TOP NEWS
Shocking bomb threat e mails to 4 district courts

Bomb Threat: ಕೋರ್ಟ್‌ಗಳಿಗೆ ಸರಣಿ ಇ-ಮೇಲ್ ಬಾಂಬ್ ಬೆದರಿಕೆ: ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಹೈಡ್ರಾಮಾ

ಬೆಂಗಳೂರು: ಕರ್ನಾಟಕದ ವಿವಿಧ ಜಿಲ್ಲಾ ನ್ಯಾಯಾಲಯಗಳನ್ನು ಗುರಿಯಾಗಿಸಿಕೊಂಡು ಕಿಡಿಗೇಡಿಗಳು ನಡೆಸುತ್ತಿರುವ ಹುಸಿ ಬಾಂಬ್ ಇ-ಮೇಲ್ (‌Bomb Threat) ದಂಧೆ ಸಾರ್ವಜನಿಕ ವಲಯದಲ್ಲಿ ಭಾರಿ ತಲ್ಲಣ ಸೃಷ್ಟಿಸಿದೆ. ಜೂನ್ 19ರ ಶುಕ್ರವಾರದಂದು ರಾಜ್ಯದ ನಾಲ್ಕು ಪ್ರಮುಖ ಜಿಲ್ಲೆಗಳಾದ ಬಾಗಲಕೋಟೆ, ದಾವಣಗೆರೆ, ಧಾರವಾಡ ಮತ್ತು ಕೋಲಾರದ ಕೋರ್ಟ್ ಆವರಣಗಳಿಗೆ ಏಕಕಾಲದಲ್ಲಿ ಬೆದರಿಕೆ ಇ-ಮೇಲ್‌ಗಳು ಬಂದಿವೆ. ನ್ಯಾಯಾಲಯಗಳ ಒಳಗೆ ಬಾಂಬ್ ಅಡಗಿಸಿಡಲಾಗಿದೆ ಎಂಬ ಮಾಹಿತಿ ಹರಡುತ್ತಿದ್ದಂತೆ ವಕೀಲರು, ಕಕ್ಷಿದಾರರು ಹಾಗೂ ನ್ಯಾಯಾಂಗ ಸಿಬ್ಬಂದಿ ಪ್ರಾಣಭಯದಿಂದ ಆಚೆ ಓಡಿ ಬಂದಿದ್ದು, ಇಡೀ ಪೊಲೀಸ್…

Read More
Zameer Ahmed Khan audio about conspiracy against congress goes viral

Zameer Ahmed Khan: ದಾವಣಗೆರೆ ಆಂತರಿಕ ಒಳಸಂಚು ವಿವಾದ: ವೈರಲ್ ಆಡಿಯೋ ವಿರುದ್ಧ ಸೈಬರ್ ದೂರು ದಾಖಲಿಸಲು ಜಮೀರ್ ಸಜ್ಜು!

ಬೆಂಗಳೂರು: ದಾವಣಗೆರೆ ದಕ್ಷಿಣ ಉಪಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಆಂತರಿಕ ತಂತ್ರಗಳನ್ನು ಹಳಿತಪ್ಪಿಸಲು ಸಚಿವ ಜಮೀರ್ ಅಹಮದ್ ಖಾನ್ (Zameer Ahmed Khan) ಅವರೇ ಸಮಾಲೋಚನೆ ನಡೆಸಿದ್ದಾರೆ ಎನ್ನಲಾದ ಆಡಿಯೋವೊಂದು ಸದ್ಯ ರಾಜಕೀಯ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ. ಈ ವಿವಾದಾತ್ಮಕ ಆಡಿಯೋ ರೆಕಾರ್ಡಿಂಗ್‌ಗಳು ಈಗಾಗಲೇ ಕಾಂಗ್ರೆಸ್ ಹೈಕಮಾಂಡ್ ಅಂಗಳ ತಲುಪಿದ್ದು, ನವದೆಹಲಿ ಮಟ್ಟದಲ್ಲೂ ಗಂಭೀರ ಚರ್ಚೆಗಳು ಆರಂಭವಾಗಿವೆ. ಆದರೆ, ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ಬಲವಾಗಿ ತಳ್ಳಿಹಾಕಿರುವ ಜಮೀರ್ ಅಹಮದ್ ಖಾನ್, ಈ ಆಡಿಯೋ ಸಂಪೂರ್ಣ ಸುಳ್ಳು…

Read More
Davanagere vachanananda swamiji talks about pocso case after interrogations

Davanagere: ಹರಿಹರ ಠಾಣೆಯಲ್ಲಿ ವಚನಾನಂದ ಶ್ರೀಗಳ ವಿಚಾರಣೆ: ಕಾನೂನು ಗೌರವಿಸುತ್ತೇವೆ ಎಂದ ಸ್ವಾಮೀಜಿ.

