IndiGO: ಇಂಡಿಗೋ ಸಿಇಒಗೆ ಡಿಜಿಸಿಎ ನೋಟೀಸ್, ಉತ್ತರಿಸಲು 24 ಗಂಟೆ ಗಡುವು
ನವದೆಹಲಿ: ಇಂಡಿಗೋ ಸಂಸ್ಥೆಯ ವಿಮಾನಗಳು ರದ್ದಾದ ಹಿನ್ನೆಲೆಯಲ್ಲಿ ದೇಶಾದ್ಯಂತ ಸಾವಿರಾರು ಪ್ರಯಾಣಿಕರು ಸಿಲುಕಿಕೊಂಡು ಬಹಳ ತೊಂದರೆ ಅನುಭವಿಸಿದ್ದರು. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಇಂಡಿಗೋ (IndiGo) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಭಾರತದ ವಾಯುಯಾನ ನಿಯಂತ್ರಕ ಸಂಸ್ಥೆಯು ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಇಂಡಿಗೋ ಸಂಸ್ಥೆಯಿಂದ ಜನರಿಗೆ ತೊಂದರೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಇತ್ತೀಚಿನ ವರ್ಷಗಳಲ್ಲಿ ತೆಗೆದುಕೊಂಡ ಅತ್ಯಂತ ಕಠಿಣ ಕ್ರಮಗಳಲ್ಲಿ ಈ ನೋಟಿಸ್ ಒಂದು ಎನ್ನಲಾಗಿದ್ದು, ಪ್ರಯಾಣಿಕರಿಗೆ ತೀವ್ರ ಅನಾನುಕೂಲತೆ, ಸಂಕಷ್ಟ ಮತ್ತು ತೊಂದರೆ ಉಂಟುಮಾಡಿದ ಹಿನ್ನೆಲೆಯಲ್ಲಿ…
