Conversion: ಜಿಮ್ ಸೋಗಿನಲ್ಲಿ ಮತಾಂತರ ಆರೋಪ, ಉತ್ತರಪ್ರದೇಶದಲ್ಲಿ ಆರೋಪಿಗಳ ಬಂಧನ
ಉತ್ತರ ಪ್ರದೇಶ: ಜಿಮ್‌ಗಳ ಸೋಗಿನಲ್ಲಿ ಅಕ್ರಮವಾಗಿ ಧಾರ್ಮಿಕ ಮತಾಂತರ (Conversion) ಮಾಡುತ್ತಿದ್ದ ಪ್ರಕರಣ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಬೆಳಕಿಗೆ ಬಂದಿದ್ದು, ಈ ವಿಚಾರವಾಗಿ ಪೊಲೀಸರು ಆರೋಪಿಗಳನ್ನ ಬಂಧನ ಮಾಡಿದ್ದಾರೆ. 4 ಜನ ಆರೋಪಿಗಳ ಬಂಧನ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಇಲ್ಲಿಯವರೆಗೆ ಐದು ಜನರನ್ನು ಬಂಧಿಸಿದ್ದಾರೆ ಮತ್ತು ಜಿಲ್ಲೆಯಾದ್ಯಂತ ಕನಿಷ್ಠ ಐದು ಫಿಟ್‌ನೆಸ್ ಕೇಂದ್ರಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಮಾಹಿತಿಗಳ ಪ್ರಕಾರ ಮೊದಲ ಪ್ರಕರಣದಲ್ಲಿ, ಜಿಮ್ ತರಬೇತಿಯ ನೆಪದಲ್ಲಿ ಆಮಿಷವೊಡ್ಡಲಾಗಿದೆ. ಅಲ್ಲದೇ, ಲೈಂಗಿಕ ಶೋಷಣೆ ಮಾಡಿದ್ದಲ್ಲದೇ, ಬ್ಲ್ಯಾಕ್‌ಮೇಲ್ ಮಾಡಲಾಗಿದೆ…
