Devendra Fadnavis: ಬಿಜೆಪಿ ಕಾಂಗ್ರೆಸ್-ಎಐಎಂಐಎಂ ಮೈತ್ರಿ? ಮಹಾರಾಷ್ಟ್ರ ರಾಜಕೀಯದಲ್ಲಿ ತಲ್ಲಣ
ಮುಂಬೈ: ಮಹಾರಾಷ್ಟ್ರದ ಪುರಸಭೆ ಚುನಾವಣೆಯತ್ತ ಎಲ್ಲರ ಚಿತ್ತ ನೆಟ್ಟಿದ್ದು, ಈ ವಿಚಾರವಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ (Devendra Fadnavis) ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಮಹಾರಾಷ್ಟ್ರದ ಅಂಬರ್ನಾಥ್‌ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಏಕೆ ಮತ್ತು ಹೇಗೆ ಮೈತ್ರಿ ಮಾಡಿಕೊಂಡವು ಎನ್ನುವ ವಿಚಾರವನ್ನ ತಿಳಿಸಿದ್ದಾರೆ. ಅನಿರೀಕ್ಷಿತ ಮೈತ್ರಿ ಬಗ್ಗೆ ಫಡ್ನವೀಸ್ ಹೇಳಿದ್ದೇನು? ಅಕೋಟ್‌ನಲ್ಲಿ ಬಿಜೆಪಿ-ಎಐಎಂಐಎಂ ಮೈತ್ರಿಕೂಟದ ಬಗ್ಗೆಅವರು ಮಾಧ್ಯಮಗಳ ಜೊತೆ ಮಾತನಾಡಿದ್ದು, ಅಕೋಟ್ ಬಹಳ ಚಿಕ್ಕ ಪ್ರದೇಶವಾಗಿದೆ. ಆ ಪ್ರದೇಶದಲ್ಲಿ ಸುಮಾರು 17,000 ಮತದಾರರು ಇದ್ದಾರೆ. ನಮಗೆ ಕೆಳ…