ದಾವಣಗೆರೆ: ಪೋಕ್ಸೋ ಕಾಯ್ದೆಯಡಿ ಗಂಭೀರ ಆರೋಪ (Davanagere) ಎದುರಿಸುತ್ತಿರುವ ಹರಿಹರದ ವಚನಾನಂದ ಸ್ವಾಮೀಜಿಯವರನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ನೋಟಿಸ್ ನೀಡಿದ್ದ ಹಿನ್ನೆಲೆಯಲ್ಲಿ ಠಾಣೆಗೆ ಹಾಜರಾಗಿದ್ದ ಶ್ರೀಗಳಿಗೆ ತನಿಖಾಧಿಕಾರಿಗಳು ಸುದೀರ್ಘ 4 ಗಂಟೆಗಳ ಕಾಲ ಪ್ರಶ್ನೆಗಳ ಸುರಿಮಳೆಗರೆದಿದ್ದಾರೆ. ಖಾಕಿ ಪಡೆಯಿಂದ 50ಕ್ಕೂ ಹೆಚ್ಚು ಪ್ರಶ್ನೆಗಳು: ಹರಿಹರ ಗ್ರಾಮಾಂತರ ಠಾಣೆಯ ಡಿವೈಎಸ್‌ಪಿ ಬಸವರಾಜ ಹಾಗೂ ಪಿಎಸ್‌ಐ ಮಂಜುಳಾ ಅವರ ನೇತೃತ್ವದಲ್ಲಿ ನಡೆದ ಈ ವಿಚಾರಣೆಯಲ್ಲಿ, ಸ್ವಾಮೀಜಿಯವರಿಗೆ ಸುಮಾರು 50ಕ್ಕೂ ಹೆಚ್ಚು ಪ್ರಶ್ನೆಗಳನ್ನು ಕೇಳಲಾಗಿದೆ. ಮಠದಲ್ಲಿ ನಡೆದಿದೆ ಎನ್ನಲಾದ ಘಟನೆಗಳ…

Read More
davanagere vachanananda Swamiji gets big relief in pocso case

Davanagere: ಪೋಕ್ಸೋ ಪ್ರಕರಣ, ವಚನಾನಂದ ಸ್ವಾಮೀಜಿಗೆ ಬಿಗ್‌ ರಿಲೀಫ್

ಹರಿಹರದ ವೀರಶೈವ (Davanagere) ಲಿಂಗಾಯತ ಪಂಚಮಸಾಲಿ ಪೀಠದ ಮಾಜಿ ಪೀಠಾಧ್ಯಕ್ಷ ವಚನಾನಂದ ಸ್ವಾಮೀಜಿ ಅವರಿಗೆ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡ ಮಟ್ಟದ ಕಾನೂನು ರಿಲೀಫ್ ಸಿಕ್ಕಿದೆ. ಮಕ್ಕಳ ಮೇಲಿನ ದೌರ್ಜನ್ಯ ಮತ್ತು ದುರ್ಬಳಕೆಯ ಆರೋಪದ ಹಿನ್ನೆಲೆಯಲ್ಲಿ ಬಂಧನದ ಭೀತಿ ಎದುರಿಸುತ್ತಿದ್ದ ಅವರಿಗೆ ದಾವಣಗೆರೆ ಜಿಲ್ಲಾ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಜಾಮೀನು ನೀಡಿದ ನ್ಯಾಯಾಲಯ ತಮ್ಮ ವಿರುದ್ಧದ ಗಂಭೀರ ಆರೋಪಗಳಿಂದಾಗಿ ಬಂಧನಕ್ಕೊಳಗಾಗುವ ಆತಂಕದಲ್ಲಿದ್ದ ಸ್ವಾಮೀಜಿ, ಏಪ್ರಿಲ್ 21ರಂದು ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಭಾರತೀಯ ನಾಗರಿಕ…

Read More
davanagere south mla samarth shamanur first interaction with media

Davanagere: ದಾವಣಗೆರೆ ದಕ್ಷಿಣದಲ್ಲಿ ಸಮರ್ಥ್ ಶಾಮನೂರು ವಿಜಯೋತ್ಸವ: ಅಜ್ಜನ ಹಾದಿಯಲ್ಲೇ ಅಜಾತಶತ್ರು ಸಂಕಲ್ಪ, ಕಾಂಗ್ರೆಸ್ ಬಣ ರಾಜಕೀಯ ಚರ್ಚೆ ಚುರುಕು!

