Swaraj Kaushal: ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪತಿ ಸ್ವರಾಜ್ ಕೌಶಲ್ ನಿಧನ

Sushma Swaraj husband Swaraj Kaushal passes away

ನವದೆಹಲಿ: ಮಿಜೋರಾಂನ ಮಾಜಿ ರಾಜ್ಯಪಾಲ ಮತ್ತು ದಿವಂಗತ ಬಿಜೆಪಿ ನಾಯಕಿ ಮತ್ತು ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಪತಿ ಸ್ವರಾಜ್ ಕೌಶಲ್ (Swaraj Kaushal) ಗುರುವಾರ ನಿಧನರಾಗಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಸ್ವರಾಜ್‌ ಜೌಶಲ್‌

ಕಳೆದ ಕೆಲ ದಿನಗಳಿಂದ ಸ್ವರಾಜ್‌ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಆದರೆ ಯಾವುದೇ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಕೌಶಲ್ ಅವರನ್ನು ಇಂದು ಮುಂಜಾನೆ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಈ ವಿಚಾರವಾಗಿ  ಅವರ ಮಗಳು ಮತ್ತು ಬಿಜೆಪಿ ಸಂಸದೆ ಬನ್ಸುರಿ ಸ್ವರಾಜ್ ಸೋಷಿಯಲ್‌ ಮೀಡಿಯಾದಲ್ಲಿ ಮಾಹಿತಿ ನೀಡಿದ್ದು, ಪಾಪಾ ನಿಮ್ಮ ವಾತ್ಸಲ್ಯ, ನಿಮ್ಮ ಶಿಸ್ತು, ನಿಮ್ಮ ಸರಳತೆ, ನಿಮ್ಮ ದೇಶಭಕ್ತಿ ಮತ್ತು ನಿಮ್ಮ ಅಪರಿಮಿತ ತಾಳ್ಮೆ ನನ್ನ ಜೀವನದ ಬೆಳಕು, ಅದು ಎಂದಿಗೂ ಮಂಕಾಗುವುದಿಲ್ಲ ಎಂದು ಪೋಸ್ಟ್‌ ಮಾಡಿದ್ದಾರೆ. ಅಲ್ಲದೇ, ಅವರ ಸಾವು ತುಂಬಾ ನೋವನ್ನ ನೀಡಿರುವುದಾಗಿ ಅವರು ಹೇಳಿದ್ದಾರೆ.

ಹಾಗೆಯೇ, ಪೋಸ್ಟ್‌ನಲ್ಲಿ ನಿಮ್ಮ ಮಗಳಾಗಿರುವುದು ನನ್ನ ಜೀವನದ ಅತ್ಯಂತ ದೊಡ್ಡ ಹೆಮ್ಮೆ, ಮತ್ತು ನಿಮ್ಮ ಪರಂಪರೆ, ನಿಮ್ಮ ಮೌಲ್ಯಗಳು ಮತ್ತು ನಿಮ್ಮ ಆಶೀರ್ವಾದ ಮುಂದಿನ ಪ್ರತಿಯೊಂದು ಪ್ರಯಾಣಕ್ಕೂ ಅಡಿಪಾಯವಾಗುತ್ತವೆ” ಎಂದು ಅವರು ಬರೆದುಕೊಂಡಿದ್ದಾರೆ.

ಸ್ವರಾಜ್ ಕೌಶಲ್  ಹಿನ್ನೆಲೆ

ಜುಲೈ 12, 1952 ರಂದು ಜನಿಸಿದ ಸ್ವರಾಜ್ ಕೌಶಲ್ ಅವರು ಸುಪ್ರೀಂ ಕೋರ್ಟ್‌ನ ಅತ್ಯಂತ ಹಿರಿಯ ವಕೀಲರಲ್ಲಿ ಒಬ್ಬರಾಗಿದ್ದರು. ದೆಹಲಿ ವಿಶ್ವವಿದ್ಯಾಲಯ ಮತ್ತು ನಂತರ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದಿದ್ದಾರೆ. ಅವರು 1990 ಮತ್ತು 1993 ರ ನಡುವೆ ಮಿಜೋರಾಂ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ದೇಶದಲ್ಲಿ ಹೆಚ್ಚಾದ ತೆರಿಗೆ ಕಟ್ಟುವವರ ಸಂಖ್ಯೆ

Leave a Reply

Your email address will not be published. Required fields are marked *