ಆಲೂಗಡ್ಡೆ ಪ್ರತಿಯೊಬ್ಬರ ಮನೆಯಲ್ಲೂ ಸಾಮಾನ್ಯವಾಗಿ ಇರುವ ತರಕಾರಿಗಳಲ್ಲಿ ಒಂದು. ಇದು ಎಲ್ಲಾ ಸೀಸನ್‌ನಲ್ಲಿ ಸಿಗುತ್ತದೆ. ಅನೇಕರ ಮನೆಯಲ್ಲಿ ಪ್ರತಿದಿನ ಆಲೂಗೆಡ್ಡೆ ಪದಾರ್ಥಗಳನ್ನ ಮಾಡಲಾಗುತ್ತದೆ. ಭಾರತದಲ್ಲಿ ಆಲೂಗಡ್ಡೆ (Potato) ಒಂದು ಶ್ರೀಮಂತ ಬೆಳೆಯಾಗಿದ್ದು, ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎನ್ನಲಾಗುತ್ತದೆ.
ಆಲೂಗಡ್ಡೆ ವಿವಿಧ ರೀತಿಯ ಪೋಷಕಾಂಶಗಳನ್ನು ಒದಗಿಸುತ್ತದೆ. ಇದರಲ್ಲಿ ಕ್ಯಾಲೋರಿಗಳು, ಪ್ರೋಟೀನ್ , ಕಾರ್ಬೋಹೈಡ್ರೇಟ್‌ಗಳು, ಫೈಬರ್ ಮತ್ತು ವಿಟಮಿನ್ ಸಿ, ವಿಟಮಿನ್ ಬಿ 6, ಪೊಟ್ಯಾಸಿಯಮ್ ಮತ್ತು ಮ್ಯಾಂಗನೀಸ್ ನಂತಹ ಅಗತ್ಯ ಪೋಷಕಾಂಶಗಳಿದ್ದು, ಅನೇಕ ಆರೋಗ್ಯ ಪ್ರಯೋಜನಗಳನ್ನ ನೀಡುತ್ತದೆ. ಅನೇಕ ಜನರು ಡಯಾಬಿಟೀಸ್ ಇರುವವರು ಆಲೂಗೆಡ್ಡೆ ಸೇವನೆ ಮಾಡಬಾರದು ಎನ್ನುತ್ತಾರೆ. ಆದರೆ ನಿಜಕ್ಕೂ ಮಧುಮೇಹಿಗಳು ಆಲೂಯಿಂದ ದೂರ ಇರಬೇಕಾ? ಈ ಆಲೂ ಸೇವನೆ ಮಾಡುವುದರಿಂದ ಏನೆಲ್ಲಾ ಲಾಭವಿದೆ ಎಂಬುದು ಇಲ್ಲಿದೆ.
ಆಲೂಗಡ್ಡೆಯಲ್ಲಿ ನಿರೋಧಕ ಪಿಷ್ಟವಿದೆ. ಈ ಪಿಷ್ಟವು ಒಡೆಯುವುದಿಲ್ಲ . ಇದು ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗಾಗಿ ಡಯಾಬಿಟೀಸ್ ಇರುವವರು ಧೈರ್ಯವಾಗಿ ಸೇವನೆ ಮಾಡಬಹುದು. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಉತ್ಕರ್ಷಣ ನಿರೋಧಕಗಳಿದೆ
ಆಲೂಗಡ್ಡೆಯಲ್ಲಿ ಫ್ಲೇವನಾಯ್ಡ್‌ಗಳು, ಕ್ಯಾರೊಟಿನಾಯ್ಡ್‌ಗಳು ಮತ್ತು ಫೀನಾಲಿಕ್ ಆಮ್ಲಗಳಂತಹ ಸಂಯುಕ್ತಗಳು ಸಮೃದ್ಧವಾಗಿವೆ. ಈ ಸಂಯುಕ್ತಗಳು ದೇಹದಲ್ಲಿ ಉತ್ಕರ್ಷಣ ನಿರೋಧಕಗಳಾಗಿ ಕಾರ್ಯನಿರ್ವಹಿಸುತ್ತವೆ, ಫ್ರೀ ರಾಡಿಕಲ್‌ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಆಲೂಗಡ್ಡೆಯಲ್ಲಿರುವ ಉತ್ಕರ್ಷಣ ನಿರೋಧಕಗಳು ಯಕೃತ್ತು ಮತ್ತು ಹೊಟ್ಟೆಯ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಜೀರ್ಣಕ್ರಿಯೆಗೆ ಸಹಾಯಕ
ಆಲೂಗಡ್ಡೆಯಲ್ಲಿರುವ ನಿರೋಧಕ ಪಿಷ್ಟವು ಜೀರ್ಣಕ್ರಿಯೆಗೆ ಸಹಾಯಕವಾಗಿದೆ. ಇದು ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳಿಗೆ ಆಹಾರವಾಗುತ್ತದೆ. ಮುಖ್ಯವಾಗಿ ಆಲೂಗೆಡ್ಡೆಯು ದೊಡ್ಡ ಕರುಳಿನಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ.
