Vladimir Putin: ಗುರಿ ಸಾಧಿಸಿದ ನಂತರವೇ ಯುದ್ದಕ್ಕೆ ಫುಲ್‌ಸ್ಟಾಪ್, ಉಕ್ರೇನ್ ಯುದ್ದದ ಬಗ್ಗೆ ಪುಟಿನ್ ಮಾತು
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಉಕ್ರೇನ್ ಯುದ್ಧದ ಬಗ್ಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದು, ತನ್ನ ಗುರಿಗಳನ್ನು ಸಾಧಿಸಿದ ನಂತರವೇ ಕಾರ್ಯಾಚರಣೆಯನ್ನು ನಿಲ್ಲಿಸುತ್ತದೆ ಎಂದು ಹೇಳಿದ್ದಾರೆ. ರಷ್ಯಾ ಯುದ್ಧವನ್ನ ಆರಂಭ ಮಾಡಿಲ್ಲ ರಷ್ಯಾ ಉಕ್ರೇನ್ ಯುದ್ಧವನ್ನು ಪ್ರಾರಂಭಿಸಲಿಲ್ಲ , ಆದರೆ ಪಶ್ಚಿಮದ ಪ್ರಭಾವದಿಂದ ಉಕ್ರೇನ್ ತೆಗೆದುಕೊಂಡ ನಿರ್ಧಾರವೇ ರಷ್ಯಾವನ್ನು ಸಂಘರ್ಷಕ್ಕೆ ಎಳೆದಿದೆ, ಇದು ಸುಮಾರು ನಾಲ್ಕು ವರ್ಷಗಳಿಂದ ನಡೆಯುತ್ತಿದೆ ಎಂದು ಹೇಳಿದ್ದಾರೆ. ನಮ್ಮ ವಿಶೇಷ ಮಿಲಿಟರಿ ಕಾರ್ಯಾಚರಣೆಯು ಯುದ್ಧದ ಆರಂಭವಲ್ಲ, ಬದಲಾಗಿ ಉಕ್ರೇನಿಯನ್ ರಾಷ್ಟ್ರೀಯವಾದಿಗಳನ್ನು ಬಳಸಿಕೊಂಡು ಪಶ್ಚಿಮ ದೇಶಗಳು…
