ವಾಲ್ನಟ್ಸ್ ಡ್ರೈ ಫ್ರೂಟ್ಸ್‌ಗಳ ಲಿಸ್ಟ್‌ನಲ್ಲಿ ಬಹಳ ಮುಖ್ಯವಾದ ಸ್ಥಾನವನ್ನ ಹೊಂದಿದೆ. ಇದು ನೋಡಲು ಮಾನವ ಮೆದುಳನ್ನು ಹೋಲುತ್ತದೆ. ಅವು ನಿಜವಾಗಿಯೂ ಮೆದುಳಿನ ಆರೋಗ್ಯಕ್ಕೆ ಪ್ರಕೃತಿಯ ಅಮೂಲ್ಯ ಕೊಡುಗೆ ಎನ್ನಲಾಗುತ್ತದೆ. ವಾಲ್ನಟ್ಸ್ (Walnut Benefits) ಮೆದುಳಿನ ಕಾರ್ಯವನ್ನು ನಿರ್ದಿಷ್ಟವಾಗಿ ಹೆಚ್ಚಿಸುವ ಪೋಷಕಾಂಶಗಳ ಶಕ್ತಿಕೇಂದ್ರವಾಗಿದೆ. ಇದನ್ನ ಸೇವನೆ ಮಾಡುವುದರಿಂದ ಏನೆಲ್ಲಾ ಲಾಭಗಳು ಸಿಗುತ್ತದೆ ಎಂಬುದು ಇಲ್ಲಿದೆ.
ನೆನಪಿನ ಶಕ್ತಿ ಹೆಚ್ಚು ಮಾಡುತ್ತದೆ
ವಾಲ್ನಟ್ ಸೇವನೆಯು ಸ್ಮರಣಶಕ್ತಿ, ಏಕಾಗ್ರತೆ ಮತ್ತು ಕಲಿಕೆಯನ್ನು ಸುಧಾರಿಸುತ್ತದೆ. ವಾಲ್ನಟ್ಗಳು ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳನ್ನ ಹೊಂದಿದೆ. ಇದು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಮೆದುಳಿನ ಕೋಶಗಳನ್ನು ಹಾನಿಯಿಂದ ರಕ್ಷಿಸುತ್ತದೆ, ಬುದ್ಧಿಮಾಂದ್ಯತೆ ಮತ್ತು ಆಲ್ಝೈಮರ್ನಂತಹ ನರ ಕ್ಷೀಣಗೊಳ್ಳುವ ಕಾಯಿಲೆಗಳ ಅಪಾಯವನ್ನ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಮೆದುಳಿನ ನರಗಳಿಗೆ ಸಹಾಯಕ
ವಾಲ್ನಟ್ಸ್ ಒಮೆಗಾ-3 ಆಲ್ಫಾ-ಲಿನೋಲೆನಿಕ್ ಆಮ್ಲ (ALA) ದಲ್ಲಿ ಸಮೃದ್ಧವಾಗಿದೆ. ಆರೋಗ್ಯಕರ ಮೆದುಳಿನ ನರಕೋಶಗಳನ್ನು ಕಾಪಾಡಿಕೊಳ್ಳಲು ಇದು ಸಹಾಯಕ. ವಾಲ್‌ನಟ್ಸ್ ಪಾಲಿಫಿನಾಲ್‌ಗಳು ಸೇರಿದಂತೆ ವಿವಿಧ ರೀತಿಯ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಈ ಉತ್ಕರ್ಷಣ ನಿರೋಧಕಗಳು ಮೆದುಳಿನ ಕೋಶಗಳನ್ನು ಸ್ವತಂತ್ರ ರಾಡಿಕಲ್‌ಗಳಿಂದ ಉಂಟಾಗುವ ಹಾನಿಯಿಂದ ರಕ್ಷಿಸುತ್ತವೆ.
ಉತ್ತಮ ನಿದ್ರೆಗೆ ಸಹಾಯಕ
ವಾಲ್ನಟ್ಸ್ ಮೆಲಟೋನಿನ್ ಎಂಬ ಹಾರ್ಮೋನ್ ನ ನೈಸರ್ಗಿಕ ಮೂಲವಾಗಿದ್ದು, ಇದು ನಿದ್ರೆಯ ಸಮಸ್ಯೆಗೆ ಪರಿಹಾರ ನೀಡುತ್ತದೆ. ಯಾರಿಗಾದರೂ ನಿದ್ರೆಯ ತೊಂದರೆ ಇದ್ದರೆ ಈ ವಾಲ್ನಟ್ಸ್ ಸೇವನೆ ಮಾಡಬಹುದು.
ಇದರ ಜೊತೆಗೆ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುವ ಒಳ್ಳೆಯ ಕೊಲೆಸ್ಟ್ರಾಲ್ (HDL) ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ತೂಕ ಇಳಿಕೆ ಸಹಾಯಕ ಈ ರಾಗಿ ಸೂಪ್, ಮನೆಯಲ್ಲಿ ಸುಲಭವಾಗಿ ಮಾಡಿ
