Elephant Rescue Operation: ಕೆನಾಲ್​ಗೆ ಬಿದ್ದು 3 ರಾತ್ರಿ ಕಳೆದ ಗಜರಾಜ; ಅಂತೂ ಶುರುವಾಯ್ತು ಕಾಡಾನೆ ಮೇಲೆತ್ತುವ ಕಾರ್ಯ

ಆನೆ ಮೇಲೆತ್ತುವ ಕಾರ್ಯಾಚರಣೆ ಶುರುವಾಗಿದ್ದು, ಪಶು ವೈದ್ಯರಾದ ಡಾ ರಮೇಶ್, ಮತ್ತು ಡಾ ಆದರ್ಶ್ ರಿಂದ ಆನೆಗೆ ಅರವಳಿಕೆ ಮದ್ದು ನೀಡಲಾಗಿದೆ. ಆನೆಯನ್ನು ರಕ್ಷಣೆ ಮಾಡಲು ಕೆನಾಲ್​ಗೆ  ಸಿಬ್ಬಂದಿಗಳು ಕಂಟೇನರ್​ ಇಳಿಸಿದ್ದಾರೆ. ಮಂಡ್ಯ (ನ.18): ಶಿವನಸಮುದ್ರ ಸಮೀಪದ ಖಾಸಗಿ ವಿದ್ಯುತ್ ಉತ್ಪಾದನಾ ಕೇಂದ್ರದ ಕೆನಾಲ್​ ಕಾಡಾನೆ ಬಿದ್ದಿದ್ದು, ಆನೆಯನ್ನ ಮೇಲೆತ್ತುವ ಕಾರ್ಯಾಚರಣೆ ನಡೆಯುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಕೆನಾಲ್‌ನಿಂದ ಆನೆಯನ್ನು ಮೇಲೆತ್ತಲು ಸಾಕಷ್ಟು ಹರಸಾಹಸ ಪಡುತ್ತಿದ್ದಾರೆ. ವೈದ್ಯರು ಆನೆಗೆ ಅರವಳಿಕೆ ಮದ್ದು ನೀಡಿದ ಕಾಲುವೆಯಲ್ಲಿರೋ ಆನೆಗೆ ಅರವಳಿಕೆ…

Read More