Vidyarthi Vaani: ವಿದ್ಯಾರ್ಥಿವಾಣಿ ವೆಬ್ಸೈಟ್ ಆರಂಭ, ಶ್ರೀ ಶ್ರೀ ವಿಧುಶೇಖರ ಭಾರತೀ ಸ್ವಾಮಿಗಳ ಅಮೃತ ಹಸ್ತದಿಂದ ಲೋಕಾರ್ಪಣೆ
ಶೃಂಗೇರಿ: ಮಾಧ್ಯಮ ಲೋಕದಲ್ಲಿ ಹೊಸ ಅಲೆಯನ್ನ ಸೃಷ್ಟಿಸಲು ಸಜ್ಜಾಗಿರುವ ವಿದ್ಯಾರ್ಥಿವಾಣಿ (Vidyarthi Vaani) ವೆಬ್ಸೈಟ್ ಇಂದು ಲೋಕಾರ್ಪಣೆ ಆಗಿದ್ದು, ದಕ್ಷಿಣಮ್ನಾಯ ಶೃಂಗೇರಿ ಶಾರದ ಪೀಠದ 36ನೇ ಜಗದ್ಗುರುಗಳಾದ ಶ್ರೀ ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳ ಶಿಷ್ಯರಾದ ಶ್ರೀ ಶ್ರೀ ವಿಧುಶೇಖರ ಭಾರತೀ ಸ್ವಾಮಿಗಳು ತಮ್ಮ ಅಮೃತ ಹಸ್ತದಿಂದ ಲೋಕಾರ್ಪಣೆ ಮಾಡಿದ್ದಾರೆ. ವಿದ್ಯಾರ್ಥಿವಾಣಿ ಧ್ಯೇಯ ವಿದ್ಯಾರ್ಥಿ ವಾಣಿ ಒಂದು ತರಬೇತಿ ಆಧಾರಿತ ವಿದ್ಯಾರ್ಥಿ ಪತ್ರಿಕೋದ್ಯಮ ವೇದಿಕೆ. ವಿದ್ಯಾರ್ಥಿ ವಾಣಿ ಒಂದು ಸ್ವತಂತ್ರ, ನಿಷ್ಪಕ್ಷಪಾತ ಹಾಗೂ ವಿದ್ಯಾರ್ಥಿ ಕೇಂದ್ರಿತ ಪತ್ರಿಕೋದ್ಯಮ…