ದಾವಣಗೆರೆ: ದಾವಣಗೆರೆ (Davanagere) ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಸುಮಾರು 7,000 ಮತಗಳ ಅಂತರದಿಂದ ಭರ್ಜರಿ ಜಯ ದಾಖಲಿಸಿರುವ ಸಮರ್ಥ್ ಮಲ್ಲಿಕಾರ್ಜುನ್ (ಶಾಮನೂರು), ಶಾಸಕರಾಗಿ ಆಯ್ಕೆಯಾದ ನಂತರ ಮೊದಲ ಬಾರಿಗೆ ಜನರ ಮುಂದೆ ಬಂದಿದ್ದಾರೆ. ಅಜ್ಜ ಶಾಮನೂರು ಶಿವಶಂಕರಪ್ಪ ಅವರಂತೆಯೇ ಸರ್ವರನ್ನೂ ಪ್ರೀತಿಸುವ ‘ಅಜಾತಶತ್ರು’ ನಾಯಕನಾಗಿ ಹೊರಹೊಮ್ಮುವುದು ನನ್ನ ಆಶಯ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸದಾ ಲಭ್ಯವಿರುವ ಶಾಸಕ: ಕ್ಷೇತ್ರದ ಜನರ ಮೇಲೆ ಅತೀವ ವಿಶ್ವಾಸ ವ್ಯಕ್ತಪಡಿಸಿದ ಸಮರ್ಥ್, “ನನ್ನ ಮೇಲೆ ನಂಬಿಕೆಯಿಟ್ಟು ಮತ ನೀಡಿದ ಜನತೆಗೆ…

Read More
panchamasali peetha controversy prohibitory order imposed

Panchamasali: ಪಂಚಮಸಾಲಿ ಪೀಠದಲ್ಲಿ ಲೆಕ್ಕದ ಸಂಘರ್ಷ: ಜಿಲ್ಲಾಡಳಿತದಿಂದ ನಿಷೇಧಾಜ್ಞೆ

ದಾವಣಗೆರೆ: ಹರಿಹರದ ಪಂಚಮಸಾಲಿ (Panchamasali) ಮಠದಲ್ಲಿ ವಚನಾನಂದ ಶ್ರೀಗಳ ಬೆಂಬಲಿಗರು ಹಾಗೂ ಟ್ರಸ್ಟ್ ಪದಾಧಿಕಾರಿಗಳ ನಡುವಿನ ಭಿನ್ನಮತ ತಾರಕಕ್ಕೇರಿದೆ. ಮಠದ ಒಳಜಗಳ ಬೀದಿ ರಂಪಾಟವಾಗುತ್ತಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತವು ಮಠದ ಆವರಣದಲ್ಲಿ ಒಂದು ತಿಂಗಳ ಕಾಲ ಕಟ್ಟುನಿಟ್ಟಿನ ನಿಷೇಧಾಜ್ಞೆ ಜಾರಿ ಮಾಡಿದೆ. ಸಭೆ-ಸಮಾರಂಭಗಳಿಗೆ ಬ್ರೇಕ್: ಮಾರ್ಚ್ ತಿಂಗಳಿನಿಂದಲೂ ಮಠದ ಎರಡು ಬಣಗಳ ನಡುವೆ ಸಂಘರ್ಷ ನಡೆಯುತ್ತಿದ್ದು, ಪರಸ್ಪರ ಆರೋಪ-ಪ್ರತ್ಯಾರೋಪಗಳು ಹೆಚ್ಚಾಗಿವೆ. ಮಠದ ಆವರಣದಲ್ಲಿ ನಡೆಯುವ ಸಭೆಗಳು ಸಾರ್ವಜನಿಕ ಶಾಂತಿಗೆ ಧಕ್ಕೆ ತರುತ್ತಿರುವುದರಿಂದ, ಮೇ 1 ರಿಂದ…

Read More