LPG: ಅಡುಗೆ ಅನಿಲ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಇಲ್ಲ: ಕೇಂದ್ರ

There is no problem in LPG cylinder supply says central government

ನವದೆಹಲಿ: ದೇಶಾದ್ಯಂತ ಅಡುಗೆ ಅನಿಲ ಸಿಲಿಂಡರ್ (LPG) ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಎದುರಾಗಿಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಸಚಿವಾಲಯ ತಿಳಿಸಿದೆ. 

77 ಲಕ್ಷ ಅಡುಗೆ ಅನಿಲ ಬುಕ್ಕಿಂಗ್

ಈ ಕುರಿತು ಮಾಹಿತಿ ಹಂಚಿಕೊಂಡಿರುವ ಸಚಿವಾಲಯ, ಮಾರ್ಚ್ 13ರಂದು ದೇಶಾದ್ಯಂತ 88 ಲಕ್ಷ ಅಡುಗೆ ಅನಿಲ ಮರುಪೂರಣ ಬುಕ್ಕಿಂಗ್ ಆಗಿದ್ದು, ನಿನ್ನೆ ಈ ಸಂಖ್ಯೆ 77 ಲಕ್ಷಕ್ಕೆ ಏರಿಕೆಯಾಗಿದೆ. ಸರ್ಕಾರದ ಮಾರ್ಗಸೂಚಿ ಅನ್ವಯ ಗೃಹ ಬಳಕೆಯೇತರ  ಅಡುಗೆ ಅನಿಲ ಹಂಚಿಕೆ ಮಾಡುವಂತೆ ರಾಜಸ್ಥಾನ, ಹರಿಯಾಣ, ಬಿಹಾರ, ದೆಹಲಿ ಸೇರಿದಂತೆ ಕೆಲವು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.   ‌

ಯಾವುದೇ ಕೊರತೆ ಆಗಿಲ್ಲ

ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್ ಗಳನ್ನು ಆದ್ಯತೆಯ ಮೇರೆಗೆ ಪೂರೈಕೆ ಮಾಡುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ. ತೈಲ ಮಾರುಕಟ್ಟೆ ಕಂಪನಿಗಳ ಸಗಟು ಮಳಿಗೆಗಳಲ್ಲೂ ಯಾವುದೇ ಕೊರತೆ ಇಲ್ಲ. ಪೆಟ್ರೋಲ್ ಮತ್ತು ಡೀಸೆಲ್ ನಿಯಮಿತವಾಗಿ ಪೂರೈಕೆಯಾಗುತ್ತಿದೆ ಎಂದು ಹೇಳಿದೆ.  ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಅಗತ್ಯ ಪ್ರಮಾಣದಲ್ಲಿ ದಾಸ್ತಾನಿದ್ದು, ಜನರು ಭಯದಿಂದ ಖರೀದಿಗೆ ಮುಂದಾಗದಂತೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಸಲಹೆ ನೀಡಿದೆ.

ಇದನ್ನೂ ಓದಿ: ಸೌದಿ ಅರೆಬಿಯಾ ನಾಯಕರ ಜೊತೆ ಸಚಿವ ಜೈಶಂಕರ್‌ ಸಭೆ

Leave a Reply

Your email address will not be published. Required fields are marked *