Udupi: ಕೊರಗ ಸಮುದಾಯದವರಿಗೆ ಮನೆ ಹಸ್ತಾಂತರ, ನಟ ರಿಷಬ್ ಭಾಗಿ
ಉಡುಪಿ: ಬ್ರಹ್ಮಾವರ (Udupi) ತಾಲೂಕಿನ ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಚಿಟ್ಟಿಬೆಟ್ಟು ಎಂಬಲ್ಲಿ ಪರಿಶಿಷ್ಟ ಪಂಗಡದ ಕೊರಗ ಸಮುದಾಯದವರಿಗೆ ನಿರ್ಮಾಣ ಮಾಡಲಾದ ಮನೆಗಳನ್ನ ಹಸ್ತಾಂತರ ಮಾಡಲಾಯಿತು. 8 ಮನೆಗಳ ಹಸ್ತಾಂತರ ಸುಮಾರು 1 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ 8 ಮನೆಗಳ ಹಸ್ತಾಂತರ ಕಾರ್ಯಕ್ರಮವನ್ನು ಉಡುಪಿ ಪುತ್ತಿಗೆ ಮಠದ ಸುಗುಣೇಂದ್ರ ಶ್ರೀಗಳು ಉದ್ಘಾಟಿಸಿದರು. ಇದೇ ವೇಳೆ ಮನೆ ನಿರ್ಮಾಣ ಕಾರ್ಯದಲ್ಲಿ ಧನ ಸಹಾಯ ನೀಡಿದ ದಾನಿಗಳನ್ನು ಪುತ್ತಿಗೆ ಶ್ರೀಗಳು ಅಭಿನಂದಿಸಿದರು. ಯಾರೆಲ್ಲಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು? ಈ ವೇಳೆ…
