗ ಸ್ವದೇಶಿ ಚಿಂತನೆ ಕೇವಲ ಚರಕಕ್ಕೆ ಸೀಮಿತವಾಗಿಲ್ಲ.  ಅತ್ಯಾಧುನಿಕ ಯಂತ್ರಗಳನ್ನು ಕೂಡಾ ದೇಶೀಯವಾಗಿ ಭಾರತ ತಯಾರಿಸುತ್ತಿದ್ದು, ಅತ್ಮ ನಿರ್ಭರತೆ ಸ್ವದೇಶಿಯ ಪರ್ಯಾಯ ಪದವಾಗಿದೆ.  ಭೌತಿಕ ಸ್ವರೂಪದಲ್ಲಿ ಬದಲಾವಣೆಯಾಗುತ್ತಿದ್ದರೂ ನಮ್ಮ ಪಾರಂಪರಿಕ ಮೌಲ್ಯಗಳು ಹಾಗೂ ನೈತಿಕತೆ ಸಾರ್ವಕಾಲಿಕವಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ನಿತಿನ್ ನಬಿನ್ ಅವರನ್ನು ಅಧ್ಯಕ್ಷರಾಗಿ ಅಧಿಕೃತ ಘೋಷಣೆ ಮಾಡಿದ ಬಿಜೆಪಿ

Leave a Reply

Your email address will not be published. Required fields are marked *