Bangladesh: ಬಾಂಗ್ಲಾಗೆ ಐಸಿಸಿಯಿಂದ ಮತ್ತೊಂದು ಶಾಕ್, ಮಾಧ್ಯಮಗಳಿಗೂ ನಿರ್ಬಂಧ
ನವದೆಹಲಿ: ಟೀ 20 ವಿಶ್ವಕಪ್ ವಿಚಾರದಲ್ಲಿ ಐಸಿಸಿ ಹಾಗೂ ಬಾಂಗ್ಲಾದೇಶದ (Bangladesh) ನಡುವಿನ ಗುದ್ದಾಟ ಮುಗಿಯುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಒಂದೆಡೆ ಐಸಿಸಿ ಪಂದ್ಯವನ್ನ ಸ್ಥಳಾಂತರ ಮಾಡದಿರಲು ನಿರ್ಧಾರ ಮಾಡಿದ್ದು, ಈ ನಡುವೆ ನಮ್ಮ ಪತ್ರಕರ್ತರಿಗೆ ಸಹ ಪಂದ್ಯಾವಳಿಗೆ ನಿಷೇಧ ಹೇರಲಾಗಿದೆ ಎಂದು ಬಾಂಗ್ಲಾ ಮಾಧ್ಯಮಗಳು ಆರೋಪ ಮಾಡಿದೆ. ಬಾಂಗ್ಲಾ ಪತ್ರಕರ್ತರ ಅರ್ಜಿ ತಿರಸ್ಕರಿಸಿದ ಐಸಿಸಿ ಭಾರತದಲ್ಲಿ ನಡೆಯುವ ಟೀ 20 ಪಂದ್ಯಗಳನ್ನ ಭದ್ರತೆ ದೃಷ್ಟಿಯಿಂದ ಶ್ರೀಲಂಕಾಗೆ ಸ್ಥಳಾಂತರ ಮಾಡುವಂತೆ ಬಾಂಗ್ಲಾದೇಶ ಐಸಿಸಿಗೆ ಮನವಿ ಸಲ್ಲಿಕೆ ಮಾಡಿತ್ತು….
