Male Mahadeshwara: ವಿಜೃಂಭಣೆಯಿಂದ ನಡೆದ ಮಲೆ ಮಹದೇಶ್ವರ ರಥೋತ್ಸವ
ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ (Male Mahadeshwara) ಬೆಟ್ಟದಲ್ಲಿ ವಿಜೃಂಭಣೆಯಿಂದ ರಥೋತ್ಸವ ನೆರವೇರಿತು. ಕಳೆದ ನಾಲ್ಕು ದಿನಗಳಿಂದ ಕ್ಷೇತ್ರದಲ್ಲಿ ನಡೆಯುತ್ತಿದ್ದ ಜಾತ್ರಾ ಮಹೋತ್ಸವಕ್ಕೆ ರಥೋತ್ಸವದ ಮೂಲಕ ತೆರೆಬಿದ್ದಿತು. ಜಿಲ್ಲಾಡಳಿತದಿಂದ ಅದ್ಭುತ ವ್ಯವಸ್ಥೆ ರಾಜ್ಯ ಹಾಗೂ ತಮಿಳುನಾಡು ಭಾಗದಿಂದ ಬಂದಿದ್ದ ಭಕ್ತರಿಗೆ ಕುಡಿಯುವ ನೀರು, ಶೌಚಾಲಯ, ದಾಸೋಹ ವ್ಯವಸ್ಥೆಯನ್ನು ಜಿಲ್ಲಾಡಳಿತ ವ್ಯವಸ್ಥಿತವಾಗಿ ಮಾಡಿತ್ತು. ಯುಗಾದಿ ಹಬ್ಬದ ದಿನದಂದು ಚಾಮರಾಜನಗರ ಜಿಲ್ಲೆಯ ಹಲವೆಡೆ ರೈತರು ಹೊನ್ನೇರು ಕಟ್ಟಿ ಕೃಷಿ ಚಟುವಟಿಕೆ ಆರಂಭಿಸಿದರು. ಎತ್ತುಗಳು, ಎತ್ತಿನಬಂಡಿಗೆ ಅಲಂಕಾರ ಮಾಡಿ…
